Advertisement
ಗಾಳಿ ಗುಣಮಟ್ಟದ ಸೂಚ್ಯಂಕ ನೀಡುವ ರೆಸ್ಪೈರ್ ಲಿವಿಂಗ್ ಸೈನ್ಸಸ್ ಆ್ಯಂಡ್ ಕ್ಲೈಮೇಟ್ ಟ್ರೆಂಡ್ಸ್‌ನ ವರದಿಗಳ ಪ್ರಕಾರ, ಅತ್ಯಂತ ಶುದ್ಧ ಗಾಳಿ ಇರುವ ನಗರಗಳ ಪೈಕಿ ಮಿಜೋರಾಂನ ಐಜ್ವಾಲ್ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಕರ್ನಾಟಕದ ಚಿಕ್ಕಮಗಳೂರು ಮತ್ತು ಮೂರನೇ ಸ್ಥಾನದಲ್ಲಿ ಹರ್ಯಾಣದ ಮಂಡಿಖೇರಾ ನಗರವಿದೆ. ಉಳಿದಂತೆ 7 ಸ್ಥಾನಗಳಲ್ಲೂ ಕರ್ನಾಟಕವೇ ಇದ್ದು, ಕ್ರಮವಾಗಿ ಚಾಮರಾಜನಗರ, ಮಡಿಕೇರಿ, ವಿಜಯಪುರ, ರಾಯಚೂರು, ಶಿವಮೊಗ್ಗ, ಗದಗ, ಮೈಸೂರು ಸ್ಥಾನ ಪಡೆದಿವೆ.
ವಾಯುಮಾಲಿನ್ಯದಲ್ಲಿ ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಎನ್‌ಸಿಆರ್ ನಗರಗಳೇ ಅಗ್ರಸ್ಥಾನದಲ್ಲಿವೆ. 2022ರ ಅಕ್ಟೋಬರ್‌ನಿಂದ 2023ರ ಸೆಪ್ಟೆಂಬರ್‌ವರೆಗಿನ ದತ್ತಾಂಶವನ್ನು ಆಧರಿಸಿ ಈ ವರದಿ ತಯಾರಿಸಲಾಗಿದೆ.ಆ ಪ್ರಕಾರ ದೆಹಲಿಯಲ್ಲಿನ ವಾಯುಗುಣಮಟ್ಟ ಸುಧಾರಣೆ ಆಗಿದೆ. ಆದಾಗ್ಯೂ, ದೇಶದಲ್ಲಿ ದೆಹಲಿಯಲ್ಲಿಯೇ ಅತ್ಯಂತ ವಾಯುಮಾಲಿನ್ಯ ವರದಿಯಾಗಿದೆ. ಇನ್ನು ಎನ್‌ಸಿಆರ್‌ನ ಫರಿದಾಬಾದ್, ಘಾಜಿಯಾಬಾದ್, ನೋಯ್ಡಾ, ಮೀರತ್ ಕೂಡ ಮಾಲಿನ್ಯದಲ್ಲಿ ಅಗ್ರಸ್ಥಾನದಲ್ಲಿವೆ. ಬಿಹಾರದ ಪಾಟ್ನಾ ಹಾಗೂ ಮುಜಫರ್‌ಪುರ ಕೂಡ ಈ ಪಟ್ಟಿಗಳಲ್ಲಿದೆ.