Advertisement
ಕೋವಿಡ್ ನಿರ್ವಹಣೆ ಮತ್ತು ಚಿಕಿತ್ಸೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಸಂಬಂಧ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಮತ್ತು ನ್ಯಾ| ಆರವಿಂದ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ನಿಮ್ಮಿಂದ ಆಗದು ಎಂದಾದರೆ ಅದನ್ನೇ ಹೇಳಿ, ಆದೇಶ ದಲ್ಲಿ ಹಾಗೇ ಉಲ್ಲೇಖೀ ಸಲಾಗುತ್ತದೆ. ಸಚಿವರು, ಅಧಿಕಾರಿಗಳು ಜನರಿಗೆ ಸತ್ಯವನ್ನು ಹೇಳಬೇಕು. ಮನ ಬಂದಂತೆ ಹೇಳಿಕೆ ನೀಡುವು ದನ್ನು ಬಿಡಬೇಕು ಎಂದು ಹೈಕೋರ್ಟ್ ತಾಕೀತು ಮಾಡಿದೆ.
ರಾಜ್ಯ ಸರಕಾರದ ಅಂಕಿ-ಅಂಶಗಳನ್ನು ಪರಿ ಶೀಲಿಸಿದ ನ್ಯಾಯಪೀಠ, ಕೊವಿಶೀಲ್ಡ್, ಕೊವ್ಯಾಕ್ಸಿನ್ ಮೊದಲ ಡೋಸ್ ಪಡೆದು, 2ನೇ ಡೋಸ್ ಪಡೆಯುವ ಅವಧಿ ಮುಗಿ ಯುವ ಹಂತದಲ್ಲಿರುವ ಮತ್ತು ಮುಗಿ ದಿರುವ 19.97 ಲಕ್ಷ ಮಂದಿಗೆ ತತ್‌ಕ್ಷಣ 2ನೇ ಡೋಸ್ ನೀಡಬೇಕಾಗಿದೆ. ಆದರೆ ಸರಕಾರದ ಬಳಿ ಸದ್ಯ ಇರುವುದು 11.24 ಲಕ್ಷ ಲಸಿಕೆಗಳು ಮಾತ್ರ. ಕೇಂದ್ರ ಸರಕಾರ ಪೂರೈಸುವ ಲಸಿಕೆ ಗಳಲ್ಲಿ ಶೇ.70ರಷ್ಟನ್ನು 2ನೇ ಡೋಸ್‌ಗೆ ಮೀಸಲಿಡಬೇಕು ಎಂಬ ಮಾರ್ಗಸೂಚಿ ಪಾಲನೆ ಯಾಗಿಲ್ಲ ಏಕೆ? ಇದುವೆಯಾ ವ್ಯಾಕ್ಸಿನೇಶನ್ ನಡೆಸುವ ರೀತಿ ಎಂದು ತರಾಟೆಗೆ ತೆಗೆದುಕೊಂಡಿತು. ಕೇಂದ್ರಕ್ಕೂ ಚಾಟಿ
ಕೇಂದ್ರ ಸರಕಾರಕ್ಕೂ ಚಾಟಿ ಬೀಸಿದ ಹೈಕೋರ್ಟ್, 19 ಲಕ್ಷ ಜನರಿಗೆ ತತ್‌ಕ್ಷಣ ಲಸಿಕೆಯ ಕೊರತೆಯಿದ್ದು, ಅದನ್ನು ಹೇಗೆ ನೀಗಿಸುತ್ತೀರಿ ಎಂದು ಕೇಂದ್ರದ ಪರ ವಕೀಲರನ್ನು ಪ್ರಶ್ನಿಸಿತು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಮುಂದಿನ ಮೇ 19ಕ್ಕೆ ಮುಂದೂಡಿತು.
Related Articles
ಹೆಚ್ಚುವರಿ ಅಡ್ವೋಕೇಟ್ ಜನರಲ್ ಆರ್. ಸುಬ್ರಹ್ಮಣ್ಯ ಪ್ರತಿಕ್ರಿಯಿಸಿ, ಸದ್ಯಕ್ಕೆ ಮೊದಲ ಡೋಸ್ ನೀಡಿಕೆ ಸ್ಥಗಿತ ಗೊಳಿಸ ಲಾಗಿದ್ದು, 2ನೇ ಡೋಸ್‌ಗೆ ಆದ್ಯತೆ ನೀಡ ಲಾಗುವುದು ಎಂದರು. ಅಡ್ವೊಕೇಟ್ ಜನರಲ್ ಪ್ರಭುಲಿಂಗ್ ಕೆ. ನಾವದಗಿ, ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ವ್ಯಾಕ್ಸಿನೇಶನ್ ವಿಚಾರದಲ್ಲಿ ಕರ್ನಾಟಕ ಉತ್ತಮ ಸ್ಥಿತಿಯಲ್ಲಿದೆ. 3 ಕೋಟಿ ಲಸಿಕೆ ಖರೀದಿಗೆ ರಾಜ್ಯದಿಂದ ಗ್ಲೋಬಲ್ ಟೆಂಡರ್ ಕರೆಯಲಾಗಿದೆ ಎಂದರು.
Advertisement