Advertisement

High Court; ಬಸವನಗುಡಿಗೆ ಮರುನಾಮಕರಣ ಬೇಡ ಎಂದು ಸಲ್ಲಿಸಿದ್ದ PIL ವಜಾ

06:47 PM Aug 08, 2024 | Team Udayavani |

ಬೆಂಗಳೂರು: ನಗರದ ಬಸವನಗುಡಿ ವಾರ್ಡ್‌ಗೆ ದೊಡ್ಡ ಗಣಪತಿ ಎಂದು ಮರುನಾಮಕರಣ ಮಾಡುವ ಸರಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಗುರುವಾರ(ಆಗಸ್ಟ್ 8 ) ವಜಾಗೊಳಿಸಿದೆ.

Advertisement

ಸತ್ಯಲಕ್ಷ್ಮಿ ರಾವ್ ಮತ್ತು ಇತರರು PIL ಅನ್ನು ಸಲ್ಲಿಸಿ ಮೂಲ ಹೆಸರು ಗಮನಾರ್ಹ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮೌಲ್ಯವನ್ನು ಹೊಂದಿದೆ ಎಂದು ವಾದಿಸಿದ್ದರು.

ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಅರ್ಜಿಯ ವಿರುದ್ಧ ತೀರ್ಪು ನೀಡಿತು.

“ವಾರ್ಡ್ ಅಥವಾ ನಗರವನ್ನು ಮರುನಾಮಕರಣ ಮಾಡುವ ವಿಷಯವು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗೆ ಸಂಬಂಧಿಸಿದ ವಿಷಯವಲ್ಲ. ಅರ್ಜಿದಾರರಿಗೆ ಪರಿಹಾರವನ್ನು ನೀಡಲು ಯಾವುದೇ ಸಾರ್ವಜನಿಕ ಹಿತಾಸಕ್ತಿ ಪ್ರದರ್ಶಿಸಲಾಗಿಲ್ಲ. 2023ರ ಸೆಪ್ಟೆಂಬರ್ 25ರಂದು ನಗರಾಭಿವೃದ್ಧಿ ಇಲಾಖೆ ಹೊರಡಿಸಿದ್ದ ಅಧಿಸೂಚನೆಯನ್ನು ನ್ಯಾಯಾಲಯ ರದ್ದುಗೊಳಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದರು.

ವಾರ್ಡ್ ಗಡಿಗಳನ್ನು ಮರುವಿನ್ಯಾಸಗೊಳಿಸುವ ಪ್ರಕ್ರಿಯೆಯ ಭಾಗವಾಗಿ ಅಧಿಕಾರಿಗಳು ಈಗಾಗಲೇ ಬೆಂಗಳೂರಿನ ಹಲವಾರು ವಾರ್ಡ್‌ಗಳಿಗೆ ಮರುನಾಮಕರಣ ಮಾಡಿದ್ದಾರೆ ಎಂದು ನ್ಯಾಯಾಲಯ ಹೇಳಿ ಹೆಚ್ಚಿನ ವಿಚಾರಣೆಯಿಲ್ಲದೆ ಅರ್ಜಿಯನ್ನು ವಜಾಗೊಳಿಸಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next