ಮಂಗಳೂರು: ಕರ್ನಾಟಕ ರಾಜ್ಯ ಗೇರು ಉತ್ಪಾದಕರ ಅಸೋಸಿಯೇಶನ್‌ನ ನೂತನ ಅಧ್ಯಕ್ಷರಾಗಿ ಮೂಡುಬಿದಿರೆಯ ಶ್ರೀ ವಿಜಯಲಕ್ಷ್ಮಿ ಕ್ಯಾಶ್ಯೂ ಇಂಡಸ್ಟ್ರೀಸ್‌ನ ಅನಂತ ಕೃಷ್ಣ ರಾವ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸೆ. 30ರಂದು ಮಂಗಳೂರಿನಲ್ಲಿ ಜರಗಿದ ಅಸೋಸಿಯೇಶನ್‌ನ 69ನೇ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆದಿದೆ.
ಉಪಾಧ್ಯಕ್ಷರಾಗಿ ಎಂ. ತುಕಾರಾಮ ಪ್ರಭು (ಮೆ| ಮಾಧವರಾಯ ಪ್ರಭು ಮಂಗಳೂರು), ಕೋಶಾಧಿಕಾರಿಯಾಗಿ ಗಣೇಶ್ ಕಾಮತ್ (ಶ್ರೀ ಮಹಾಗಣಪತಿ ಕ್ಯಾಶ್ಯೂ ಇಂಡಸ್ಟ್ರೀಸ್ ಮಂಗಳೂರು), ಕಾರ್ಯ ದರ್ಶಿಯಾಗಿ ಅಮಿತ್ ಪೈ ( ಅಮಿತ್ ಕ್ಯಾಶ್ಯೂಸ್ ಪ್ರೈ. ಲಿ. ಉಡುಪಿ), ಜತೆ ಕಾರ್ಯದರ್ಶಿಯಾಗಿ ಸನತ್ ಪೈ ( ಶ್ರೀ ಗಜಾನನ ಕ್ಯಾಶ್ಯೂ ಇಂಡಸ್ಟ್ರೀಸ್ ಉಡುಪಿ) ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪ್ರಮೋದ್ ಕಾಮತ್, ವಿಠಲರಾಯ ಕಾಮತ್, ರೋಹಿದಾಸ್ ಪೈ, ಯೋಗೀಶ್ ಮಲ್ಯ, ಸತ್ಯಪ್ರಸಾದ್ ಪೈ, ಗಣೇಶ್ ಕಿಣಿ, ಅಶೋಕ್ ಕಾಮತ್, ಗಣೇಶ್ ಹೆಗ್ಡೆ, ಚೈತನ್ಯ ಪೈ, ಶ್ರೀನಿವಾಸ್ ಹೆಗ್ಡೆ, ಬಲರಾಮ್ ಕೆ.ಎಸ್., ಕಾರ್ತಿಕ್ ಭೂಷಣ್, ಸಂಪತ್ ಶೆಟ್ಟಿ, ವಿಠಲ ಭಕ್ತ, ಜಯಪ್ರಕಾಶ್ ಶೆಟ್ಟಿ, ಮಿಥುನ್ ನಾಯಕ್, ವಿಕ್ರಮ್ ಪ್ರಭು, ಶ್ರೀನಿವಾಸ ಕಾಮತ್, ಜಾನ್ಸನ್ ಡಿ’ ಸಿಲ್ವ, ಕೃಷ್ಣ ಕಾಮತ್, ಅದಿತ್ ರಾವ್ ಕಲಾºವಿ ಆಯ್ಕೆಯಾಗಿದ್ದಾರೆ.
ಸಂಸ್ಥೆಯ ಉನ್ನತ ಪರಂಪರೆಯನ್ನು ಇನ್ನಷ್ಟು ಅಭಿವೃದ್ಧಿಪರವಾಗಿ ಉನ್ನತ ಸಾಧನೆಯ ಗುರಿಯೊಂದಿಗೆ ಮುನ್ನಡೆ ಸುವ, ಗೇರು ಕೃಷಿಯಲ್ಲಿ ಗೇರು ಉತ್ಪಾದನೆ, ಉತ್ಪನ್ನಗಳ ಹೆಚ್ಚಳದ ಅಗತ್ಯ, ಗೇರು ಮಾರುಕಟ್ಟೆ, ಉದ್ಯಮವನ್ನು ಬೆಳೆಸುವ ಕುರಿತ ಕಾರ್ಯ ಯೋಜನೆಗಳನ್ನು ಹಾಕಿಕೊಳ್ಳುವುದಾಗಿ ನೂತನ ಅಧ್ಯಕ್ಷ ಎಸ್. ಅನಂತ ಕೃಷ್ಣ ರಾವ್ ತಿಳಿಸಿದ್ಧಾರೆ.