Advertisement

Karnataka: ಗ್ರಾಮೀಣ ಆವಿಷ್ಕಾರ ನಿಧಿ ಸ್ಥಾಪನೆಗೆ ನಿರ್ಧಾರ: ಪ್ರಿಯಾಂಕ್‌ ಖರ್ಗೆ 

11:52 PM Dec 01, 2023 | Team Udayavani |

ಬೆಂಗಳೂರು: ಎಲಿವೇಟ್‌ ಕರ್ನಾಟಕ ಮಾದರಿಯಲ್ಲೇ ಗ್ರಾಮೀಣ ಪ್ರದೇಶಗಳಲ್ಲಿ ಸಾಮಾಜಿಕವಾಗಿ ಪೂರಕವಾದ ಪರಿಣಾಮ ಬೀರುವಂಥ ನವೋದ್ಯಮಗಳ ಆವಿಷ್ಕಾರಗಳನ್ನು ಉತ್ತೇಜಿಸಲು “ಗ್ರಾಮೀಣ ಆವಿಷ್ಕಾರ ನಿಧಿ” ಸ್ಥಾಪಿಸಲು ಸರಕಾರ ನಿರ್ಧರಿಸಿದೆ.

Advertisement

ಎಲಿವೇಟ್‌ ಯೋಜನೆ ಅಡಿ ನವೋದ್ಯಮಗಳಿಗೆ ಅಗತ್ಯ ಪ್ರೋತ್ಸಾಹ ನೀಡಲಾಗುತ್ತಿದೆ. ಅದೇ ರೀತಿ, “ಗ್ರಾಮೀಣ ಆವಿಷ್ಕಾರ ನಿಧಿ’ ಕಾರ್ಯನಿರ್ವಹಿಸಲಿದೆ. ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಪೂರಕವಾದ ಯೋಚನೆಗಳು, ಯೋಜನೆಗಳನ್ನು ಹೊಂದಿರುವ ನವೋದ್ಯಮಗಳನ್ನು ಇದರಡಿ ಪ್ರೋತ್ಸಾಹಿಸಲಾಗುವುದು. ಇದೊಂದು ವಿನೂತನ ಕಾರ್ಯಕ್ರಮವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಹಾಗೂ ಐಟಿ-ಬಿಟಿ ಸಚಿವ ಪ್ರಕಟಿಸಿದರು.

ನಗರದ ಅರಮನೆ ಆವರಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯವಾಗಿ ಶುದ್ಧ ಕುಡಿಯುವ ನೀರು, ರಸ್ತೆ ಒಳಗೊಂಡಂತೆ ಗ್ರಾಮೀಣ ಪ್ರದೇಶಗಳ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಯಾವುದೇ ಸ್ಟಾರ್ಟ್‌ಅಪ್‌ ಆಗಿರಬಹುದು. ಅವುಗಳನ್ನು ಉತ್ತೇಜಿಸಲು ಉದ್ದೇಶಿತ ನಿಧಿ ಅಡಿ 5 ಕೋಟಿ ರೂ. ನೀಡಲಾಗುವುದು ಎಂದು ಹೇಳಿದರು.

ಇದಲ್ಲದೆ, ಕೃಷಿಗೆ ಸಂಬಂಧಿಸಿದ ಆವಿಷ್ಕಾರಗಳನ್ನು ಉತ್ತೇಜಿಸಲು ಪರಿಚಯಿಸಲಾದ “ಅಗ್ರಿ ಗ್ರ್ಯಾಂಡ್‌ ಚಾಲೆಂಜ್‌-2’ರಡಿ ಕೂಡ ಅನುದಾನ ನೀಡಲಾಗುತ್ತಿದೆ. ಮುಖ್ಯವಾಗಿ ಸಸ್ಯ ಕೀಟ ಮತ್ತು ರೋಗಗಳ ನಿರ್ವಹಣೆ, ಕೊಯ್ಲೋತ್ತರ ನಷ್ಟ, ವಾಣಿಜ್ಯ ಬೆಳೆಗಳ ಸಂಸ್ಕರಣೆ ಮತ್ತು ಹೈನುಕೃಷಿಗೆ ಸಂಬಂಧಿಸಿದ ಯಾವುದೇ ಆವಿಷ್ಕಾರಗಳನ್ನು ಪ್ರೋತ್ಸಾಹಿಸಲು ಇದರಡಿ 15 ಕೋಟಿ ರೂ. ನೀಡಲಾಗುವುದು ಎಂದು ತಿಳಿಸಿದರು.

