ನವದೆಹಲಿ: ಇಡೀ ದೇಶದಲ್ಲೇ ಕರ್ನಾಟಕದಲ್ಲಿ ಮದ್ಯದ ದರ ಅತ್ಯಂತ ದುಬಾರಿಯಾಗಿದೆ. ನೆರೆರಾಜ್ಯ ಗೋವಾದಲ್ಲಿ ಅತಿ ಅಗ್ಗದ ದರದಲ್ಲಿ ಮದ್ಯ ಸಿಗುತ್ತಿದೆ.
ದಿ ಇಂಟರ್‌ನ್ಯಾಷನಲ್ ಸ್ಪಿರಿಟ್ಸ್ ಆ್ಯಂಡ್ ವೈನ್ಸ್ ಅಸೋಸಿಯೇಶನ್ ಆಫ್ ಇಂಡಿಯಾದ ವಿಶ್ಲೇಷಣೆಯಿಂದ ಈ ಮಾಹಿತಿ ಹೊರಬಿದ್ದಿದೆ.
ವಿಸ್ಕಿ, ರಮ್, ವೋಡ್ಕಾ, ಜಿನ್ ಸೇರಿದಂತೆ ಒಂದು ಬಾಟಲಿ ಮದ್ಯಕ್ಕೆ ಗೋವಾದಲ್ಲಿ ಸರಾಸರಿ 100ರೂ. ಇದ್ದರೆ, ಅದೇ ಮದ್ಯಕ್ಕೆ ಕರ್ನಾಟಕದಲ್ಲಿ ಬರೋಬ್ಬರಿ 513ರೂ. ಇದೆ. ಅತಿ ಹೆಚ್ಚಿನ ತೆರಿಗೆಯೇ ಇದಕ್ಕೆ ಕಾರಣ. ಕರ್ನಾಟಕ ಸರ್ಕಾರವು ಮದ್ಯದ ಮೇಲೆ ಶೇ.83ರಷ್ಟು ತೆರಿಗೆ ವಿಧಿಸುತ್ತದೆ.
ಇದೇ ರೀತಿ, ದೆಹಲಿಯಲ್ಲಿ ಅದೇ ಬಾಟಲಿ ಮದ್ಯಕ್ಕೆ 134ರೂ. ಇದ್ದು, ಹರ್ಯಾಣದಲ್ಲಿ 147ರೂ., ಉತ್ತರ ಪ್ರದೇಶದಲ್ಲಿ 197ರೂ., ರಾಜಸ್ಥಾನದಲ್ಲಿ 213ರೂ., ಮಹಾರಾಷ್ಟ್ರದಲ್ಲಿ 226 ರೂ. ಮತ್ತು ತೆಲಂಗಾಣದಲ್ಲಿ 246ರೂ. ಇದೆ.
ಇನ್ನೊಂದೆಡೆ, ಮದ್ಯದ ಮೇಲೆ ರಾಜ್ಯ ಸರ್ಕಾರಗಳು ವಿಧಿಸುವ ತೆರಿಗೆಯು ಗೋವಾದಲ್ಲಿ ಶೇ.49, ದೆಹಲಿಯಲ್ಲಿ ಶೇ.62, ಹರ್ಯಾಣದಲ್ಲಿ ಶೇ.47, ಉತ್ತರ ಪ್ರದೇಶದಲ್ಲಿ ಶೇ.66, ರಾಜಸ್ಥಾನದಲ್ಲಿ ಶೇ.69, ಮಹಾರಾಷ್ಟ್ರದಲ್ಲಿ ಶೇ.71 ಹಾಗೂ ತೆಲಂಗಾಣದಲ್ಲಿ ಶೇ.68ರಷ್ಟು ಇದೆ.
ರಾಜ್ಯ ಎಂಆರ್‌ಪಿ ಸೂಚ್ಯಂಕ(ರೂ.) ಎಂಆರ್‌ಪಿ ಮೇಲಿನ ರಾಜ್ಯಗಳ ತೆರಿಗೆ(ಶೇಕಡಾವಾರು)
ಕರ್ನಾಟಕ 513 83
ತೆಲಂಗಾಣ 246 68
ಮಹಾರಾಷ್ಟ್ರ 226 71
ರಾಜಸ್ಥಾನ 213 69
ಉತ್ತರ ಪ್ರದೇಶ 197 66
ಹರ್ಯಾಣ 147 47
ದೆಹಲಿ 134 62
ಗೋವಾ 100 49