Advertisement

Karnataka Election: ಮುಳುಗಿತೇನೋ ಎಂಬಂತಿದ್ದ ದೋಣಿಗಳು ದಡ ಸೇರಿದವು

12:42 AM May 16, 2023 | Team Udayavani |

ಇದು ಚುನಾವಣೋತ್ತರ ಫ‌ಲಿತಾಂಶ. ಮುಂದಿನ ಸಂದರ್ಭಕ್ಕೆ ಮಾಡುವ ತಯಾರಿ. ಶನಿವಾರ ವಿಧಾನಸಭಾ ಚುನಾವಣೆ ಫ‌ಲಿತಾಂಶ ಪ್ರಕಟವಾಗಿದೆ. ರಾಜ್ಯದಲ್ಲಿ ಬದಲಾವಣೆಯ ಗಾಳಿ ಪ್ರಬಲವಾಗಿ ಸುನಾಮಿಯಂತೆ ಬೀಸಿ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿದೆ. ಆದರೆ ಬಿಜೆಪಿ ಸಂಘಟನೆ ಸುನಾಮಿಯನ್ನು ತಡೆಯಲು ಮಾಡಿದ ಕೆಲವು ಪ್ರಯೋಗ ಹಾಗೂ ತಂತ್ರಗಾರಿಕೆ ಯಶಸ್ವಿಯಾಗಿದೆ. ಈ ಪ್ರಯತ್ನಕ್ಕೆ ಹಿಂದುತ್ವ ಪರ ಅಲೆಯೂ ಬಿಜೆಪಿಯ ಕೈ ಹಿಡಿಯಿತು. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಚುನಾವಣೆ ದಿನಾಂಕ ಘೋಷಣೆಗಿಂತ ಮೊದಲು ಇದ್ದ ಚಿತ್ರಣ ಕೆಲವೇ ದಿನಗಳಲ್ಲಿ ಸಂಪೂರ್ಣ ಬದಲಾಯಿತು. ಬಿಸಿಗಾಳಿ ನಿಧಾನವಾಗಿ ತಣ್ಣಗಾಗತೊಡಗಿತು.
ಕಡಲ ತೀರದಲ್ಲಿ ಗಾಳಿ ದಿಕ್ಕೂ ಬದಲಾದದ್ದು ವಿಶೇಷ.

Advertisement

ಬೆಳ್ತಂಗಡಿ: ಕಾಂಗ್ರೆಸ್‌ಗೆ ಸಾಕಷ್ಟು ಅವಕಾಶಗಳಿದ್ದವು, ಹಾಗೆಂದು ಬಿಜೆಪಿ ಕೈ ಚೆಲ್ಲಿ ಕುಳಿತುಕೊಳ್ಳಲಿಲ್ಲ
ಬೆಳ್ತಂಗಡಿ: ಒಂದೆಡೆ ಬಿಜೆಪಿಯ ಸಂಘಟನೆಯ ಬಲ, ಇನ್ನೊಂದೆಡೆ ಕಾಂಗ್ರೆಸ್‌ನ ಹಲವು ಹಿರಿಯರಲ್ಲಿ ಪುಟಿದೇಳದ ಉತ್ಸಾಹದ ಪರಿಣಾಮವೆಂಬಂತೆ ಕ್ಷೇತ್ರದಲ್ಲಿ ಬಿಜೆಪಿ ಮತ್ತೆ ಗೆದ್ದಿದೆ, ಕಾಂಗ್ರೆಸ್‌ ಸೋತಿದೆ. ಹಾಲಿ ಶಾಸಕ ಹರೀಶ್‌ ಪೂಂಜ ಅವರಿಗೆ ತಮ್ಮ ಅವಧಿಯ ಅಭಿವೃದ್ಧಿ ಕಾರ್ಯ ಬೆಂಬಲಕ್ಕಿತ್ತು. ಪ್ರತಿಸ್ಪರ್ಧಿ ಕಾಂಗ್ರೆಸ್‌ನ ರಕ್ಷಿತ್‌ ಶಿವರಾಂ ಅವರಿಗೆ ಹೊಸ ಮುಖ ಹಾಗೂ ಆರಂಭದಲ್ಲಿ ಜನರಲ್ಲಿ ಹುಟ್ಟಿಸಿದ ಭರವಸೆ ದಡ ತಲುಪಿಸಿಯಾವು ಎಂಬ ನಿರೀಕ್ಷೆ ಇತ್ತು. ಆದರೆ ಕಡೇ ಗಳಿಗೆಯ ಲೆಕ್ಕಾಚಾರ, ಅತಿ ಆತ್ಮವಿಶ್ವಾಸರಕ್ಷಿತ್‌ ಅವರನ್ನು ಸೋಲಿಸಿತೇ?-ಇದು ಫ‌ಲಿತಾಂಶೋತ್ತರ ಸಮೀಕ್ಷೆಯ ಅಂಶಗಳು.

