Advertisement

ಚಿಕೂನ್‌ಗುನ್ಯಾದಲ್ಲಿ ಕರ್ನಾಟಕ, ಘೀಯಲ್ಲಿ ಕೇರಳ ರಾಜ್ಯ ಫ‌ಸ್ಟ್‌

12:14 PM Jul 05, 2017 | |

ನವದೆಹಲಿ: ಮುಂಗಾರು ಆರಂಭವಾಗಿ ತಿಂಗಳಾಗಿದ್ದು, ಮಳೆಗಾಲದಲ್ಲಿ ಕಾಡುವ ಘೀ, ಚಿಕೂನ್‌ಗುನ್ಯಾ, ಮಲೇರಿಯಾ ರೋಗಗಳು ದೇಶಾದ್ಯಂತ ಆವರಿಸಿವೆ. ಇಡೀ ದೇಶದಲ್ಲಿ ಒಟ್ಟು 18,700 ಘೀ ಪ್ರಕರಣಗಳು ಪತ್ತೆಯಾಗಿದ್ದರೆ, 10,952 ಚಿಕೂನ್‌ಗುನ್ಯಾ ಪ್ರಕರಣಗಳು ದಾಖಲಾಗಿವೆ. ಕೇರಳದಲ್ಲಿ ಹೆಚ್ಚಿನ ಘೀ ಪ್ರಕರಣಗಳು ವರದಿಯಾಗಿವೆ.

Advertisement

ಆದರೆ ಚಿಕೂನ್‌ಗುನ್ಯಾದಲ್ಲಿ ಕರ್ನಾಟಕವೇ ಮೊದಲ ಸ್ಥಾನದಲ್ಲಿದೆ. ಹೀಗಾಗಿ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರು, ಎಲ್ಲಾ ರಾಜ್ಯಗಳಿಗೆ ಸರಿಯಾಗಿ ಆಸ್ಥೆ ವಹಿಸಿ ಮತ್ತು ರೋಗಗಳ ಬಗ್ಗೆ ಅರಿವು ಮೂಡಿಸುವಂತೆ ನಿರ್ದೇಶನ ನೀಡಿದ್ದಾರೆ. ಮಂಗಳವಾರ ದೆಹಲಿಯಲ್ಲಿ ಸಚಿವ ಜೆ.ಪಿ. ನಡ್ಡಾ ಅಧ್ಯಕ್ಷತೆಯಲ್ಲಿ ಪರಿಶೀಲನಾ ಸಭೆ ನಡೆದಿದ್ದು,

ಇದರಲ್ಲಿ ಆರೋಗ್ಯ ಕಾರ್ಯದರ್ಶಿ ಸಿ.ಕೆ. ಮಿಶ್ರಾ, ಐಸಿಎಂಆರ್‌ನ ಮಹಾ ನಿರ್ದೇಶಕಿ ಸೌಮ್ಯ ಸ್ವಾಮಿನಾಥನ್‌, ಆರೋಗ್ಯ ಸೇವೆಗಳ ಮಹಾ ನಿರ್ದೇಶಕ ಜಗದೀಶ್‌ ಪ್ರಸಾದ್‌ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು  ಪಾಲ್ಗೊಂಡಿದ್ದರು. 

ಇದರಲ್ಲಿ ಎರಡು ಪರಿಶೀಲನಾ ಸಭೆಗಳನ್ನು ನಡೆಸಿದ್ದೇವೆ, ಒಂದು ದೆಹಲಿ ಮತ್ತು ಇನ್ನೊಂದು ಇತರೆ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸ್ಥಿತಿಗತಿ ಬಗ್ಗೆ ಚರ್ಚಿಸಿದ್ದೇವೆ. ಮಳೆಗಾಲದಲ್ಲಿ ಹರಡುವ ರೋಗಗಳ ನಿಯಂತ್ರಣಕ್ಕೆ ಯಾವ ರೀತಿ ರಾಜ್ಯಗಳು ಸಜ್ಜುಗೊಂಡಿವೆ ಎಂಬ ಬಗ್ಗೆ ಅವಲೋಕನ ನಡೆಸಿದ್ದೇವೆ ಎಂದಿರುವ ನಡ್ಡಾ, ಅರಿವು ಕಾರ್ಯಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದೇವೆ ಎಂದಿದ್ದಾರೆ. 

ಆರೋಗ್ಯ ಕಾರ್ಯದರ್ಶಿ ಮಿಶ್ರಾ ಅವರು, ಕೇರಳದಲ್ಲಿ ಘೀ ಪ್ರಮಾಣ ಹೆಚ್ಚಾಗಿದೆ. ಆದರೆ ಈ ಬಗ್ಗೆ ರಾಜ್ಯದಿಂದ ಇದುವರೆಗೆ ಯಾವುದೇ ಮನವಿ ಬಂದಿಲ್ಲ. ಆದರೂ, ಜನರ ಆರೋಗ್ಯದ ವಿಚಾರದಲ್ಲಿ ಅವರು ಉತ್ತಮ ವ್ಯವಸ್ಥೆಮಾಡಿಕೊಳ್ಳಲಿ ಎಂದರು. ಕೇರಳ ಬಿಟ್ಟರೆ ತಮಿಳುನಾಡಿನಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. 

Advertisement

ನಂತರದ ಸ್ಥಾನದಲ್ಲಿ ಕರ್ನಾಟಕವಿದೆ. ಇಲ್ಲಿ 1945 ಪ್ರಕರಣಗಳು ದಾಖಲಾಗಿವೆ. ಆದರೆ ಚಿಕೂನ್‌ಗುನ್ಯಾ ವಿಚಾರದಲ್ಲಿ ಈಗಾಗಲೇ ದೇಶದಲ್ಲಿ 10,952 ಪ್ರಕರಣ ಪತ್ತೆಯಾಗಿವೆ. ಇದರಲ್ಲಿ ಕರ್ನಾಟಕವೇ ಮುಂದಿದ್ದು, ಇಲ್ಲಿ 4,047 ಪ್ರಕರಣಗಳು  ವರದಿಯಾಗಿವೆ ಎಂದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next