ಇದನ್ನು ಕೃಷಿ ಇಲಾಖೆ ಮತ್ತು ಕರ್ನಾಟಕ ಆವಿಷ್ಕಾರ ಮತ್ತು ತಂತ್ರಜ್ಞಾನ ಸಂಸ್ಥೆ ಹಾಗೂ ಸೆಂಟರ್‌ ಫಾರ್‌ ಸೆಲ್ಯುಲರ್‌ ಆಂಡ್‌ ಮಾಲ್ಯುಕ್ಯುಲರ್‌ ಪ್ಲಾಟ್‌ಫಾಮ್ಸ್‌ (ಸಿ-ಕ್ಯಾಂಪ್‌) ಸಹಯೋಗದಲ್ಲಿ ಅಗ್ರಿ ಗ್ರ್ಯಾಂಡ್‌ ಚಾಲೆಂಜ್‌ ಎರಡನೇ ಹಂತವನ್ನು ಪರಿಚಯಿಸಲಾಗುತ್ತಿದೆ. ಇದರಡಿ ಅನುದಾನ ನಿರೀಕ್ಷಿಸಲು ಸ್ಟಾರ್ಟ್‌ ಅಪ್‌ಗ್ಳು ಡಿ. 31ರ ಒಳಗೆ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ ಎಂದು ಸಚಿವರು ಮಾಹಿತಿ ನೀಡಿದರು.

Advertisement

ಗ್ಯಾರಂಟಿ: ಬಿಜೆಪಿ ನಿಲುವು ಪ್ರಕಟಿಸಲಿ
ರಾಜ್ಯದ ಜನರ ಸಾಮಾಜಿಕ- ಆರ್ಥಿಕ ಬದಲಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಐದು ಗ್ಯಾರಂಟಿಗಳ ವಿಚಾರದಲ್ಲಿ ದ್ವಂದ್ವ ನಿಲುವು ಹೊಂದಿರುವ ಬಿಜೆಪಿ, ಸ್ಪಷ್ಟವಾಗಿ ತನ್ನ ನಿಲುವು ಪ್ರಕಟಿಸಬೇಕು ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಆಗ್ರಹಿಸಿದ್ದಾರೆ.

ಟೆಕ್‌ ಸಮ್ಮಿಟ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯವನ್ನು ಆರ್ಥಿಕ ದುಃಸ್ಥಿತಿಗೆ ತಂದಿದ್ದು ಹಿಂದಿನ ರಾಜ್ಯ ಬಿಜೆಪಿ ಸರಕಾರ ಮತ್ತು ಕೇಂದ್ರ ಸರಕಾರದ ಆರ್ಥಿಕ ನೀತಿಗಳೇ ಹೊರತು ಗ್ಯಾರಂಟಿ ಯೋಜನೆಗಳಲ್ಲ. ಹಿಂದಿನ ರಾಜ್ಯ ಬಿಜೆಪಿ ಆಡಳಿತ ಅವಧಿಯಲ್ಲಿ ಕೋವಿಡ್‌ ಅಸಮರ್ಪಕ ನಿರ್ವಹಣೆ ಸಹಿತ ಹಲವು ಲೋಪದೋಷಗಳಿಂದ ಆರ್ಥಿಕ ದುಃಸ್ಥಿತಿ ಉಂಟಾಗಿದೆ ಹೊರತು, 2-3 ತಿಂಗಳ ಹಿಂದಷ್ಟೇ ಜಾರಿಗೆ ಬಂದ ಗ್ಯಾರಂಟಿಗಳಿಂದ ಅಲ್ಲ ಎಂದು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next