ಹಾಲಿ ಶಾಸಕ ಹರೀಶ್‌ ಪೂಂಜ ಅವರ ಸ್ಪರ್ಧೆ ಬಗ್ಗೆ ಗೊಂದಲವಿರಲಿಲ್ಲ. ಆದರೆ ಕಾಂಗ್ರೆಸ್‌ನಲ್ಲಿ ಅಭ್ಯರ್ಥಿ ಆಯ್ಕೆ ಬಗ್ಗೆ ಪ್ರಶ್ನೆಗಳಿದ್ದವು. ಅವೆಲ್ಲವನ್ನೂ ಮೀರಿ ರಕ್ಷಿತ್‌ ಶಿವರಾಂ ಹೆಸರು ಘೋಷಣೆಯಾಯಿತು. ಆಗ ಜನರಲ್ಲಿ ಮೂಡಿದ್ದ ಭರವಸೆ ಹಾಗೂ ತಮ್ಮ ಸಮಾಜ ಸೇವೆಯನ್ನು ನಂಬಿದ್ದರು ರಕ್ಷಿತ್‌. ಆದರೆ ಅವು ನಿರೀಕ್ಷಿತ ಫ‌ಲ ಕೊಡಲಿಲ್ಲ.
ಮಾಜಿ ಶಾಸಕ ಕೆ. ವಸಂತ ಬಂಗೇರರನ್ನು ಬಿಟ್ಟರೆ ರಕ್ಷಿತ್‌ ಶಿವರಾಂ ಪರ ಬಲ ವಾದ ನಾಯಕರ್ಯಾರೂ ಗುರುತಿಸಿಕೊಳ್ಳಲಿಲ್ಲ. ಇದರ ಬೆನ್ನಿಗೇ ಎಲ್ಲ ಅವಕಾ ಶಗಳು ತಮ್ಮ ಪರ ಇದೆ ಎಂಬ ಅತಿ ಆತ್ಮವಿಶ್ವಾಸವೂ ಕೈ ಕೊಟ್ಟಿತು. ಕಾಂಗ್ರೆಸ್‌ ಗ್ಯಾರಂಟಿ ಕಾರ್ಡನ್ನು ಎಲ್ಲ ಮತದಾರರಿಗೂ ತಲುಪಿಸುವಲ್ಲಿ ಸಂಪೂರ್ಣ ಯಶ ಸ್ವಿಯಾಗಲಿಲ್ಲ. ಪ್ರತಿಯಾಗಿ ಬಿಜೆಪಿ, ಇದು ಸುಳ್ಳು ಭರವಸೆ ಎಂಬುದನ್ನು ಮತದಾರರಿಗೆ ಮನ ದಟ್ಟು ಮಾಡಲು ಶಕ್ತಿ ಮೀರಿ ಪ್ರಯತ್ನಿಸಿತು. ಈ ಮಧ್ಯೆ ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್‌ನ ಬಜ ರಂಗದಳ ನಿಷೇಧ ವಿಷಯವೂ ಬಿಜೆಪಿ ನೆರವಿಗೆ ಬಂದಿತು.

