ಬೆಂಗಳೂರು: ಕರ್ನಾಟಕ ಮಾಧ್ಯಮ ಅಕಾಡೆಮಿಯ 2016ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ಹಿರಿಯ ಪತ್ರಕರ್ತ ಎಚ್.ಆರ್. ಶ್ರೀಶ, “ಉದಯವಾಣಿ’ ತುಮಕೂರು ವರದಿಗಾರ ಚೀ.ನಿ. ಪುರಷೋತ್ತಮ ಸೇರಿದಂತೆ 15 ಮಂದಿ ಪತ್ರಕರ್ತರು ಪ್ರಶಸ್ತಿಗೆ ಭಾಜನರಾಗಿದ್ದಾರೆ.
2016ನೇ ಸಾಲಿನ ಅತ್ಯುತ್ತಮ ಜಿಲ್ಲಾ ಪತ್ರಿಕೆಗೆ ನೀಡುವ “ಆಂದೋಲನ ಪ್ರಶಸ್ತಿ’, ಸಾಮಾಜಿಕ ಸಮಸ್ಯೆ ಲೇಖನಕ್ಕೆ ನೀಡುವ “ಅಭಿಮಾನಿ ಪ್ರಶಸ್ತಿ’, ಮಾನವೀಯ ಸಮಸ್ಯೆಗೆ ನೀಡುವ “ಮೈಸೂರು ದಿಗಂತ’ ಪ್ರಶಸ್ತಿ, ಅಭಿಮಾನಿ ಸಂಸ್ಥೆ ಸ್ಥಾಪಿಸಿರುವ “ಅರಗಿಣಿ’ ಹಾಗೂ ಪತ್ರಕರ್ತ ಕೆ. ಶಿವಕುಮಾರ್ ಸ್ಥಾಪಿಸಿರುವ ಡಾ.ಬಿ.ಆರ್. ಅಂಬೇಡ್ಕರ್ “ಮೂಕನಾಯಕ ಪ್ರಶಸ್ತಿ’ಗಳಿಗೆ ಸಾಧಕರನ್ನು ಆಯ್ಕೆ ಮಾಡಲಾಗಿದೆ.
ಅಕಾಡೆಮಿ ಪ್ರಶಸ್ತಿ: ಚೀ.ನಿ. ಪುರಷೋತ್ತಮ-ತುಮಕೂರು, ಎಚ್.ಆರ್. ಶ್ರೀಶ-ಬೆಂಗಳೂರು, ಶಾಂತಲಾ ಧರ್ಮರಾಜ್-ಮೈಸೂರು, ಜೀ. ವೀರಣ್ಣ-ಬಳ್ಳಾರಿ, ಸಿದ್ದಿಕಿ ಅಲ್ದೂರಿ-ಚಿಕ್ಕಮಗಳೂರು, ರೊನಾಲ್ಡ್ ಫರ್ನಾಂಡಿಸ್-ಮಂಗಳೂರು, ಎ.ಸಿ. ಪ್ರಭಾಕರ-ಚಾಮರಾಜನಗರ, ಉಜ್ಜಿನಿ ರುದ್ರಪ್ಪ-ಕೊಪ್ಪಳ, ಹೇಮಂತಕುಮಾರ್-ಬೆಂಗಳೂರು, ರಾಮಸ್ವಾಮಿ-ರಾಮನಗರ, ಶಂಕರಪ್ಪ ಹುಸನಪ್ಪ ಚಲುವಾದಿ-ಬಾಗಲಕೋಟೆ, ನಾಗರಾಜ ಸುಣಗಾರ-ಧಾರವಾಡ, ಅನಿಲಕುಮಾರ ಹೊಸಮನಿ-ವಿಜಯಪುರ, ಮಾಲತೇಶ ಅಂಗೂರ-ಹಾವೇರಿ, ಕೆ.ಎಚ್. ಚಂದ್ರು-ಮೈಸೂರು.
ಅತ್ಯುತ್ತಮ ಜಿಲ್ಲಾ ಪತ್ರಿಕೆ-ಶಿವಮೊಗ್ಗ ಟೈಮ್ಸ್. ಅಭಿಮಾನಿ ಪ್ರಶಸ್ತಿ-ಚಂದ್ರಶೇಖರ ಮೋರೆ (ಉದಯವಾಣಿ). ಮೈಸೂರು ದಿಗಂತ ಪ್ರಶಸ್ತಿ-ಸಿ.ಜಿ. ರಾಜೀವ (ವಿಜಯ ಕರ್ನಾಟಕ). ಅರಗಿಣಿ ಪ್ರಶಸ್ತಿ-ಸ್ನೇಹಪ್ರೀಯ ನಾಗರಾಜ್. ಡಾ. ಬಿ.ಆರ್. ಅಂಬೇಡ್ಕರ್ ಮೂಕನಾಯಕ ಪ್ರಶಸ್ತಿಗೆ ಡಾ. ನಟರಾಜ ಹುಳಿಯಾರ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಮಾಧ್ಯಮ ಅಕಾಡೆಮಿ ಪ್ರಶಸ್ತಿಯು 10 ಸಾವಿರ ರೂ. ನಗದು, ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ. ಇತರೆ ದತ್ತಿ ಪ್ರಶಸ್ತಿಗಳು ಸಹ 10 ಸಾವಿರ ನಗದು ಒಳಗೊಂಡಿರುತ್ತವೆ. ಪ್ರಶಸ್ತಿ ಪ್ರದಾನ ದಿನಾಂಕ ಸದ್ಯದಲ್ಲೇ ನಿಗದಿಗೊಳಿಸಲಾಗುವುದು. ಸಮಾರಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಲಾಗುವುದು ಎಂದು ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ.ಸಿದ್ದರಾಜು ತಿಳಿಸಿದ್ದಾರೆ.