Advertisement

ಕರ್ನಾಟಕ ವಿಧಾನಸಭೆ ಚುನಾವಣೆ 2018,ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಏನಿದೆ

01:53 PM Apr 27, 2018 | Sharanya Alva |

ಮಂಗಳೂರು:ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಶುಕ್ರವಾರ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.

Advertisement

ನಗರದ ಟಿಎಂಎ ಪೈ ಹಾಲ್ ನಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದರು. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಿಎಂ ವೀರಪ್ಪ ಮೊಯ್ಲಿ, ಲೋಕಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಚಿವ ಡಿಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಹಿರಿಯ ಮುಖಂಡ ಜನಾರ್ದನ ಪೂಜಾರಿ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.

ನಮ್ಮದು ಜನಪರ ಪ್ರಣಾಳಿಕೆ. ನಾವು ಜನರ ಜತೆ ಒಡನಾಟದಲ್ಲಿದ್ದು, ಮುಂದಿನ ಐದು ವರ್ಷ ಏನು ಮಾಡಬೇಕು ಎಂಬುದನ್ನು ಜನರ ಜತೆ ಚರ್ಚಿಸಿ ತೀರ್ಮಾನ ಕೈಗೊಂಡಿದ್ದೇವೆ ಎಂದು ರಾಹುಲ್ ಗಾಂಧಿ ಹೇಳಿದರು.

ಭಾರತೀಯ ಜನತಾ ಪಕ್ಷದಲ್ಲಿ ಮೂರು ಮಂದಿ ಮಾತ್ರ ಕೋಣೆಯಲ್ಲಿ ಕುಳಿತು ಪ್ರಣಾಳಿಕೆ ರಚಿಸುತ್ತಾರೆ, ಅವರಿಗೆ ಸಂಘಪರಿವಾರ ಹಾಗೂ ಗಣಿ ಲೂಟಿಕೋರರು ಏನು ಹೇಳುತ್ತಾರೆ ಎಂಬುದು ಮುಖ್ಯ ಎಂದು ರಾಹುಲ್ ಆಕ್ರೋಶ ವ್ಯಕ್ತಪಡಿಸಿದರು.

ಪ್ರಣಾಳಿಕೆಯಲ್ಲಿ ಏನಿದೆ?

Advertisement

ಕೃಷಿ, ಕ್ರೀಡೆ, ಶಿಕ್ಷಣ, ಸಾಮಾಜಿಕ ನ್ಯಾಯ ಸೇರಿದಂತೆ 16 ಕ್ಷೇತ್ರಗಳನ್ನು ಒಳಗೊಂಡಂತೆ ಪ್ರಣಾಳಿಕೆ ಸಿದ್ದಪಡಿಸಿದೆ.

*ಉದ್ಯೋಗ ಸೃಷ್ಟಿ ಬಗ್ಗೆ ಭರವಸೆ

*ಕರ್ನಾಟಕ ಹಲವು ಮೊದಲುಗಳ ರಾಜ್ಯ, ಎಲ್ಲಾ ವಲಯಗಳಲ್ಲಿ ಶ್ರೇಷ್ಠತೆಯನ್ನು ಮತ್ತು ಪ್ರಗತಿ ಸಾಧಿಸುತ್ತಿರುವ ರಾಜ್ಯ

*ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಸಾಧನೆಗಳು

*ಕರ್ನಾಟಕ ಭಾರತೀಯ ಮಾಹಿತಿ ತಂತ್ರಜ್ಞಾನ ಕ್ರಾಂತಿಯಲ್ಲಿ ಪ್ರವರ್ತಕ ರಾಜ್ಯವಾಗಿದೆ.

*ಬೆಂಗಳೂರು ವಿಶ್ವದ 4ನೇ ಅತ್ಯುತ್ತಮ ತಂತ್ರಜ್ಞಾನ ಕೇಂದ್ರವಾಗಿದೆ.

*ಡಿಜಿಟಲ್ ಕ್ರಾಂತಿಗೆ ರಾಜ್ಯವು ಹೆಚ್ಚಿನ ಮನ್ನಣೆ ನೀಡಿದ್ದು ಇಡೀ ವಿಶ್ವದಲ್ಲಿಯೇ ಅತ್ಯಂತ ಡೈನಾಮಿಕ ನಗರ ಎಂದು ಹೆಸರುವಾಸಿಯಾಗಿದೆ

*ಮತ್ತೊಮ್ಮೆ ಕರ್ನಾಟಕವನ್ನು ಅನೇಕ ಮೊದಲುಗಳ ರಾಜ್ಯವನ್ನಾಗಿಸಲು ನಾವು ಕರ್ನಾಟಕ ಸ್ಟಾರ್ಟ್ ಅಪ್ ಮತ್ತು ನವೋದ್ಯಮ ನೀತಿಯನ್ನು ಜಾರಿಗೆ ತಂದಿದ್ದೇವೆ.

ಭರವಸೆಗಳ ಮಹಾಪೂರ:

ಐಟಿ ಕ್ಷೇತ್ರವನ್ನು ರಾಜ್ಯದ ಜಿಎಸ್ ಡಿಪಿಗೆ ಶೇ.25ಕ್ಕಿಂತ ಹೆಚ್ಚು ಮತ್ತು ಭಾರತದ ತಂತ್ರಜ್ಞಾನಕ್ಕೆ ಸಂಬಂಧಿಸಿದ ಒಟ್ಟು ವಹಿವಾಟಿನ ಶೇ.33ರಷ್ಟು ಕೊಡುಗೆಯನ್ನು ನೀಡಲು ವಿಸ್ತರಣೆ ಮಾಡುತ್ತೇವೆ.

*ಹಾರ್ಡ್ ವೇರ್ ಪಾರ್ಕಗ ಗಳನ್ನು ಶಿಡ್ಲಘಟ್ಟ ಮತ್ತು ಚಿಕ್ಕಬಳ್ಳಾಪುರದಲ್ಲಿ ನಿರ್ಮಿಸುವುದು

* ದೇವನಹಳ್ಳಿಯಲ್ಲಿ ಐಟಿ ಪಾರ್ಕ್ ನಿರ್ಮಿಸುವುದು

*3 ಮಿಲಿಯನ್ ಗಿಂತಲೂ ಹೆಚ್ಚು ಮಾಹಿತಿ ತಂತ್ರಜ್ಞಾನದ ಉದ್ಯೋಗಗಳನ್ನು ಪೂರೈಸಲು, ಕೌಶಲ್ಯ ವೃದ್ಧಿಸುವ ಮತ್ತು ಮಾಹಿತಿ ತಂತ್ರಜ್ಞಾನವನ್ನು ಒಳಗೊಂಡಿರುವ ಪಠ್ಯಕ್ರಮಗಳ ಮೂಲಕ ಉನ್ನತ ಮಟ್ಟದ ಐಟಿ ಪ್ರತಿಭಾ ಪೂಲ್ (ಟ್ಯಾಲೆಂಟ್ ಪೂಲ್)ನ್ನು ನಿರ್ಮಿಸುತ್ತೇವೆ.

Advertisement

Udayavani is now on Telegram. Click here to join our channel and stay updated with the latest news.

Next