ಗೌಡ ಸಮುದಾಯದ ಮತ ನಿರೀಕ್ಷಿಸಿದಷ್ಟು ಬಾರದಿರುವುದು ಕಾಂಗ್ರೆಸ್‌ಗೆ ಹಿನ್ನಡೆಯಾಯಿತು. ಹಿಂದುತ್ವ ಮತ್ತು ಮೂಲ ಆರೆಸ್ಸೆಸ್‌ ಬಿಲ್ಲವರನ್ನು ಸಂಘಟಿಸಲು ಪ್ರಯತ್ನಿಸಿತು. ಸತ್ಯಜಿತ್‌ ಸುರತ್ಕಲ್‌ ರಕ್ಷಿತ್‌ ಪರ ಪ್ರಚಾರ ನಡೆಸಿದರೂ ನಿರೀಕ್ಷಿಸಿದಷ್ಟುಮತ ಪರಿವರ್ತನೆ ಆಗಲಿಲ್ಲ. ಸಿಪಿಐ(ಎಂ) ಸ್ಪರ್ಧಿಸಿರಲಿಲ್ಲ. ಇದರ ಲಾಭವನ್ನು ಕಾಂಗ್ರೆಸ್‌ ಪಡೆಯಲಿಲ್ಲ. ಜಿಲ್ಲಾ ಧ್ಯಕ್ಷರ ತವರೂ ಇದೇ. ಆದರೂ ನಗರ ಹಾಗೂ ಬ್ಲಾಕ್‌ ಮಟ್ಟದಲ್ಲಿ ಸಂಘಟನೆ ಮತ್ತಷ್ಟು ಜೋರಾಗಬೇಕಿತ್ತು.

ಹರೀಶ್‌ ಪೂಂಜರಿಗೂ ನಿರೀಕ್ಷಿಸಿದಷ್ಟು ಮತ ಕ್ರೋಡೀಕರಣವಾಗಿಲ್ಲ. 40 ಸಾವಿರ ಅಂತರದ ನಿರೀಕ್ಷೆ ಇತ್ತು. ಕೆಲವರು ಪಕ್ಷದಲ್ಲಿದ್ದೇ ಕಾಂಗ್ರೆಸ್‌ಗೆ ಪರೋಕ್ಷ ಬೆಂಬಲ ನೀಡಿದರೆಂಬ ಆಪಾದನೆಇದೆ. 241 ಬೂತ್‌ಗಳ ಪೈಕಿ 77 ರಲ್ಲಿ ಆಗಿರುವ ಹಿನ್ನಡೆ ಆಘಾತವೇ. ಕಾಂಗ್ರೆಸ್‌ಗೆ ಇನ್ನೂ ಉತ್ತಮ ಪ್ರದ ರ್ಶನ ನೀಡಲು ಅವಕಾಶವಿತ್ತು, ನೀಡಲಿಲ್ಲ ಎನ್ನಿ ಸುತ್ತಿದೆ. ಬಿಜೆಪಿಗೂ ಈ ಚುನಾವಣೆ ಕಲಿಯಲು ಹೊಸ ಪಠ್ಯ ನೀಡಿದೆ. ಬಹುತೇಕ ಕಾರ್ಯಕರ್ತರೊಂದಿಗೆ ಉತ್ತಮ ಸಂಬಂಧ ಎಂದರೆ ಅದು ಪೂರ್ಣ ಎಂಬುದಕ್ಕೆ ಸಮನಲ್ಲ ಎಂಬುದು. ಹಾಗಾಗಿ ಕ್ಷೇತ್ರದ ಒಟ್ಟೂ ಕಾರ್ಯಕರ್ತರು, ಪೂರಕ ಸಂಘಟನೆಗಳನ್ನು ಮತ್ತಷ್ಟು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಬಿಜೆಪಿಗೆ, ಶಾಸಕರಿಗೆ ಅನಿವಾರ್ಯ.

