Advertisement

ಹಿರಿಯರದಲ್ಲ ,ಕಿರಿಯರ ಮನೆ! ವಿಧಾನ ಪರಿಷತ್‌ನಲ್ಲಿ ಕುಟುಂಬಸ್ಥರ ದರ್ಬಾರು

01:02 AM Dec 15, 2021 | Team Udayavani |

ಬೆಂಗಳೂರು: ಹಿರಿಯರ ಮನೆ ಎಂಬ ಖ್ಯಾತಿ ಹೊತ್ತಿರುವ ವಿಧಾನಪರಿಷತ್‌ನಲ್ಲಿ ಈಗ ಕಿರಿಯರ ದರ್ಬಾರ್‌!

Advertisement

ಹೌದು, ಕಿರಿಯರು ಎಂದರೆ ವಯಸ್ಸಿನಲ್ಲಿ ಸಣ್ಣವರು ಎಂದಲ್ಲ. ವಿಧಾನಸಭೆಯ ಸದಸ್ಯರಾಗಿರುವ ಶಾಸಕರ ಸಹೋದರರು, ಮಕ್ಕಳು ಈಗಿನ ಪರಿಷತ್‌ ಚುನಾವಣೆಯಲ್ಲಿ ಗೆದ್ದು ಮೇಲ್ಮನೆ ಪ್ರವೇಶಿಸಿದ್ದಾರೆ. 20 ಕ್ಷೇತ್ರಗಳ 25 ಸ್ಥಾನಗಳಿಗೆ ನಡೆದ ಪರಿಷತ್‌ ಚುನಾವಣೆಯಲ್ಲಿ ಹನ್ನೊಂದು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರುವವರು ಮೂರು ರಾಜಕೀಯ ಪಕ್ಷಗಳ ನಾಯಕರ ಸಂಬಂಧಿಕರೇ ಆಗಿದ್ದಾರೆ.

ಎಲ್ಲ ಕಡೆ ಸದಸ್ಯತ್ವ!|
ದೇವೇಗೌಡ ಕುಟುಂಬ ಸದಸ್ಯರು ವಿಧಾನ ಮಂಡಲದ ಉಭಯ ಸದನ, ಲೋಕಸಭೆ- ರಾಜ್ಯಸಭೆಗಳಲ್ಲಿ ಪ್ರತಿನಿಧಿಗಳಾಗಿದ್ದಾರೆ. ಕುಮಾರ ಸ್ವಾಮಿ, ಅನಿತಾ ಕುಮಾರಸ್ವಾಮಿ, ರೇವಣ್ಣ ವಿಧಾನಸಭೆ, ಸೂರಜ್‌ ರೇವಣ್ಣ ವಿಧಾನಪರಿಷತ್‌, ಪ್ರಜ್ವಲ್‌ ರೇವಣ್ಣ ಲೋಕ ಸಭೆ, ದೇವೇಗೌಡರು ರಾಜ್ಯಸಭೆಯಲ್ಲಿದ್ದಾರೆ.

ನಾಲ್ವರು ಸಹೋದರರು
ಬೆಳಗಾವಿಯಲ್ಲಿ ಲಖನ್‌ ಜಾರಕಿಹೊಳಿ ಜಯ ಗಳಿಸುವ ಮೂಲಕ ಕುಟುಂಬದ ನಾಲ್ವರು ಸಹೋದರರು ಶಾಸಕರಾದಂತಾಗಿದೆ. ಇದುವರೆಗೆ ಸತೀಶ ಜಾರಕಿಹೊಳಿ, ರಮೇಶ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಶಾಸಕರಾಗಿದ್ದು, ಈಗ ಜಾರಕಿ ಹೊಳಿ ಕುಟುಂಬದ ನಾಲ್ಕನೇ ಸದಸ್ಯ ವಿಧಾನ ಸೌಧದ ಮೆಟ್ಟಿಲು ಹತ್ತಿದಂತಾಗಿದೆ.

