Advertisement

ಶಿರಾಡಿ: ಮೊದಲು ಚತುಷ್ಪಥ; ಬಳಿಕ ಸುರಂಗ ಸಹಿತ ಷಟ್ಪಥ

01:00 AM Mar 01, 2022 | Team Udayavani |

ಮಂಗಳೂರು: ಮಂಗಳೂರು-ಬೆಂಗಳೂರು ರಾ. ಹೆದ್ದಾರಿಯಲ್ಲಿ ಶಿರಾಡಿ ಘಾಟಿ ಪ್ರದೇಶದಲ್ಲಿ ಮೊದಲ ಹಂತದಲ್ಲಿ ಈಗಿರುವ ಹೆದ್ದಾರಿ ಭಾಗದಲ್ಲಿಯೇ ಚತುಷ್ಪಥ ರಸ್ತೆ ನಿರ್ಮಾಣ ಮಾಡಲಾಗುವುದು ಹಾಗೂ ಬಳಿಕ ಎರಡನೇ ಹಂತದಲ್ಲಿ ಸುರಂಗ ಮಾರ್ಗ ಸೇರಿದಂತೆ 6 ಪಥದ ಹೆದ್ದಾರಿ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಹೇಳಿದರು.

Advertisement

ಅವರು ಸೋಮವಾರ ಕೆನರಾ ಚೇಂಬರ್‌ ಆಫ್‌ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರಿ ಸಂಸ್ಥೆಯು ಕ್ರೆಡೈ ಮಂಗಳೂರು ಸಹಕಾರದಲ್ಲಿ ನಗರದ ಓಷಿಯನ್‌ ಪರ್ಲ್ ಹೊಟೇಲ್‌ ಸಭಾಂಗಣದಲ್ಲಿ ವ್ಯವಸ್ಥೆ ಮಾಡಿದ್ದ ಸಭೆಯಲ್ಲಿ ಮಾತನಾಡಿದರು.

ಶಿರಾಡಿ ಘಾಟಿ ಪ್ರದೇಶದಲ್ಲಿ ಮಂಗಳೂರು- ಬೆಂಗಳೂರು ರಾ. ಹೆದ್ದಾರಿಯನ್ನು ವಂದೇ ಭಾರತ್‌ ಮಿಶನ್‌ ಯೋಜನೆ ಯಡಿ ಅಭಿವೃದ್ಧಿ ಪಡಿಸ ಬೇಕೆಂದು ಕೆನರಾ ಚೇಂಬರ್‌ಸಂಸ್ಥೆ ಪ್ರಾರಂಭದಲ್ಲಿ ಮನವಿ ಸಲ್ಲಿಸಿತು.

ಶಿರಾಡಿ ಘಾಟಿ ಪ್ರದೇಶದಲ್ಲಿ ಅರಣ್ಯ ಮತ್ತು ಪರಿಸರ ಇಲಾಖೆ ಗಳಿಂದ ಅನುಮತಿಯ ಸಮಸ್ಯೆ ಇತ್ತು. ರಾಜ್ಯ ಸರಕಾರವು ಈ ಸಮಸ್ಯೆಯನ್ನು ಬಗೆ ಹರಿಸಿ, ಭೂಸ್ವಾಧೀನ ಮಾಡಿ ಜಾಗ ಒದಗಿಸಿದರೆ ರಸ್ತೆ ನಿರ್ಮಾಣ ಮಾಡಲಾ ಗುವುದು. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜತೆಗೆ ಮಾತನಾಡಿದ್ದೇನೆ ಎಂದು ಸಚಿವರು ವಿವರಿಸಿದರು.

ಮನವಿ ಸಲ್ಲಿಕೆ
ರಾ.ಹೆ. 75 ಶಿರಾಡಿ ರಸ್ತೆ ಉಳಿಸಿ ಹೋರಾಟ ಸಮಿತಿಯ ವತಿಯಿಂದ ಅಧ್ಯಕ್ಷ ಸಂಜೀತ್‌ ಶೆಟ್ಟಿ ಅವರ ನೇತೃತ್ವದಲ್ಲಿ ಸಚಿವರಿಗೆ ಮನವಿ ಸಲ್ಲಿಸಲಾಯಿತು.