Advertisement

ಬಿಜೆಪಿ ಗೆಲುವಿಗೆ ಕಾರಣಗಳು
01 ಕಳೆದ ಅವಧಿಯಲ್ಲಿ ಶಾಸಕರು ನಡೆಸಿದ ಅಭಿವೃದ್ಧಿ ಕಾರ್ಯಗಳು ಹಾಗೂ ಮತದಾರರೊಂದಿಗಿನ ಸಂಪರ್ಕ
02ಕಾಂಗ್ರೆಸ್‌ ಗ್ಯಾರಂಟಿ ಕಾರ್ಡ್‌ ಸುಳ್ಳು ಎಂಬುದಾಗಿ ಮತದಾರರಿಗೆ ಮನವರಿಕೆ ಮಾಡುವಲ್ಲಿ ಬಿಜೆಪಿ ಭಾಗಶಃ ಯಶಸ್ವಿಯಾದದ್ದು
03 ಕಾಂಗ್ರೆಸ್‌ ಅತಿಯಾದ ಆತ್ಮವಿಶ್ವಾಸ, ಜಾತಿ ಆಧಾರದಲ್ಲಿ ನಿರೀಕ್ಷಿಸಿದಷ್ಟು ಮತ ಸೆಳೆಯಲು ವಿಫ‌ಲವಾದುದು
**
ಬೈಂದೂರು: ಹಿರಿಯರ ಬದಲು ಕಿರಿಯನ ಕೈ ಯನ್ನೇ ಮತದಾರರು ಹಿಡಿದರು
ಬೈಂದೂರು: ರೋಚಕ ಹಣಾಹಣಿ ಇದ್ದದ್ದು ಬೈಂದೂರು ಕ್ಷೇತ್ರದಲ್ಲಿ. ಇಲ್ಲಿ ಹಿರಿಯ ಹಾಗೂ ಕಿರಿಯರ ಮಧ್ಯೆ ಜಿದ್ದಾಜಿದ್ದಿಯ ಹೋರಾಟ. ಬಿಜೆಪಿಯ ಗುರುರಾಜ್‌ ಗಂಟಿಹೊಳೆ ಹೊಸಮುಖ ಹಾಗೂ ಕಿರಿಯರಾಗಿದ್ದರೆ, ಕಾಂಗ್ರೆಸ್‌ನ ಕೆ. ಗೋಪಾಲ ಪೂಜಾರಿ ಹಿರಿಯ ಹಾಗೂ ಹಳೇ ಹುಲಿ.

ಇಲ್ಲಿ ಮುಖ್ಯವಾಗಿ ಬಿಜೆಪಿಯು ಒಳ ಏಟನ್ನು ಮೆಟ್ಟಿ ನಿಂತು ತಂತ್ರಗಾರಿಕೆ, ಸಂಘಟನೆ ಹಾಗೂ ಕಾರ್ಯಕರ್ತರ ಬಲದಿಂದಲೇ ಗೆದ್ದರೆ, ಈ ಬಾರಿ ಹೇಗಾದರೂ ಗೆಲ್ಲುತ್ತೇವೆ ಅನ್ನುವ ಅತಿಯಾದ ಆತ್ಮವಿಶ್ವಾಸ ಕಾಂಗ್ರೆಸ್‌ಗೆ ಮುಳುವಾಯಿತು ಎನ್ನುತ್ತಿದೆ ಫ‌ಲಿತಾಂಶೋತ್ತರ ಸಮೀಕ್ಷೆ.

ನಾಲ್ಕು ಬಾರಿ ಶಾಸಕರಾಗಿದ್ದು, ಎರಡು ಬಾರಿ ಸೋತಿದ್ದ ಗೋಪಾಲ ಪೂಜಾರಿಯವರು 7ನೇ ಬಾರಿಗೆ ಕಣಕ್ಕಿಳಿದಿದ್ದರು. ಇದು ಕೊನೆಯ ಚುನಾವಣೆಯಾಗಿದ್ದು, ಗೆದ್ದು ರಾಜಕೀಯ ನಿವೃತ್ತಿ ಪಡೆಯುವೆ ಎಂದಿದ್ದರು. ಶಾಸಕರಾಗಿದ್ದ ಬಿ.ಎಂ. ಸುಕುಮಾರ ಶೆಟ್ಟರಿಗೆ ಟಿಕೆಟ್‌ ಕೊಡದೇ, ಹೊಸಮುಖವನ್ನು ಪರಿಚಯಿಸಿದ್ದ ಬಿಜೆಪಿ ವಿರುದ್ಧ ಗೆಲುವು ಸುಲಭ ಅನ್ನುವ ಲೆಕ್ಕಾಚಾರ ದಲ್ಲಿದ್ದಕಾಂಗ್ರೆಸ್‌ ನ ಲೆಕ್ಕಚಾರವನ್ನೆಲ್ಲ ಫಲಿತಾಂಶ ಉಲ್ಟಾ ಮಾಡಿದೆ.