ಮೂವರ ಎಂಟ್ರಿ
ಬೀದರ್‌ನಲ್ಲಿ ಜಯ ಸಾಧಿಸಿದ ಕಾಂಗ್ರೆಸ್‌ನ ಭೀಮರಾವ್‌ ಪಾಟೀಲ್‌ ವಿಧಾನಪರಿಷತ್‌ ಸದಸ್ಯರಾಗುವ ಮೂಲಕ ಮೂವರು ವಿಧಾನಸೌಧ ಪ್ರವೇಶಿಸಿದಂತಾಗಿದೆ. ಈಗಾಗಲೇ ರಾಜಶೇಖರ ಪಾಟೀಲ್‌ ಮತ್ತು ಚಂದ್ರಶೇಖರ ಪಾಟೀಲ್‌ ಶಾಸಕರಾಗಿದ್ದು, ಈಗ ಭೀಮರಾವ್‌ ಮೂಲಕ 3ನೇ ಪ್ರವೇಶ ಸಿಕ್ಕಿದೆ.

Advertisement

ಇದನ್ನೂ ಓದಿ:ಸಿದ್ಧ ಆಹಾರಕ್ಕೆ ಬಳಸಿದ ಸಾಮಗ್ರಿ ವಿವರ ಕಡ್ಡಾಯ; ದೆಹಲಿ ಹೈಕೋರ್ಟ್‌ ಮಹತ್ವದ ತೀರ್ಪು

ಕಾಂಗ್ರೆಸ್‌
-ಚೆನ್ನರಾಜ್‌ ಹಟ್ಟಿಹೊಳಿ- ಶಾಸಕಿ ಲಕ್ಷ್ಮೀ ಹೆಬ್ಟಾಳ್ಕರ್‌ ಸಹೋದರ

-ಸುನಿಲ್‌ ಗೌಡ ಪಾಟೀಲ್‌- ಮಾಜಿ ಸಚಿವ ಎಂ.ಬಿ. ಪಾಟೀಲ್‌ ಸಹೋದರ

-ಶರಣಗೌಡ ಬಯ್ನಾಪುರ- ಮಾಜಿ ಸಚಿವ ಅಮರೇಗೌಡ ಬಯ್ನಾಪುರ ಸಹೋದರ

-ಭೀಮರಾವ್‌ – ಶಾಸಕ ರಾಜಶೇಖರ ಪಾಟೀಲ್‌ ಸಹೋದರ

-ಎಸ್‌. ರವಿ-ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸಂಬಂಧಿ

- ರಾಜೇಂದ್ರ – ಮಾಜಿ ಶಾಸಕ ಕೆ.ಎನ್‌. ರಾಜಣ್ಣ ಪುತ್ರ

ಬಿಜೆಪಿ

- ಪ್ರದೀಪ್‌ ಶೆಟ್ಟರ್‌- ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಸಹೋದರ

-ಸುಜಾ ಕುಶಾಲಪ್ಪ- ಮಾಜಿ ಸಚಿವ ಅಪ್ಪಚ್ಚು ರಂಜನ್‌ ಸಹೋದರ

- ಡಿ.ಎಸ್‌. ಅರುಣ್‌- ಡಿ.ಎಚ್‌. ಶಂಕರಮೂರ್ತಿ ಪುತ್ರ

ಜೆಡಿಎಸ್‌

-ಸೂರಜ್‌ ರೇವಣ್ಣ- ಶಾಸಕ ಎಚ್‌.ಡಿ. ರೇವಣ್ಣ ಪುತ್ರ, ಸಂಸದ ಪ್ರಜ್ವಲ್‌ ರೇವಣ್ಣ ಸಹೋದರ

ಪಕ್ಷೇತರ

=-ಲಖನ್‌ ಜಾರಕಿಹೊಳಿ- ಶಾಸಕರಾದ  ಬಾಲಚಂದ್ರ, ರಮೇಶ್‌ ಜಾರಕಿಹೊಳಿ ಸಹೋದರ

Advertisement

Udayavani is now on Telegram. Click here to join our channel and stay updated with the latest news.

Next