Advertisement

Karnataka MLA ಎಚ್‌.ಡಿ.ರೇವಣ್ಣ ಬಂಧನ: ಸ್ಪೀಕರ್‌ಗಿಲ್ಲ ಇನ್ನೂ ಮಾಹಿತಿ

11:54 PM May 04, 2024 | Team Udayavani |

ಬೆಂಗಳೂರು: ಮಾಜಿ ಸಚಿವ ಎಚ್‌.ಡಿ. ರೇವಣ್ಣ ಅವರು ಹಾಲಿ ಶಾಸಕರೂ ಆಗಿರುವುದರಿಂದ ಬಂಧನದ ವಿಚಾರವನ್ನು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ಗೆ ಎಸ್‌ಐಟಿ ಅಧಿಕಾರಿಗಳು ನೀಡಬೇಕಿದೆ. ಆದರೆ ಇದುವರೆಗೆ ಈ ಪ್ರಕ್ರಿಯೆ ನಡೆದಿಲ್ಲ.

Advertisement

ಮಹಿಳೆಯೊಬ್ಬರ ಅಪಹರಣ ಪ್ರಕರಣದಲ್ಲಿ ವಿಶೇಷ ತನಿಖಾ ತಂಡದ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿರುವ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರು ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ.
ಶಾಸಕರ ಬಂಧನ ಪ್ರಕ್ರಿಯೆಯು ವಿಧಾನಸೌಧ ಅಥವಾ ವಿಕಾಸಸೌಧ ಕಟ್ಟಡದಲ್ಲಿ ಆಗುವ ಸಂದರ್ಭ ಇದ್ದಿದ್ದರೆ ಸ್ಪೀಕರ್‌ ಅವರ ಅನುಮತಿ ಪಡೆದು ಬಂಧಿಸಬೇಕಿತ್ತು. ಈ ಪ್ರಕರಣದಲ್ಲಿ ಸ್ಪೀಕರ್‌ ಅವರ ಕಾರ್ಯವ್ಯಾಪ್ತಿ ಮೀರಿದ ಸ್ಥಳದಲ್ಲಿ ಬಂಧನ ಆಗಿರುವುದರಿಂದ ಅನುಮತಿ ಪಡೆಯಬೇಕೆಂದಿಲ್ಲ. ಆದರೆ ಮಾಹಿತಿಯನ್ನಾದರೂ ಕೊಡಲೇಬೇಕು. ಸ್ಪೀಕರ್‌ಗೆ ಶಾಸಕರ ಬಂಧನದ ಮಾಹಿತಿ ನೀಡಬೇಕೆಂಬ ನಿಯಮ ಇದೆಯೇ ಹೊರತು, ಬಂಧನವಾದ ಇಂತಿಷ್ಟೇ ಸಮಯದಲ್ಲಿ ತಿಳಿಸಬೇಕೆಂಬ ಕಾನೂನು ಇಲ್ಲ. ಹೀಗಾಗಿ ಸದ್ಯ ರೇವಣ್ಣರ ವಿಚಾರಣೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ ಅಧಿಕಾರಿಗಳು ರವಿವಾರ ಅಥವಾ ಸೋಮವಾರ ಅಧಿಕೃತವಾಗಿ ಸ್ಪೀಕರ್‌ಗೆ ಪತ್ರ ಬರೆದು ಮಾಹಿತಿ ನೀಡುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next