ಬಿಜೆಪಿಯ ಪ್ರಯೋಗದ ಭಾಗವೆಂಬಂತೆ ಸುಕುಮಾರ್‌ ಶೆಟ್ಟಿ ಬದಲು ಆರೆಸ್ಸೆಸ್‌ ಕಟ್ಟಾಳು, ಹೊಸಮುಖ ಗುರುರಾಜ್‌ ಗಂಟಿಹೊಳೆ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದಾಗ ಆರಂಭದಲ್ಲಿ ಸ್ವಲ್ಪ ಮಟ್ಟಿಗೆ ಹಿನ್ನಡೆ ಅನುಭವಿಸಿದ್ದು ಸುಳ್ಳಲ್ಲ. ಇದನ್ನು ಪಕ್ಷದ ನಾಯಕರೇ ಒಪ್ಪಿಕೊಳ್ಳುತ್ತಾರೆ. ಆದರೆ ಅದಕ್ಕೆ ತನ್ನದೇ ಆದ ತಂತ್ರಗಾರಿಕೆಯನ್ನು ರೂಪಿಸಿಕೊಂಡ ಬಿಜೆಪಿಗರು, ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಯಶಸ್ವಿಯಾದರು. ಕೊನೆಯ 25 ದಿನಗಳ ಕಾಲ ಸಂಘಟಿತ ಹೋರಾಟ, ಸಂಘಟಿತ ಕಾರ್ಯ ಪ್ರವೃತ್ತಿ, ನಾಯಕರು ಸಕ್ರಿಯರಾಗಿ ತೊಡಗಿಸಿ ಕೊಳ್ಳದಿದ್ದರೂ ಸವಾಲಾಗಿ ಸ್ವೀಕರಿಸಿದ ಕಾರ್ಯಕರ್ತರು ಸ್ವತಃ ಮುಂದಾಗಿ ಪರಿಶ್ರಮ ಪಟ್ಟು ಪ್ರಚಾರ ನಡೆಸಿರುವುದು ಫಲ ಕೊಟ್ಟಿತು.

ಸೂಕ್ತ ತಂತ್ರಗಾರಿಕೆ ರೂಪಿಸುವಲ್ಲಿ ಎಡವಿರುವುದು ಕಾಂಗ್ರೆಸ್‌ ಹಿನ್ನಡೆಗೆ ಕಾರಣ. ಹಿಂದುತ್ವ, ಬಜರಂಗ ದಳ ನಿಷೇಧ ವಿಚಾರ ಪ್ರಣಾಳಿಕೆಯಲ್ಲಿ ಸೇರಿಸಿದದು ಹೊಡೆತ ನೀಡಿತು. ಅಲ್ಲದೆ ಅದು ಅನುಕಂಪ, ಜಾತಿ ಬಲವನ್ನು ಅತಿಯಾಗಿ ನೆಚ್ಚಿಕೊಂಡಿರುವುದು ಮುಳುವಾಗಿದೆ. ಜತೆಗೆ ಕಾಂಗ್ರೆಸ್‌ ಕಡೆಯಿಂದ ಸ್ಟಾರ್‌ ಪ್ರಚಾರಕರಿಲ್ಲದೆ ಇದ್ದುದು, ಸಭೆ, ಸಮಾವೇಶಗಳಿಗಿಂತ ಮನೆ-ಮನೆ ಪ್ರಚಾರಕ್ಕೆ ಒತ್ತು ಕೊಟ್ಟಿರುವುದು ಮುಳುವಾಯಿತು.

182 ಬೂತ್‌ಗಳಲ್ಲಿ ಬಿಜೆಪಿ ಮುನ್ನಡೆ
ಬೈಂದೂರಿನ ಒಟ್ಟು 246 ಬೂತ್‌ಗಳ ಪೈಕಿ ಈ ಬಾರಿ 182 ಬೂತ್‌ಗಳಲ್ಲಿ ಬಿಜೆಪಿ ಮುನ್ನಡೆ ಗಳಿಸಿದೆ. ಕಳೆದ ಬಾರಿ 153 ಬೂತ್‌ಗಳಲ್ಲಿ ಮುನ್ನಡೆ ಸಾಧಿಸಿತ್ತು. ಅಂದರೆ ಬೂತ್‌ವಾರು 29 ಕಡೆ ಮುನ್ನಡೆ ಹೆಚ್ಚಿಸಿಕೊಂಡಿದೆ.