Advertisement

ಮಾರನಹಳ್ಳಿಯಿಂದ ಸಕಲೇಶಪುರದ ವರೆಗಿನ 75 ಕಿ.ಮೀ. ವರೆಗಿನ ರಸ್ತೆ ಕೆಟ್ಟು ಹೋಗಿದ್ದು, ಕೂಡಲೇ ದುರಸ್ತಿ ಮಾಡುವುದು, ಶಿರಾಡಿ ಘಾಟಿ ರಸ್ತೆಯನ್ನು ಮುಚ್ಚ ಬಾರದು ಹಾಗೂ ಮುಚ್ಚುವುದಾದರೆ ಒಂದು ರಸ್ತೆಯನ್ನು ಮಾತ್ರ ಮುಚ್ಚುವುದು, ಸಕಲೇಶಪುರ – ಹಾಸನ ಚತುಷ್ಪಥ ರಸ್ತೆ ಕಾಮಗಾರಿ ಕೂಡಲೇ ಪೂರ್ತಿ ಗೊಳಿಸಬೇಕೆಂದು ಮನವಿಯಲ್ಲಿ ವಿವರಿಸಲಾಗಿದೆ.

ಸಂಸದ ನಳಿನ್‌, ಸಚಿವ ಎಸ್‌. ಅಂಗಾರ, ಶಾಸಕರಾದ ವೇದವ್ಯಾಸ ಕಾಮತ್‌, ಡಾ| ಭರತ್‌ ಶೆಟ್ಟಿ, ಮೇಯರ್‌ ಪ್ರೇಮಾನಂದ ಶೆಟ್ಟಿ, ವಿಧಾನ ಪರಿಷತ್‌ ಸದಸ್ಯ ಪ್ರತಾಪಸಿಂಹ ನಾಯಕ್‌, ಕೋಲಾರ ಸಂಸದ ಮುನಿಸ್ವಾಮಿ ಉಪಸ್ಥಿತರಿದ್ದರು.

ಕೆನರಾ ಚೇಂಬರ್‌ ಆಫ್‌ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರಿಯ ಅಧ್ಯಕ್ಷ ಶಶಿಧರ ಪೈ ಮಾರೂರು ಸ್ವಾಗತಿಸಿದರು. ಗಣೇಶ್‌ ಕಾಮತ್‌ ಚೇಂಬರ್‌ನ ಮನವಿಯನ್ನು ವಾಚಿಸಿದರು.

ಪದಾಧಿಕಾರಿಗಳಾದ ಐಸಾಕ್‌ ವಾಸ್‌, ಪುಷ್ಪರಾಜ್‌ ಜೈನ್‌, ಜೀವನ್‌ ಸಲ್ಡಾನ್ಹಾ, ಅಬ್ದುಲ್‌ ರಹ್ಮಾನ್‌ ಮುಸ್‌ಬಾ, ಪಿ.ಎ. ನಝೀರ್‌ ಮತ್ತಿತರರು ಉಪಸ್ಥಿತರಿದ್ದರು.

ಸಚಿವ ಗಡ್ಕರಿ ಶಿಲಾನ್ಯಾಸ, ಲೋಕಾರ್ಪಣೆ: ಅಭಿವೃದ್ಧಿ ಕಾಮಗಾರಿ ವಿವರ
ಮಂಗಳೂರು: ಕೇಂದ್ರ ಭೂಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ,ಮೈಸೂರು, ತುಮಕೂರು ಒಳಗೊಂಡಂತೆ 7 ಜಿಲ್ಲೆಗಳ 3,163 ಕೋ.ರೂ. ವೆಚ್ಚದ 15 ವಿವಿಧ ಕಾಮಗಾರಿಗಳಿಗೆ ಸೋಮವಾರ ಶಿಲಾನ್ಯಾಸ, ಲೋಕಾರ್ಪಣೆಗೈದರು.

