ಸಾಂಪ್ರದಾಯಿಕವಾಗಿ ವಿದ್ಯುತ್ ಉತ್ಪಾ ದಿಸಿ ರೈತರಿಗೆ ನಿರಂತರವಾಗಿ ವಿದ್ಯುತ್ ಪೂರೈಕೆಗೆ ಶ್ರಮಿಸುತ್ತಿದ್ದರೂ, ಬೇಸಗೆಯಲ್ಲಿ ರೈತರಿಗೆ ನಿರಂತರ 3 ಫೇಸ್ ವಿದ್ಯುತ್ ನೀಡಲು ಸಾಧ್ಯವಾಗಿಲ್ಲ.
Advertisement
ಈಗ ಪಿಎಂ ಕುಸುಮ್-ಸಿ ಯೋಜನೆ ಅಡಿಯಲ್ಲಿ ಕನಿಷ್ಠ 5ರಿಂದ 10 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಘಟಕಗಳನ್ನು ಆರಂಭಿಸಲು ತೀರ್ಮಾನಿಸಲಾಗಿದೆ. ಒಂದು ಸೌರ ವಿದ್ಯುತ್ ಘಟಕ ಸ್ಥಾಪನೆಗೆ ಕೇಂದ್ರ ಸರಕಾರದ ಎಂಎನ್‌ಆರ್‌ಇಯಿಂದ ಪ್ರತೀ ಮೆ.ವ್ಯಾ.ವಿದ್ಯುತ್ ಉತ್ಪಾದನೆಗೆ 3.5 ಕೋಟಿ ರೂ. ದೊರೆಯಲಿದ್ದು, ಅದರಲ್ಲಿ ಶೇ.30 ಅಂದರೆ, 1.05 ಕೋಟಿ ರೂ. ಸಹಾಯಧನವಾಗಿ ಸಿಗಲಿದೆ.
ಕುಸುಮ್ ಸಿ ಯೋಜನೆ ಮೂಲಕ ಉತ್ಪಾದನೆಯಾದ ವಿದ್ಯುತ್ತನ್ನು ಒಟ್ಟು 2.5 ಲಕ್ಷ ರೈತರ ಪಂಪ್‌ಸೆಟ್‌ಗಳಿಗೆ ಸರಬರಾಜು ಮಾಡಲು ಇಲಾಖೆ ಯೋಜನೆ ರೂಪಿಸಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿ 1.75 ಲಕ್ಷ ಪಂಪ್‌ಸೆಟ್‌ಗಳು, ಹೆಸ್ಕಾಂ ವ್ಯಾಪ್ತಿಯಲ್ಲಿ 65 ಸಾವಿರ ಪಂಪ್‌ಸೆಟ್‌ಗಳು ಹಾಗೂ ಸೆಸ್ಕ್ ವ್ಯಾಪ್ತಿಯಲ್ಲಿ 10 ಸಾವಿರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸರಬರಾಜು ಮಾಡಲು ತೀರ್ಮಾನಿಸಲಾಗಿದೆ.
Related Articles
ಈ ಯೋಜನೆಗೆ ವಿದ್ಯುತ್ ಉತ್ಪಾದನೆ ಮಾಡುವ ಕಂಪೆನಿಗಳ ಜತೆಗೆ ಒಪ್ಪಂದ ಮಾಡಿಕೊಂಡು 9 ತಿಂಗಳಲ್ಲಿ ಯೋಜನೆ ಅನುಷ್ಠಾನಗೊಳಿಸುವಂತೆ ಸೂಚಿಸಲಾಗುವುದು. ಈ ಸಂಸ್ಥೆಗಳು ಉತ್ಪಾದಿಸಿದ ವಿದ್ಯುತ್‌ಗೆ ಕೆಇಆರ್‌ಸಿ ಮೂಲಕ ದರ ನಿಗದಿಪಡಿಸಲು ತೀರ್ಮಾನಿಸಲಾಗಿದೆ.
