Advertisement
ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಕಾನೂನು ಸಚಿವ ಎಚ್.ಕೆ.ಪಾಟೀಲ್, ಇನ್ನು ಮುಂದೆ ವಿವಾಹ ನೋಂದಣಿ ಪ್ರಕ್ರಿಯೆಗಾಗಿ ಉಪ ನೋಂದಣಾಧಿಕಾರಿ ಕಚೇರಿ ಮುಂದೆ ನಿಲ್ಲಬೇಕಾಗಿಲ್ಲ. ಕಾವೇರಿ-2.0 ತಂತ್ರಾಂಶದಲ್ಲಿ ಆನ್‌ಲೈನ್ ಮೂಲಕ ನೋಂದಣಿ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ. ಅಲ್ಲದೆ ಗ್ರಾ.ಪಂ.ಗಳ ಬಾಪೂಜಿ ಸೇವಾ ಕೇಂದ್ರ, ಗ್ರಾಮಒನ್ ಕೇಂದ್ರಗಳಲ್ಲೂ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು.
2023-24ನೇ ಸಾಲಿಗೆ 93 ಅಭಿವೃದ್ಧಿ ಆಕಾಂಕ್ಷಿ ತಾಲೂಕುಗಳಲ್ಲಿರುವ 104 ಕರ್ನಾಟಕ ಪಬ್ಲಿಕ್ ಶಾಲೆ (ಕೆಪಿಎಸ್)ಗಳಿಗೆ 65 ಕೋಟಿ ರೂ. ವೆಚ್ಚದಲ್ಲಿ ಕಲಿಕಾ ವಾತಾವರಣ ಅಭಿವೃದ್ಧಿಪಡಿಸಲು ಅನುಮೋದಿಸಿದ್ದು, ಅಸ್ತಿತ್ವದಲ್ಲಿರುವ 82 ಕೆಪಿಎಸ್‌ಗಳಿಗೆ ಕಲಿಕಾ ಘಟಕಗಳನ್ನು ಒದಗಿಸುವುದು ಹಾಗೂ 22 ತಾಲೂಕು ಗಳಲ್ಲಿ ಹೊಸ ಕೆಪಿಎಸ್‌ಗಳನ್ನು ಆರಂಭಿಸುವುದೂ ಇದರಲ್ಲಿ ಅಡಕವಾಗಿದೆ. 10 ಮಹಾನಗರ ಪಾಲಿಕೆ ಹಾಗೂ ಆಯ್ದ 24 ನಗರಸಭೆಯಲ್ಲಿ ತಲಾ ಒಂದರಂತೆ ವಿದ್ಯುತ್ ಮತ್ತು ಅನಿಲ ಆಧಾರಿತ ಚಿತಾಗಾರಗಳನ್ನು ನಿರ್ಮಿಸಲು ಒಪ್ಪಿದೆ. ರಾಜ್ಯಪಾಲರ ಭಾಷಣ ಕರಡು ತಯಾರಿಸಲು ಸಿಎಂಗೆ ಅಧಿಕಾರ.
2023ರ ಡಿ.31 ರೊಳಗೆ ಸಹಕಾರ ಸಂಘಗಳ ಮೂಲಕ ರೈತರು ಪಡೆದ ಮಧ್ಯಮಾವಧಿ, ದೀರ್ಘಾವಧಿ ಸಾಲದ ಅಸಲು ಕಟ್ಟಿದವರ ಬಡ್ಡಿ ಮನ್ನಾ ಮಾಡಲು 440 ಕೋಟಿ ರೂ.
ಸಿ.ಎಂ.ಲಿಂಗಪ್ಪ ಅವರಿಗೆ ಗುತ್ತಿಗೆ ನೀಡಿದ್ದ 15×24 ಅಳತೆಯ ಸಿಎ ನಿವೇಶನವನ್ನು ಅವರಿಗೇ ಮಾರಾಟ ಮಾಡಲು ಒಪ್ಪಿಗೆ.
ಪೊಲೀಸ್ ವಾಹನಗಳಿಗೆ ಮುಂದಿನ ಮೂರು ವರ್ಷದವ ರೆಗೆ 170 ಕೋಟಿ ರೂ. ಮಿತಿ ಯೊಂದಿಗೆ ಪೆಟ್ರೋ ಕಾರ್ಡ್ ಮೂಲಕ ಇಂಧನ ಖರೀದಿ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪರಿಶಿಷ್ಟ ಜಾತಿಯ 18 ಸರಕಾರಿ ವಿದ್ಯಾರ್ಥಿ ನಿಲಯಗಳಿಗೆ ಸ್ವಂತ ಕಟ್ಟಡ ನಿರ್ಮಿಸಲು 126 ಕೋಟಿ ರೂ.ಗಳಿಗೆ ಸಮ್ಮತಿ.