ಬೆಂಗಳೂರು: ಮೊದಲ ಡೋಸ್ ವ್ಯಾಕ್ಸಿನೇಷನ್ ಹಾಕಿಸಿಕೊಂಡವರ ಸಂಖ್ಯೆಯಲ್ಲಿ ಕರ್ನಾಟಕ ರಾಜ್ಯವು ಮೊದಲ ಸ್ಥಾನಕ್ಕೇರಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಸುಧಾಕರ್ ಹೇಳಿದ್ದಾರೆ.
‘ಕೂ’ ಮಾಡಿದ ಅವರು, ದೇಶದ ಇತರ ಪ್ರಮುಖ ರಾಜ್ಯಗಳಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಡಿಸೆಂಬರ್ 08ರವರೆಗೆ ಶೇಕಡಾ 94. 38 ರಷ್ಟು ಮೊದಲ ಡೋಸ್ ವ್ಯಾಕ್ಸಿನೇಷನ್ ಆಗಿದೆ ಎಂದು ಅವರು ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ಜರ್ಮನಿಯಿಂದ ಬೆಂಗಳೂರಿಗೆ ಬಂದ ಕೋವಿಡ್ ಸೋಂಕಿತ ಪರಾರಿ : ಸೋಂಕಿತ ನಾಪತ್ತೆಯಿಂದ ಆತಂಕ ಸೃಷ್ಟಿ
ಇದಕ್ಕಿಂತ ಮೊದಲು ಗುಜರಾತ್ ರಾಜ್ಯವು ಒಂದು ಡೋಸ್ ವ್ಯಾಕ್ಸಿನೇಶನ್ ನಲ್ಲಿ ಮೊದಲ ಸ್ಥಾನದಲ್ಲಿತ್ತು. ಗುಜರಾತ್ ನಲ್ಲಿ ಶೇ.94.37 ರಷ್ಟು ಮೊದಲ ಡೋಸ್ ವ್ಯಾಕ್ಸಿನೇಶನ್ ಆಗಿದ್ದರೆ, ಕರ್ನಾಟಕದಲ್ಲಿ ಶೇ. 94.38 ಲಸಿಕೆ ನೀಡಲಾಗಿದೆ.
Related Articles
Advertisement– Dr. Sudhakar K (@drsudhakark.official) 9 Dec 2021
ದೇಶದ ಒಟ್ಟಾರೆ ಕೋವಿಡ್ 19 ಮರಣ ಪ್ರಕರಣಗಳಲ್ಲಿ ಕರ್ನಾಟಕ ಮೂರನೇ ಸ್ಥಾನಕ್ಕೆ ಇಳಿದಿದೆ. ಕರ್ನಾಟಕದಲ್ಲಿ 38,185 ಕೋವಿಡ್ ಮರಣಗಳಿದ್ದರೆ, ಕೇರಳ 38,353 ಸಂಖ್ಯೆಯ ಪರಿಷ್ಕೃತ ದಾಖಲೆಗಳೊಂದಿಗೆ ಎರಡನೇ ಸ್ಥಾನಕ್ಕೆ ಏರಿದೆ