Advertisement
ಫೀಡರ್ ಮೂಲಕ ಸರಬರಾಜುಯೋಜನೆಯಡಿ ಉತ್ಪಾದನೆ ಯಾಗುವ ಸೋಲಾರ್ ವಿದ್ಯುತ್ತನ್ನು ಈಗಾಗಲೇ ಇರುವ ಫೀಡರ್ (ವಿದ್ಯುತ್ ಸರಬರಾಜು ಮಾರ್ಗ) ಮೂಲಕ ನೇರವಾಗಿ ರೈತರ ಪಂಪ್‌ಸೆಟ್‌ಗಳಿಗೆ ಸರಬರಾಜು ಮಾಡಲಾಗುವುದು. ಈ ಯೋಜನೆ ಅಡಿಯಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆ ವ್ಯಾಪ್ತಿಯಲ್ಲಿ ಬರುವ ರೈತರು ಹಗಲು ಹೊತ್ತಿನಲ್ಲಿಯೇ ನೇರವಾಗಿ 3 ಫೇಸ್ ವಿದ್ಯುತ್ ಪಡೆದುಕೊಳ್ಳಬಹುದು. ಸೋಲಾರ್ ವಿದ್ಯುತ್ ಪಡೆಯಲು ರೈತರು ಸರಕಾರಕೆೆR ಯಾವುದೇ ಶುಲ್ಕ ಕಟ್ಟುವ ಅಗತ್ಯವಿಲ್ಲ. ಎಲ್ಲಿ ಎಷ್ಟು ಉತ್ಪಾದನೆ
ಬೆಸ್ಕಾಂ – 650 ಮೆ.ವ್ಯಾ. 1.75 ಲಕ್ಷ ಪಂಪ್‌ಸೆಟ್
ಹೆಸ್ಕಾಂ- 243 ಮೆ.ವ್ಯಾ. 65000 ಪಂಪ್‌ಸೆಟ್
ಸೆಸ್ಕ್ – 44 ಮೆ.ವ್ಯಾ. 10000 ಪಂಪ್‌ಸೆಟ್ ಲೋಡ್‌ಶೆಡ್ಡಿಂಗ್ ಇಲ್ಲ
ರಾಜ್ಯದಲ್ಲಿ ವಿದ್ಯುತ್ ಲೋಡ್‌ಶೆಡ್ಡಿಂಗ್ ಪ್ರಸ್ತಾವನೆ ಇಲ್ಲ ಎಂದು ಇಂಧನ ಸಚಿವ ಸುನಿಲ್‌ಕುಮಾರ್ ತಿಳಿಸಿದ್ದಾರೆ. ಬೇಸಗೆ ಯಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಬಾರದು ಎಂದು ಸಾಕಷ್ಟು ಎಚ್ಚರಿಕೆ ವಹಿಸಲಾಗಿದೆ. ರಾಜ್ಯ ದಲ್ಲಿ ಪ್ರತಿನಿತ್ಯ 7000 ಮೆಗಾ ವ್ಯಾಟ್ ಸೋಲಾರ್ ಹಾಗೂ ಪವನ ವಿದ್ಯುತ್ ಉತ್ಪಾದನೆ ಆಗುತ್ತಿದ್ದು, ವಿದ್ಯುತ್ ಕೊರತೆ ಅಥವಾ ಲೋಡ್ ಶೆಡ್ಡಿಂಗ್ ಉದ್ಭವಿಸದು ಎಂದರು. ಪಿಎಂ ಕುಸುಮ್ ಸಿ ಯೋಜನೆ ಜಾರಿಗೆ ನಿಯಮಗಳನ್ನು ರೂಪಿಸಲಾಗುತ್ತಿದೆ. ಸೋಲಾರ್ ಮೂಲಕ ಈ ವರ್ಷ ಸುಮಾರು 1000 ಮೆ.ವ್ಯಾ. ವಿದ್ಯುತ್ ಉತ್ಪಾದನೆ ಗುರಿ ಇರಿಸಲಾಗಿದೆ. ಇದರಿಂದ ರೈತರಿಗೆ ಹಗಲು ಹೊತ್ತಿನಲ್ಲಿಯೇ 3 ಫೇಸ್ ವಿದ್ಯುತ್ ದೊರೆಯಲಿದೆ. ಇಲಾಖೆಗೂ ವಿದ್ಯುತ್ ಭಾರ ಕಡಿಮೆಯಾಗುತ್ತದೆ.
– ವಿ. ಸುನಿಲ್‌ಕುಮಾರ್, ಇಂಧನ ಸಚಿವ - ಶಂಕರ ಪಾಗೋಜಿ