ಕಾಂಗ್ರೆಸ್‌ ಈ ಬಾರಿ 63 ಬೂತ್‌ಗಳಲ್ಲಿ ಕಾಂಗ್ರೆಸ್‌ ಮುನ್ನಡೆ ಸಾಧಿಸಿತ್ತು. ಕಳೆದ ಬಾರಿ 93 ಬೂತ್‌ಗಳಲ್ಲಿ ಮುನ್ನಡೆ ಸಾಧಿಸಿತ್ತು. ಅಂದರೆ ಕಳೆದ ಬಾರಿಗಿಂತ ಈ ಬಾರಿ 30 ಬೂತ್‌ಗಳಲ್ಲಿ ಹಿನ್ನಡೆ ಪಡೆದಿದೆ. ಈ ಬಾರಿ 1 ಕಡೆ ಬೂತ್‌ ಸಂಖ್ಯೆ 88 ರಲ್ಲಿ ಇಬ್ಬರಿಗೂ ತಲಾ 510 ಮತಗಳು ಸಿಕ್ಕಿವೆ.

ಬಿಜೆಪಿ ಗೆಲುವಿಗೆ ಕಾರಣಗಳು
1 ಸಾಮಾನ್ಯ ಕಾರ್ಯಕರ್ತನೇ ಅಭ್ಯರ್ಥಿ ಅನ್ನುವ ಘೋಷ ವಾಕ್ಯ
2 ಹೊಸಮುಖ, ಸರಳ ವ್ಯಕ್ತಿತ್ವದ ವರ್ಚಸ್ಸು , ಕಾರ್ಯಕರ್ತರ ಶ್ರಮ
3 ಅಮಿತ್‌ ಶಾ, ಅಣ್ಣಾಮಲೈ, ಬಿಎಸ್‌ವೈ, ಚಿತ್ರ ತಾರೆಯರ ಪ್ರಚಾರ
**
ಮಂಗಳೂರು ನಗರ ದಕ್ಷಿಣ: ಮತದಾರರೊಂದಿಗಿನ ಸಂಬಂಧ ಮತ್ತೆ ಬಿಜೆಪಿಯನ್ನು ದಡಕ್ಕೆ ತಲುಪಿಸಿತು
ಮಂಗಳೂರು: ಮತದಾರರೊಂದಿಗಿದ್ದ ಒಡನಾಟ ಈ ಬಾರಿ ಬಿಜೆಪಿಯನ್ನು ಮತ್ತೆ ದಡಕ್ಕೆ ಸೇರಿಸಿತೇ? ಹೌದೆನ್ನುತ್ತದೆ ಫ‌ಲಿತಾಂಶೋತ್ತರ ಸಮೀಕ್ಷೆ. ಹಾಲಿ ಶಾಸಕ ವೇದವ್ಯಾಸ ಕಾಮತ್‌ ರ ಈ ಹಿಂದಿ ಗಿಂತಲೂ ಹೆಚ್ಚಿನ ಮತಗಳ ಜಯದಲ್ಲಿ ಹಿಂದುತ್ವದ ಅಲೆಯೊಂದಿಗೆ ಮತದಾರರೊಂದಿಗಿನ ಸಂಬಂಧದ ಪಾಲಿದೆ ಎಂಬುದರ ಜತೆ, ಟಿಕೆಟ್‌ ಘೋಷಣೆಯಲ್ಲಿ ವಿಳಂಬದ ಜತೆ ಕ್ಷೇತ್ರದ ನಾಯಕರು ಪ್ರಚಾರದಲ್ಲಿ ತಮ್ಮನ್ನು ಹೆಚ್ಚಾಗಿ ತೊಡಗಿಸಿಕೊಳ್ಳುವಲ್ಲಿ ವಿಫ‌ಲವಾ ದದ್ದು ಕಾಂಗ್ರೆಸ್‌ ಗೆ ಹಿನ್ನಡೆಯಾಯಿತು ಎಂದು ವಿಶ್ಲೇಷಿಸಲಾಗುತ್ತಿದೆ.

