Advertisement
‘ರಾಮನ ಭಕ್ತ ಹನುಮಾನ್ ಹುಟ್ಟಿದ ನಾಡು, ಅಂಜನಾದ್ರಿ ನೆಲೆಬೀಡು, ಗಂಗಾವತಿ ಜನತೆಗೆ ನನ್ನ ನಮಸ್ಕಾರ ಎಂದು ಯೋಗಿ ಭಾಷಣ ಆರಂಭಿಸಿದರು. ರಾಮ ಭಕ್ತ ಹನುಮನ ಈ ಪುಣ್ಯ ನೆಲದ ಜನತೆಗೆ ಕೋಟಿ ಕೋಟಿ ನಮನಗಳು. ಸಹೋದರರೇ ನಾನು ಅಯೋಧ್ಯಾದ ರಾಮನ ಪುಣ್ಯ ಕ್ತೇತ್ರದಿಂದ ಹನುಮಾನ್ ಪುಣ್ಯ ಕ್ಷೇತ್ರಕ್ಕೆ ಬಂದಿರುವೆ. ಈ ಪುಣ್ಯ ಭೂಮಿಯಲ್ಲಿ ರಾಮನಿಗೆ ಹನುಮಾನನ ಸಂಬಂಧ ಬೆಳೆಯಿತು. ಅಂತಹ ನೆಲದಲ್ಲಿ ನಾವಿದ್ದೇವೆ. ಈ ಪುಣ್ಯ ಭೂಮಿಯಲ್ಲಿ ಮೋದಿ ಅವರು ಏಕ್ ಭಾರತ್, ಶ್ರೇಷ್ಠ ಭಾರತ ಎಂದಿದ್ದಾರೆ. 140 ಕೋಟಿ ಜನರ ಮನಸಿನಲ್ಲಿ ಅವರು ಉಳಿದಿದ್ದಾರೆ. ಭಾರತ ಇಂದು ಬದಲಾಗುತ್ತದೆ. ಜಗತ್ತಿನಲ್ಲಿ ಭಾರತಕ್ಕೆ ದೊಡ್ಡ ಶಕ್ತಿ ಬಂದಿದೆ ಎಂದರು.
Related Articles
Advertisement
ರಾಜ್ಯದಲ್ಲಿ ಕಾಂಗ್ರೆಸ್- ಜೆಡಿಎಸ್ ತುಷ್ಟೀಕರಣ ಮಾಡುತ್ತಿದೆ. ಕರ್ನಾಟಕವನ್ನು ಸಂಕಷ್ಟಕ್ಕೆ ಈಡು ಮಾಡಿದೆ. ಅವರ ತುಷ್ಟೀಕರಣ ನಡೆಯಲ್ಲ,ಕಾಂಗ್ರೆಸ್ ಪಿಎಫ್ಐ ಅವರ ಮೇಲಿನ ಕೇಸ್ ರದ್ದು ಮಾಡಿ ಅವರನ್ನ ಬಚಾವ್ ಮಾಡಿತು. ನಾವು ಆ ಸಂಘಟನೆ ಬ್ಯಾನ್ ಮಾಡಿ ಕ್ರಮ ಕೈಗೊಂಡಿದ್ದೇವೆ. ದೇಶದಲ್ಲಿ ಯಾವುದೇ ಸಂಘಟನೆ ದೇಶದ್ರೋಹಿ ಚಟುವಟಿಕೆ ನಡೆಸಿದರೆ ಅದನ್ನು ಬ್ಯಾನ್ ಮಾಡುವುದು ಖಚಿತ. ಇದು ಡಬಲ್ ಇಂಜಿನ್ ಸರ್ಕಾರದಿಂದ ಸಾಧ್ಯ ಎಂದರು.
ಸಶಕ್ತೀಕರಣಕ್ಕೆ ನಮ್ಮ ಅಭಿಯಾನ ನಡೆದಿದೆ. ಯುವ ಕಲ್ಯಾಣ, ಕೃಷಿ ಕಲ್ಯಾಣ, ಗ್ರಾಮೀಣ ಕಲ್ಯಾಣ, ನಗರ ಕಲ್ಯಾಣ ನಡೆದಿದೆ. ಡಬಲ್ ಇಂಜಿನ್ ಸರ್ಕಾರ ಅಧಿಕಾರಕ್ಕೆ ತನ್ನಿ. ನಾವು ಡಬಲ್ ಡೋಸ್ ಕೊಡುತ್ತೇವೆ ಎಂದರು.
ಒಂದು ಯೋಜನೆ ಮಾಡಲು ಕಾಂಗ್ರೆಸ್ ಗೆ ಐದು ವರ್ಷ ಬೇಕು. ಅವರ ಪಂಚ ವಾರ್ಷಿಕ ಯೋಜನೆ ಐದು ವರ್ಷಕ್ಕೆ ನಿಂತ ಹೋಗುತ್ತದೆ. ನಾವು ಯೋಜನೆ ಮಾಡುತ್ತೇವೆ, ನಾವೇ ಜಾರಿ ಮಾಡುತ್ತೇವೆ, ನಾವೇ ಉದ್ಘಾಟನೆ ಮಾಡುತ್ತೇವೆ ಎಂದರು.