Advertisement

ಜಸ್ಟೀಸ್ ನಾಗರತ್ನ ಬಿ.ವಿ.ಸೇರಿ 9 ಮಂದಿ ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಗಳಾಗಿ ಪ್ರಮಾಣ

12:55 PM Aug 31, 2021 | Team Udayavani |

ನವ ದೆಹಲಿ : ಸರ್ವೋಚ್ಚ ನ್ಯಾಯಾಲಯಕ್ಕೆ ನ್ಯಾಯಮೂರ್ತಿಯಾಗಿ ಇತ್ತೀಚೆಗಷ್ಟೇ ನೇಮಕವಾಗಿದ್ದ ಕರ್ನಾಟಕ ರಾಜ್ಯ ಹೈಕೋರ್ಟ್ ನಲ್ಲಿ ನ್ಯಾಯಾಧೀಶರಾಗಿದ್ದ ನಾಗರತ್ನ ಬಿ.ವಿ. ಅವರನ್ನು ಒಳಗೊಂಡು  ಮೂವರು ಮಹಿಳಾ ನ್ಯಾಯಮೂರ್ತಿಗಳೂ ಸೇರಿ ಒಂಬತ್ತು ಮಂದಿ ನ್ಯಾಯಮೂರ್ತಿಗಳು ಇಂದು (ಮಂಗಳವಾರ, ಆಗಸ್ಟ್ 31)  ಪ್ರಮಾಣವಚನ ಸ್ವೀಕರಿಸಿದ್ದಾರೆ.

Advertisement

 ನ್ಯಾಯಮೂರ್ತಿ ಎ.ಎಸ್. ಓಕಾ, ನ್ಯಾಯಮೂರ್ತಿ ವಿಕ್ರಮ್ ನಾಥ್, ನ್ಯಾಯಮೂರ್ತಿ ಜೆ.ಕೆ. ಮಹೇಶ್ವರಿ, ನ್ಯಾಯಮೂರ್ತಿ ಹಿಮಾ ಕೊಹ್ಲಿ, ನ್ಯಾಯಮೂರ್ತಿ ಸಿ.ಟಿ. ರವೀಂದ್ರಕುಮಾರ್, ನ್ಯಾಯಮೂರ್ತಿ ಎಂ.ಎಂ. ಸುಂದರೇಶ್ ಮತ್ತು ನ್ಯಾಯಮೂರ್ತಿ ಬೇಲಾ ತ್ರಿವೇದಿ, ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಅವರು ಇಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಇದನ್ನೂ ಓದಿ : ಗೃಹ ಸಚಿವರು ಭಾಷಣದ ವೇಳೆ ಕುಸಿದು ಬಿದ್ದ ಪೊಲೀಸ್ ಸಿಬ್ಬಂದಿ: ಮಾನವೀಯತೆ ಮೆರೆದ ಎಸ್ ಪಿ

ಸುಪ್ರೀಂ ಕೋರ್ಟ್ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಹೊಸದಾಗಿ ಸುಪ್ರೀಂ ಕೋರ್ಟ್ ಗೆ ನೇಮಕಗೊಂಡ ನ್ಯಾಯಮೂರ್ತಿಗಳಿಗೆ ಪ್ರಮಾಣವಚನ ಬೊಧಿಸಿದ್ದಾರೆ.

 ಇನ್ನು, ಜಸ್ಟೀಸ್​ ಬಿ.ವಿ. ನಾಗರತ್ನ ಅವರು 2027ರಲ್ಲಿ ದೇಶದ ಪರಮೋಚ್ಛ ನ್ಯಾಯಾಲಯದ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಿ ಹೊಸ ಇತಿಹಾಸ ಸೃಷ್ಠಿಸುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಲಾಗುತ್ತಿದೆ.

Advertisement

ಸದ್ಯ, ಸುಪ್ರೀಂ ಕೋರ್ಟ್ ನಲ್ಲಿ ಹಿರಿಯ ನ್ಯಾಯಮೂರ್ತಿಗಳಾದ ಯು.ಯು. ಲಲಿತ್‌, ಚಂದ್ರಚೂಡ್‌, ಸಂಜೀವ್‌ ಖನ್ನಾ, ಸೂರ್ಯಕಾಂತ್‌ ಮುಂದಿನ ದಿನಗಳಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಲಿದ್ದಾರೆ. ಈ ಪೈಕಿ ಕಡೆಯವರಾದ ನ್ಯಾಯಮೂರ್ತಿ ಸೂರ್ಯಕಾಂತ್‌ ಅವರ ಅವಧಿ ಆದ ನಂತರ 2027 ರಲ್ಲಿ ಹಿರಿತನದ ಆಧಾರದಲ್ಲಿ ಕರ್ನಾಟಕ ಮೂಲದ ನ್ಯಾಯಮೂರ್ತಿ ನಾಗರತ್ನ ಬಿ.ವಿ. ಅವರಿಗೆ ಮುಖ್ಯ ನ್ಯಾಯಮೂರ್ತಿ ಆಗುವ ಯೋಗ ಕೂಡಿಬರಲಿದೆ. ಹಾಗಾದರೆ ಅವರು ಸುಪ್ರೀಂ ಕೋರ್ಟಿನ ಮೊದಲ ಮಹಿಳಾ ಮುಖ್ಯ ನ್ಯಾಯಾಮೂರ್ತಿಯಾದ ಿತಿಹಾಸ ನಿರಮಿಸಲಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ : ಡೆಲ್ಟಾ ರೂಪಾತರಿಗಿಂತ ಅಪಾಯಕಾರಿ ಕೋವಿಡ್ ಹೊಸ ರೂಪಾಂತರಿ ಸಿ.1.2

Advertisement

Udayavani is now on Telegram. Click here to join our channel and stay updated with the latest news.

Next