Advertisement

ಪಿಲಿಕುಳ ಜೈವಿಕ ಉದ್ಯಾನವನ: ಬಾಹುಬಲಿ-ಅನುಷ್ಕಾಗೆ ಎರಡನೇ ಕರು!

05:34 PM Jan 18, 2022 | Team Udayavani |

ಪಿಲಿಕುಳ: ಪಿಲಿಕುಳ ಜೈವಿಕ ಉದ್ಯಾನವನದ ಕಾಡುಕೋಣ “ಬಾಹುಬಲಿ’ ಮತ್ತು “ಅನುಷ್ಕಾ’ ಒಂದು ಗಂಡು ಕರುವಿಗೆ ಜನ್ಮ ನೀಡಿದೆ. ತಾಯಿ ಮತ್ತು ಕರು ಆರೋಗ್ಯವಾಗಿವೆ.

Advertisement

ಈ ಹಿಂದೆ 2020 ಸಾಲಿನಲ್ಲಿ “ಪಾರೋಲು’ ಎಂಬ ಹೆಣ್ಣು ಕರುವಿಗೆ ಜನ್ಮ ನೀಡಿತ್ತು. “ಬಾಹುಬಲಿ’
ಮತ್ತು “ಅನುಷ್ಕಾ’ ತಮಿಳುನಾಡಿನ ವಂಡಲೂರು ಮೃಗಾಲಯದಿಂದ ಹಾಗೂ “ಮಹಿಷ’ ಮತ್ತು “ಮಹಿಷಿ’ಯನ್ನು ಮೈಸೂರು ಮೃಗಾಲಯದಿಂದ ಪ್ರಾಣಿ ವಿನಿಮಯದ ಮುಖೇನ ತರಿಸಲಾಗಿತ್ತು. ಈಗ ಪಿಲಿಕುಳದಲ್ಲಿ ಒಟ್ಟು ಆರು ಕಾಡುಕೋಣಗಳಿವೆ.

ಕಾಡುಕೋಣಗಳು ಅಳಿವಿನಂಚಿ ನಲಿರುವ ಪ್ರಾಣಿಗಳ ಸಾಲಿಗೆ ಸೇರಿದೆ ಎಂದು ಉದ್ಯಾನವನದ ನಿರ್ದೇಶಕ ಎಚ್‌.ಜೆ. ಭಂಡಾರಿ ಅವರು ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next