Advertisement
ವಿಧಾನಸೌಧ-ವಿಕಾಸಸೌಧ ನಡುವಿನ ಗಾಂಧಿ ಪ್ರತಿಮೆ ಬಳಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸ್ವತ್ಛಭಾರತ ಅಭಿಯಾನದಡಿಯಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಆಯೋಜಿಸಲಾಗಿದ್ದ ” ಸ್ವಚ್ಚ ಸರ್ವೇಕ್ಷಣಾ ಗ್ರಾಮೀಣ-18′ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕರ್ನಾಟಕವನ್ನು ಬಯಲು ಬಹಿರ್ದೆಸೆ ಮುಕ್ತಗೊಳಿಸುವ ನಿಟ್ಟಿನಲ್ಲಿ ಈಗಾಗಲೇ 20 ಜಿಲ್ಲೆಗಳಲ್ಲಿ 22 ಲಕ್ಷ ಶೌಚಾಲಯ ನಿರ್ಮಾಣ ಪೂರ್ಣಗೊಳಿಸಲಾಗಿದೆ ಎಂದು ಹೇಳಿದರು.
Related Articles
Advertisement
ರಾಜ್ಯದ 20 ಜಿಲ್ಲೆಗಳಲ್ಲಿ ಶೌಚಾಲಯ ನಿರ್ಮಾಣ ಸಂಪೂರ್ಣವಾಗಿವೆ. ಉಳಿದ 10 ಜಿಲ್ಲೆಗಳಲ್ಲಿ ಅಕ್ಟೋಬರ್ ಒಳಗೆ ಪೂರ್ಣಗೊಳ್ಳಲಿದೆ. ಇದರ ಜೊತೆಗೆ ಚರಂಡಿಗಳ ನಿರ್ಮಾಣ ಹಾಗೂಚರಂಡಿಗಳ ಸ್ವಚ್ಚತೆಗೂ ಪ್ರಾಮುಖ್ಯ ನೀಡಲಾಗಿದೆ ಎಂದು ಹೇಳಿದರು.
ಹಳ್ಳಿಗಳನ್ನ ಸ್ವಚ್ಚವಾಗಿಡುವ ಬಗ್ಗೆ ಜಾಗೃತಿ ಅಭಿಯಾನ ಸಹ ಹಮ್ಮಿಕೊಂಡಿದ್ದು ಮಕ್ಕಳ ಮೂಲಕ ಸ್ವಚ್ಚತಾ ಜಾಗೃತಿ ಕಾರ್ಯಕ್ರಮ ರೂಪಿಸಲಾಗಿದೆ. ಮಕ್ಕಳಿಂದಲೇ ಹಿರಿಯರಲ್ಲಿ ತ್ಯಾಜ್ಯ, ಪ್ಲಾಸ್ಟಿಕ್, ಸ್ವಚ್ಚತೆ ಬಗ್ಗೆ ಜಾಗೃತಿ ಮೂಡಿಸುತ್ತೇವೆ ಎಂದು ತಿಳಿಸಿದರು.
ಉತ್ತರಕರ್ನಾಟಕ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ಆ ಭಾಗದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದೇವೆ. ಇಷ್ಟಾದರೂ ಪ್ರತ್ಯೇಕ ರಾಜ್ಯದ ಮಾತು ಸಲ್ಲದು. ನಾವೆಲ್ಲರೂ ಅಖಂಡ ಕರ್ನಾಟಕದವರು. ಬಂದ್ ಯಶಸ್ವಿಯಾಗಿಲ್ಲ, ಬಂದ್‌ಗೆ ಆ ಭಾಗದ ಜನರು ಒಪ್ಪುವುದಿಲ್ಲ. ರಾಜ್ಯವನ್ನ ಒಡೆಯುವ ವಿಚಾರಕ್ಕೆ ಪಕ್ಷಗಳು ಕೈಹಾಕಬಾರದು.– ಡಾ. ಜಿ.ಪರಮೇಶ್ವರ್