ದಕ್ಷಿಣ ಕನ್ನಡ ಜಿಲ್ಲೆ
-ರಾ.ಹೆ. 66ರ ಎನ್‌ಎಂಪಿಟಿ ಸಂಪರ್ಕಿಸುವ ಕೆಪಿಟಿ ಜಂಕ್ಷನ್‌ನಲ್ಲಿ ವಿಯುಪಿ ನಿರ್ಮಾಣಕ್ಕೆ ಶಿಲಾನ್ಯಾಸ.
-ಗುಂಡ್ಯ ಅಡ್ಡ ಹೊಳೆಯಿಂದ ಪೆರಿಯಶಾಂತಿಯ ವರೆಗೆ ಚತುಷ್ಪಥ ರಸ್ತೆ ನಿರ್ಮಾಣ ಶಿಲಾನ್ಯಾಸ.
-ಕಲ್ಲಡ್ಕ ಪೇಟೆಯಲ್ಲಿ 6 ಪಥದ ಮೇಲ್ಸೇತುವೆ ಕಾಮಗಾರಿ, ರಾ.ಹೆ. 169ರ ಶಿಲಾನ್ಯಾಸ.
-ಬಿಕರ್ನಕಟ್ಟೆ-ಸಾಣೂರು ನಡುವೆ ರಸ್ತೆ ಕಾಮಗಾರಿಗೆ ಶಿಲಾನ್ಯಾಸ.
-ಪುಂಜಾಲಕಟ್ಟೆಯಿಂದ 75 ಕಿ.ಮೀ.
ಚಾರ್ಮಾಡಿ ವರೆಗೆ ದ್ವಿಪಥ ರಸ್ತೆ ಅಭಿವೃದ್ಧಿಗೆ ಶಿಲಾನ್ಯಾಸ.
-ರಾ.ಹೆ. 275ರಲ್ಲಿ 8 ಕಿರು ಸೇತುವೆ
-ಬಿ.ಸಿ. ರೋಡ್‌-ಪುಂಜಾಲಕಟ್ಟೆ ಭಾಗದಲ್ಲಿ ದ್ವಿಪಥ ರಸ್ತೆ ಅಗಲೀಕರಣ ಲೋಕಾರ್ಪಣೆ.

ಉಡುಪಿ ಜಿಲ್ಲೆ

-ರಾ.ಹೆ. 66 ಅಂಬಲಪಾಡಿಯಲ್ಲಿ ಡಬಲ್‌ ಸೆಲ್‌ ವಿಯುಪಿ ನಿರ್ಮಾಣಕ್ಕೆ ಶಿಲಾನ್ಯಾಸ.
-ಕಟಪಾಡಿ ಜಂಕ್ಷನ್‌ನಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಶಿಲಾನ್ಯಾಸ.
-ಹೆಬ್ರಿಯಿಂದ ಪರ್ಕಳ ರಸ್ತೆ ಹಾಗೂ ಕರಾವಳಿ ಜಂಕ್ಷನ್‌ನಿಂದ ಮಲ್ಪೆಯ ವರೆಗೆ ಚತುಷ್ಪಥವಾಗಿ ಅಭಿವೃದ್ಧಿಗೆ ಶಿಲಾನ್ಯಾಸ.
-ಬೈಂದೂರು-ಕೊಲ್ಲೂರು- ಶಿಕಾರಿಪುರ-ರಾಣೆಬೆನ್ನೂರು ರಸ್ತೆಯನ್ನು ದ್ವಿಪಥ ರಸ್ತೆಗೆ ಶಿಲಾನ್ಯಾಸ.

Advertisement

Udayavani is now on Telegram. Click here to join our channel and stay updated with the latest news.

Next