Advertisement

Karnataka ಸರಕಾರವು ಈ ಬಾರಿ ಬರದ ಸವಾಲನ್ನು ಎದುರಿಸಬೇಕಿದೆ : ಡಾ.ಜಿ.ಪರಮೇಶ್ವರ್

08:44 PM Nov 16, 2023 | Team Udayavani |

ಕೊರಟಗೆರೆ: ಈ ವರ್ಷ ರಾಜ್ಯದಲ್ಲಿ ಮಳೆ ಅತ್ಯಂತ ಕಡಿಮೆಯಾಗಿದ್ದು, ಬರದ ಛಾಯೆ ಆವರಿಸಿದೆ ಸರಕಾರವು ಈ ಸವಾಲನ್ನು ಎದುರಿಸಬೇಕಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

Advertisement

ಗಟ್ಲಗೊಲ್ಲಹಳ್ಳಿ ಗ್ರಾಮದಲ್ಲಿ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದ ಪುನರ್ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಈ ವರ್ಷ ರಾಜ್ಯದಲ್ಲಿ ಭೀಕರ ಬರಗಾಲದ ಪರಿಸ್ಥಿತಿ ಎದುರಿಸಲು ಸರ್ಕಾರ ಸಿದ್ದವಾಗುತ್ತಿದೆ, ಬರುವ ಬೇಸಿಗೆಯಲ್ಲಿ ಕುಡಿಯುವ ನೀರು ಮತ್ತು ಜನರಿಗೆ, ರೈತರಿಗೆ ವಿದ್ಯುತ್ ನಿರ್ವಹಣೆ ಸವಾಲಗಿದೆ ಆದರೆ ಅದನ್ನು ನಿಭಾಹಿಸಲು ಎಲ್ಲಾ ರೀತಿ ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿದೆ ಎಂದರು.

ಕೊರಟಗೆರೆ ಸೇರಿದಂತೆ ಸುತ್ತಮುತ್ತಲ ಹಾಗೂ ಬಯಲು ಸೀಮೆಯ ಪ್ರದೇಶಗಳಿಗೆ ಎತ್ತಿನಹೊಳೆ ನೀರಾವರಿ ಯೋಜನೆ ಕಾಮಗಾರಿಗಳನ್ನು ಸರ್ಕಾರವು ತ್ವರಿತವಾಗಿ ಪೂರ್ಣಗೊಳಿಸಲು ಸರ್ಕಾರ ಕ್ರಮಕೈಗೊಳ್ಳಲಿದೆ, ಈ ಯೋಜನೆಯಿಂದ ರೈತರ ಕೃಷಿಗೆ ಮತ್ತು ಕುಡಿಯುವ ನೀರಿಗೆ ಬಹಳ ಅನುಕೂಲವಾಗಲಿದೆ, ಈ ನಿಟ್ಟಿನಲ್ಲಿ ಸರ್ಕಾರವು ಕಾರ್ಯಪ್ರವೃತ್ತವಾಗಲಿದೆ ಎಂದ ಅವರು ಈ ಗ್ರಾಮದಲ್ಲಿನ ವೀರಾಂಜನೇಯ್ಯ ದೇವಾಲಯ ನಿರ್ಮಾಣಕ್ಕೆ ಎಲ್ಲಾ ಸಹಕಾರ ನೀಡಲಾಗುವುದು ಮನುಷ್ಯನು ಜೀವನದಲ್ಲಿ ಧಾರ್ಮಿಕತೆಯಲ್ಲಿ ತೊಡಗಿಸಿಕೊಳ್ಳವುದರಿಂದ ಸಮಾಜದಲ್ಲಿ ಎಷ್ಟೋ ಅಪರಾಧಗಳು ಕಡಿಮೆಯಾಗುತ್ತವೆ ಎಂದರು.

ಕಾರ್ಯಕ್ರಮದಲ್ಲಿ ದಿವ್ಯಸಾನಿದ್ಯ ವಹಿಸಿದ್ದ ಸಿದ್ದರಬೆಟ್ಟದ ಶ್ರೀ ವೀರಭದ್ರಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಹಿಂದಿನಿಂದಲೂ ಗ್ರಾಮದ ಶಾಂತಿ ನೆಮ್ಮಂದಿಗೆ ಹಾಗೂ ಸೌಹಾದ್ಯತೆಗೆ ದೇವಸ್ಥಾನದಗಳನ್ನು ಕಟ್ಟುತ್ತಿದ್ದು ಆಂಜಿನೇಯ ಸ್ವಾಮಿಯು ಊರಿನ ಎಲ್ಲರೂ ಒಂದೆ ಮನಸ್ಸಿನ ಭಾವನೆಯಿಂದ ಪೂಜಿಸುವ ದೇವರಾಗಿದೆ ಎಂದರು.

ಎಲೆರಾಂಪುರದ ಶ್ರೀ ಹನುಮಂತನಾಥಸ್ವಾಮೀಜಿ ಮಾತನಾಡಿ ಧಾರ್ಮಿಕತೆಯಿಂದ ಸಮಾಜದಲ್ಲಿ ಶಾಂತಿ ನೆಮ್ಮಂದಿ ನೆಲೆಸಿದ್ದು, ಮನುಷ್ಯನ ಮಾನಸಿಕ ಶಕ್ತಿ ಧಾರ್ಮಿಕತೆಯಲ್ಲಿ ದೊರೆಯುತ್ತಿದೆ ಈ ಗ್ರಾಮದ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸೋಣ ಎಂದರು.

Advertisement

ಕಾರ್ಯಕ್ರಮದಲ್ಲಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಅಶೋಕ್, ಬ್ಲಾಕ್ ಕಾಂಗ್ರೆಸ್ ಮುಖಂಡರುಗಳಾದ ಅರಕೆರೆಶಂಕರ್, ಕೋಡ್ಲಹಳ್ಳಿಅಶ್ವಥನಾರಾಯಣ ಮುಖಂಡರಾದ ವಾಲೆಚಂದ್ರಯ್ಯ, ರವಿಕುಮಾರ್, ಎ.ಡಿ.ಬಲರಾಮಯ್ಯ, ಎಂ.ಎನ್.ಜೆ.ಮAಜುನಾಥ್, ಗಟ್ಲಹಳ್ಳಿಕುಮಾರ್, ಗೋಂದಿಹಳ್ಳಿರಂಗರಾಜು ಸೇರಿದಂತೆ ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next