Advertisement

ಬಂಡವಾಳ ಹೂಡಿಕೆಗೆ ಕರ್ನಾಟಕವೇ ಆಕರ್ಷಣೆ

11:54 PM Dec 28, 2020 | mahesh |

ಬೆಂಗಳೂರು: ಕೋವಿಡ್ ನಡುವೆಯೂ ಹೂಡಿಕೆದಾರರ ಗಮನ ಸೆಳೆಯುವ ವಿಚಾರದಲ್ಲಿ ಕರ್ನಾಟಕ ಉತ್ತಮ ಸಾಧನೆ ಮಾಡಿದೆ. ಕಳೆದ ಜನವರಿಯಿಂದ ಅಕ್ಟೋಬರ್‌ವರೆಗೆ ಬಂಡವಾಳ ಹೂಡಿಕೆ ಪ್ರಸ್ತಾವ ನೋಂದಣಿಯಲ್ಲಿ ದೇಶದಲ್ಲೇ ಕರ್ನಾಟಕ ಪ್ರಥಮ ಸ್ಥಾನದಲ್ಲಿದೆ.

Advertisement

ಈ 10 ತಿಂಗಳುಗಳ ಅವಧಿಯಲ್ಲಿ ಕರ್ನಾಟಕ ಶೇ. 41ರಷ್ಟು ಪಾಲು ಪಡೆದು ಗುಜರಾತ್‌, ಮಹಾರಾಷ್ಟ್ರ, ಒಡಿಶಾಗಳನ್ನು ಹಿಂದಿಕ್ಕಿದೆ. ಹಿಂದಿನ ಹಣಕಾಸು ವರ್ಷದಲ್ಲಿ ಹೂಡಿಕೆ ಪ್ರಸ್ತಾವನೆಯಲ್ಲಿ ಮೂರನೇ ಸ್ಥಾನದಲ್ಲಿದ್ದ ಕರ್ನಾಟಕ ಪ್ರಸಕ್ತ ವರ್ಷದ 10 ತಿಂಗಳ ಅವಧಿಯಲ್ಲಿ ಪ್ರಥಮ ಸ್ಥಾನಕ್ಕೇರಿದ್ದು, ಹೂಡಿಕೆ, ಉದ್ಯೋಗ ಸೃಷ್ಟಿ, ಆರ್ಥಿಕತೆ ಪ್ರಗತಿಗೆ ಉತ್ತೇಜನಕಾರಿಯಾಗಿದೆ.

ಸಿಎಂ ಯಡಿಯೂರಪ್ಪ ಅಧ್ಯಕ್ಷತೆಯ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ (ಎಸ್‌ಎಚ್‌ಎಲ್‌ಸಿಸಿ) ಮತ್ತು ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್‌ ಅಧ್ಯಕ್ಷತೆಯ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನೆ ಸಮಿತಿಯು ಕಳೆದ ಮಾರ್ಚ್‌ನಿಂದ ಅಕ್ಟೋಬರ್‌ವರೆಗಿನ ಅವಧಿಯಲ್ಲಿ 448 ಬಂಡವಾಳ ಹೂಡಿಕೆ ಪ್ರಸ್ತಾವಗಳಿಗೆ ಅನುಮೋದನೆ ನೀಡಿದೆ. ಇದರಲ್ಲಿ 410 ಹೊಸ ಪ್ರಸ್ತಾವಗಳ ಜತೆಗೆ 38 ಹೆಚ್ಚುವರಿ ಹೂಡಿಕೆ ಪ್ರಸ್ತಾವಗಳೂ ಇವೆ.

ಕೈಗಾರಿಕೆ ಸ್ನೇಹಿ ವಾತಾವರಣಕ್ಕೆ ಒತ್ತು
ರಾಜ್ಯದಲ್ಲಿ ಹೂಡಿಕೆಗೆ ಪ್ರೇರಕವಾಗುವ ನಿಟ್ಟಿನಲ್ಲಿ ಇನ್ನಷ್ಟು ಸುಧಾರಿತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಎಲ್ಲ ಹಂತಗಳಲ್ಲೂ ತ್ವರಿತ- ಸರಳ ಮಂಜೂರಾತಿ, ಸ್ಪಂದನೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಈ ಬಗ್ಗೆ ಜಾಗತಿಕ ಮಟ್ಟದಲ್ಲೂ ವ್ಯಾಪಕವಾಗಿ ಜಾಗೃತಿ ಮೂಡಿಸಲಾಗಿದೆ. ನುರಿತ ಮಾನವ ಸಂಪನ್ಮೂಲ, ಕೈಗಾರಿಕೆಸ್ನೇಹಿ ಮೂಲ ಸೌಕರ್ಯದಿಂದ ಹೂಡಿಕೆದಾರರು ಹೊಸ ಕೈಗಾರಿಕೆಗಳ ಸ್ಥಾಪನೆಗೆ ಆಸಕ್ತಿ ತೋರಿ ಪ್ರಸ್ತಾವ ಸಲ್ಲಿಕೆ ಹೆಚ್ಚಾಗುತ್ತಿದೆ. ಕೋವಿಡ್‌ ಸಂದರ್ಭದಲ್ಲೂ ರಾಜ್ಯವು ಹೂಡಿಕೆ ಪ್ರಸ್ತಾವಗಳ ನೋಂದಣಿಯಲ್ಲಿ ಪ್ರಥಮ ಸ್ಥಾನದಲ್ಲಿರುವುದು ರಾಜ್ಯದ ಕೈಗಾರಿಕೆ ಸ್ನೇಹಿ ವಾತಾವರಣವನ್ನು ತೋರಿಸುತ್ತದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಒಟ್ಟು ಹೂಡಿಕೆ ಪ್ರಸ್ತಾವ
84,047.78 ಕೋ.ರೂ.
ನಿರೀಕ್ಷೆ 1,82,404 ಉದ್ಯೋಗ ಸೃಷ್ಟಿ
2019ರ ಅಕ್ಟೋಬರ್‌-2020ರ ಸೆಪ್ಟಂಬರ್‌
ಎಫ್ಡಿಐ 58,204 ಕೋ.ರೂ.
ದೇಶದಲ್ಲಿ ಕರ್ನಾಟಕಕ್ಕೆ 3ನೇ ಸ್ಥಾನ

Advertisement

ಎಂ. ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next