Advertisement
ರಾಜ್ಯದಲ್ಲಿ ಅತೀ ಹೆಚ್ಚು ಹಾಲು ಸಂಗ್ರಹಣೆ ಮಾಡುವ ಒಕ್ಕೂಟಗಳಲ್ಲಿ ಮೊದಲ ಸ್ಥಾನದಲ್ಲಿರುವ ಬೆಂಗಳೂರು ಹಾಲು ಒಕ್ಕೂಟವು ಕಳೆದ ಎಪ್ರಿಲ್‌ನಿಂದ ಸೆಪ್ಟಂಬರ್‌ವರೆಗೆ ನಿರಂತರ ನಷ್ಟ ಅನುಭವಿಸುತ್ತಾ ಬಂದಿದ್ದು, ಅಕ್ಟೋಬರ್‌ನಿಂದೀಚೆಗೆ ಸುಧಾರಿಸಿಕೊಳ್ಳುತ್ತಿದೆ. ಆದರೆ ಈಗಲೂ ಬೆಂಗಳೂರು ಒಕ್ಕೂಟ 58.34 ಕೋಟಿ ರೂ. ನಿವ್ವಳ ನಷ್ಟದಲ್ಲಿದೆ. ಕೋಲಾರ ಹಾಲು ಒಕ್ಕೂಟವೂ ಎಪ್ರಿಲ್‌ನಿಂದ ಸೆಪ್ಟಂಬರ್‌ವರೆಗೆ ನಷ್ಟ ಅನುಭವಿಸಿದ್ದು, ಪ್ರಸ್ತುತ 21.65 ಕೋಟಿ ರೂ. ನಷ್ಟದಲ್ಲಿದ್ದರೆ, ಮಂಡ್ಯ ಹಾಲು ಒಕ್ಕೂಟ 31.81 ಕೋಟಿ ರೂ. ನಷ್ಟದಲ್ಲಿದೆ.
ಬಹುಪಾಲು ಒಕ್ಕೂಟಗಳು ನಷ್ಟದಲ್ಲಿ ಸಾಗಿದ್ದರೆ ಐದು ಒಕ್ಕೂಟಗಳು 2-3 ತಿಂಗಳು ನಷ್ಟಕ್ಕೆ ಸಿಲುಕಿದರೂ ಅನಂತರ ಸುಧಾರಿಸಿಕೊಂಡು ಲಾಭದ ಹಾದಿಗೆ ಮರಳಿವೆ. ದಕ್ಷಿಣ ಕನ್ನಡ ಹಾಲು ಒಕ್ಕೂಟ 2.38 ಕೋಟಿ ರೂ. ಲಾಭದಲ್ಲಿದ್ದರೆ, ಕಲಬುರಗಿ ಹಾಲು ಒಕ್ಕೂಟ 2.05 ಕೋಟಿ ರೂ., ಧಾರವಾಡ – 1.02 ಕೋಟಿ ರೂ., ಹಾಸನ ಹಾಲು ಒಕ್ಕೂಟ 87 ಲಕ್ಷ ರೂ, ಬೆಳಗಾವಿ ಹಾಲು ಒಕ್ಕೂಟವು 31.47 ಲಕ್ಷ ರೂ. ಲಾಭದಲ್ಲಿವೆ.
Related Articles
Advertisement