2018ರ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅಲೆ ಜೋರಾಗಿದ್ದ ಸಂದರ್ಭ ಹೊಸ ಮುಖವಾಗಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ವೇದವ್ಯಾಸ ಕಾಮತ್‌ 16,075 ಮತಗಳ ಅಂತರದಲ್ಲಿ ಜಯ ಕಂಡಿದ್ದರೆ, ಈ ಬಾರಿ ಅದೇ ಎದುರಾಳಿ ಕಾಂಗ್ರೆಸ್‌ನ ಜೆ.ಆರ್‌. ಲೋಬೋ ಅವರನ್ನು 23,962 ಮತಗಳಿಂದ ಸೋಲಿಸಿದರು.

ಬದಲಾವಣೆಯ ಮಾತು ಕೇಳಿಬಂದಿದ್ದರೂ ವೇದ ವ್ಯಾಸ ಕಾಮತ್‌ರಿಗೆ ತಮಗೆ ಅವಕಾಶ ಸಿಗುತ್ತದೆಂಬ ನಂಬಿಕೆಯಿತ್ತು. ಚುನಾವಣೆಯ ಮಾಹಿತಿ ಇದ್ದ ಕಾರಣ ನಾಲ್ಕೈದು ತಿಂಗಳು ಮುಂಚಿತ ವಾಗಿಯೇ ಹಲವು ಸುತ್ತಿನಲ್ಲಿ ಮನೆ ಭೇಟಿ, ಕಾರ್ನರ್‌ ಸಭೆಗಳು, ಪಕ್ಷದ ವಿವಿಧ ವಿಭಾಗಗಳ ಕ್ಷೇತ್ರ ಮಟ್ಟದ ಸಭೆ, ಸಮಾವೇಶಗಳ ಮೂಲಕ ಮತದಾರರನ್ನು ತಲುಪುವ ಕಾರ್ಯ ಬಿಜೆಪಿಯಿಂದ ನಡೆದಿತ್ತು. ಈ ಮಧ್ಯೆ ಕಾಂಗ್ರೆಸ್‌ ಗ್ಯಾರಂಟಿ ಹಂಚಿಕೆಯನ್ನು ಸದ್ದಿಲ್ಲದೆ ಕಾರ್ಯಕರ್ತರು ಮನೆಗಳಿಗೆ ತಲುಪಿಸುವ ಕಾರ್ಯ ಮಾಡಿದ್ದರು. ಆದರೆ ಕಾಂಗ್ರೆಸ್‌ನಿಂದ ಕ್ಷೇತ್ರದ ಅಭ್ಯರ್ಥಿ ಘೋಷಣೆ ವಿಳಂಬವಾದದ್ದನ್ನೂ ಬಿಜೆಪಿ ಪ್ರಚಾರದ ವೇಳೆ ಎದುರಾಳಿ ಪಕ್ಷವನ್ನು ಹಣಿಯುವ ಪ್ರಮುಖ ಸಾಧನವಾಗಿಸಿಕೊಂಡಿತ್ತು.

