Advertisement
ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಪ್ರಕಟಿಸಿದ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಜೆ.ಲೋಕೇಶ್, ಗುರುವಾರ ನಡೆದ ನಾಟಕ ಅಕಾಡೆಮಿಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಹಿರಿಯ ರಂಗಕರ್ಮಿ ಹೆಗ್ಗೊàಡು ಪ್ರಸನ್ನ ಅವರನ್ನು ಅಕಾಡೆಮಿಯ 2017ನೇ ಸಾಲಿನ ಜೀವಮಾನ ಗೌರವ ಪ್ರಶಸ್ತಿಗೆ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಪ್ರಶಸ್ತಿಯು 50 ಸಾವಿರ ರೂ. ನಗದನ್ನೊಳಗೊಂಡಿದೆ ಎಂದು ತಿಳಿಸಿದರು. ವಾರ್ಷಿಕ ರಂಗ ಪ್ರಶಸ್ತಿಯು 25 ಸಾವಿರ ರೂ. ನಗದು ಒಳಗೊಂಡಿದೆ.
ಮಂಡ್ಯ ರಮೇಶ್ (ನಟ, ನಿರ್ದೇಶಕ-ಮೈಸೂರು), ಎಸ್.ಎಸ್.ಗಾಯಿತ್ರಿ (ನಟಿ, ಪೌರಾಣಿಕ), ಕೃಷ್ಣಮೂರ್ತಿ ಕವತ್ತಾರು (ನಟ, ನಿರ್ದೇಶಕ -ದಕ್ಷಿಣ ಕನ್ನಡ), ಕೆ.ರಾಮಕೃಷ್ಣಯ್ಯ (ನಟ, ಪ್ರಾಧ್ಯಾಪಕ-ಚಿಕ್ಕಬಳ್ಳಾಪುರ), ನಾಗಿಣಿ ಭರಣ (ವಸ್ತ್ರವಿನ್ಯಾಸಕಿ-ಬೆಂಗಳೂರು), ಎಲ್.ಎನ್.ಮುಕುಂದರಾಜ್ (ಸಂಘಟಕ, ನಾಟಕಕಾರ), ನಾಗೇಶ್ ಕಶ್ಯಪ್ (ನಟ, ನಿರ್ದೇಶಕ), ಕೆ.ರೇವಣ್ಣ (ನಟ, ಸಂಘಟಕ), ಕಮಲ ವಿ.ರಾವ್ (ನೇಪಥ್ಯ, ವಸ್ತ್ರವಿನ್ಯಾಸಕಿ), ದಯಾನಂದ ಶೆಟ್ಟಿ (ವೃತ್ತಿ ರಂಗಭೂಮಿ -ಉಡುಪಿ), ಭೋಗ ನರಸಿಂಹ (ವೃತ್ತಿ ರಂಗಭೂಮಿ -ತುಮಕೂರು), ಮರಿಯಮ್ಮನಹಳ್ಳಿಯ ಡಿ.ಹನುಮಕ್ಕ (ವೃತ್ತಿ, ಪೌರಾಣಿಕ, ಹವ್ಯಾಸಿ ನಟಿ), ಶಾರದ ಅರವಿಂದ ರಾಸೂರು (ವೃತ್ತಿ ರಂಗಭೂಮಿ, ನಟಿ -ಬಾಗಲಕೋಟೆ), ರಂಗಪ್ಪ ಲ.ಕಟಗೇರಿ (ಅಣ್ಣಪ್ಪ) (ವೃತ್ತಿ ರಂಗಭೂಮಿ, ನಟ), ಉಲಿವಾಲ ಮೋಹನ್‌ಕುಮಾರ್ (ನಟ, ಸಂಘಟಕ-ಹಾಸನ), ಗುರುನಾಥ್ ಬಿ.ಹೂಗಾರ್ (ನಟ, ನೇಪಥ್ಯ – ಕಲಬುರಗಿ), ಎಂ.ಪಂಪಣ್ಣ ಕೊಗಳಿ (ವೃತ್ತಿರಂಗಭೂಮಿ, ನಿರ್ದೇಶಕ -), ವೆಂಕಟೇಶ್ ಅಲ್ಕೋಡ್ (ರಂಗಸಂಗೀತ -ರಾಯಚೂರು), ಮಹದೇವ ಎಂ.ಗುಟಿÉ (ಪ್ರಸಿದ್ಧ ಸ್ತ್ರೀ ಪಾತ್ರಧಾರಿ ನಟ -ಜಮಖಂಡಿ), ಚಂದ್ರಶೇಖರ ಜಿಗಜಿನ್ನಿ (ನಟ, ನಿರ್ದೇಶಕ – ಧಾರವಾಡ), ಸುರೇಖಾ ತಾಳೀಕೋಟೆ (ವೃತ್ತಿ ರಂಗಭೂಮಿ ನಟಿ -ವಿಜಯಪುರ), ಬಿ.ರವಿಕುಮಾರ್ (ನಟ, ನಿರ್ದೇಶಕ -ಚಿಕ್ಕಮಗಳೂರು), ಎಸ್.ಸೋಮಶೇಖರಯ್ಯ (ವೃತ್ತಿ ರಂಗಭೂಮಿ, ನಟ -ಮಂಡ್ಯ), ಕಲ್ಕರೆ ನರಸಿಂಹಮೂರ್ತಿ (ಪೌರಾಣಿಕ, ಹಾರ್ಮೋನಿಯಂ -ತುಮಕೂರು), ಮಂಚೇಗೌಡ (ನೇಪಥ್ಯ -ರಾಮನಗರ). ದತ್ತಿ ಪ್ರಶಸ್ತಿಗಳು
ಕಲ್ಚರ್ ಕಾಮಿಡಿಯನ್ ಮಾಸ್ಟರ್ ಕೆ.ಹಿರಣ್ಣಯ್ಯ ದತ್ತಿ ಪ್ರಶಸ್ತಿಗೆ ಹಾಸನದ ನಟ ಚೌಡಪ್ಪ ದಾಸ್, ನಟರತ್ನ ಚಿಂದೋಡಿ ವೀರಪ್ಪನವರ ದತ್ತಿ ಪ್ರಶಸ್ತಿಗೆ ರಂಗ ಧಾರವಾಡದ ನಿರ್ದೇಶಕ ಬಸವರಾಜ ಬೆಂಗೇರಿ ಅವರು ಆಯ್ಕೆಯಾಗಿದ್ದಾರೆ.
Related Articles
Advertisement