ಕಾಂಗ್ರೆಸ್‌ ಟಿಕೆಟ್‌ ಕಗ್ಗಂಟು
ಕಾಂಗ್ರೆಸ್‌ನಲ್ಲಿ ಹಲವು ಆಕಾಂಕ್ಷಿಗಳ ನಡುವೆ ಇಂಥದ್ದೇ ಸಮುದಾಯಕ್ಕೆ ಟಿಕೆಟ್‌ ನೀಡಬೇಕೆಂಬ ಒತ್ತಡ ಕಾಂಗ್ರೆಸ್‌ನಲ್ಲಿ ಟಿಕೆಟ್‌ ಘೋಷಣೆಯನ್ನು ತೀರಾ ಕಗ್ಗಂಟಾಗಿಸಿತ್ತು. ಕೊನೆಗೂ ವರಿಷ್ಠರು ತೂಗಿ ಅಳೆದು, ಹಲವು ಕಾರಣಗಳನ್ನು ಮುಂದಿಟ್ಟುಕೊಂಡು ಅಭ್ಯರ್ಥಿಯನ್ನು ಘೋಷಿಸಿತು. ಈ ವಿಳಂಬದ ಲಾಭವನ್ನು ಬಿಜೆಪಿ ತನ್ನ ಪ್ರಚಾರದ ಅವಕಾಶವಾಗಿ ಬಳಸಿಕೊಂಡಿದ್ದು ಸುಳ್ಳಲ್ಲ. ಕಾಂಗ್ರೆಸ್‌ ಅಭ್ಯರ್ಥಿ ಘೋಷಣೆಯಾಗಿ ಪ್ರಚಾರಕ್ಕೆ ಇಳಿಯುವ ಹೊತ್ತಿಗೇ ಬಿಜೆಪಿ ಸಾಕಷ್ಟು ವಾರ್ಡ್‌ ಗಳಲ್ಲಿ ಮತದಾರರನ್ನು ತಲುಪಿಯಾಗಿತ್ತು. ಈ ಮಧ್ಯೆ ಕೇಂದ್ರ ಸಚಿವ ಅಮಿತ್‌ ಶಾ ಅವರ ರೋಡ್‌ ಶೋ ಪಕ್ಷದ ಕಾರ್ಯ ಕರ್ತರಲ್ಲಿ ಜೋಶ್‌ ತುಂಬಿದರೆ, ಪ್ರಚಾರದಲ್ಲಿ ಬಿಜೆಪಿ ಹಾಗೂ ಸಂಘ ಪರಿವಾರದ ಕಾರ್ಯಕರ್ತರು ಸಕ್ರಿಯರಾಗಿ ತೊಡಗಿಸಿಕೊಂಡರು.

ಕಾಂಗ್ರೆಸ್‌ನಿಂದ ಬಿಲ್ಲವ ಸಮುದಾಯಕ್ಕೆ ಅವ ಕಾಶ ಸಿಗಲಿದೆ ಎಂಬ ನಿರೀಕ್ಷೆ ಕೊನೆ ಕ್ಷಣದಲ್ಲಿ ಸುಳ್ಳಾದಾಗ ಸಮುದಾಯಕ್ಕೆ ಬೇಸರವಾದದ್ದು ನಿಜ. ಆ ಆಂತರಿಕ ಬೇಗುದಿಯನ್ನು ಎಷ್ಟು ಸಾಧ್ಯವೋ ಅಷ್ಟು ನಗದೀಕರಿಸಿಕೊಳ್ಳಲು ಬಿಜೆಪಿ ಮುಂದಾಗಿ ಒಂದು ಹಂತಕ್ಕೆ ಯಶಸ್ವಿಯಾಯಿತು. ಮತ್ತೂಂದೆಡೆ ಕಾಂಗ್ರೆಸ್‌ನಿಂದ ಪ್ರಚಾರ ಕಾರ್ಯ ಬಿರುಸಾಗಿ ನಡೆಯಿತಾದರೂ ಮತವಾಗಿ ಪರಿ ವರ್ತನೆಯಾಗಲಿಲ್ಲ. ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳ ಜತೆ ಜಿಎಸ್‌ಬಿ ಸಮುದಾಯದ ಹಿರಿಯ ನಾಯಕ ಸತೀಶ್‌ ಪ್ರಭು ಅವರ ಸೇರ್ಪಡೆ ಬಲ ತುಂಬಲಿದೆ ಎಂಬ ನಿರೀಕ್ಷೆಯೂ ಫ‌ಲ ನೀಡಲಿಲ್ಲ.

ಬಿಜೆಪಿ ಗೆಲುವಿಗೆ ಕಾರಣಗಳು
01 ಶಾಸಕರು ಮತದಾರರ ಜತೆಗೆ ಹೊಂದಿದ್ದ ಒಡನಾಟ
02 ಸಂಘ ಪರಿವಾರ ಮತ್ತು ಬಿಜೆಪಿ ಕಾರ್ಯಕರ್ತರ ಪರಿಶ್ರಮ
03 ಬಿಜೆಪಿಯ ತಳಮಟ್ಟದ ಪಕ್ಷ ಸಂಘ ಟನೆ, ಅಮಿತ್‌ ಶಾ ರೋಡ್‌ ಶೋ

Advertisement

Udayavani is now on Telegram. Click here to join our channel and stay updated with the latest news.

Next