Advertisement

ಮಕ್ಕಳಿಗೆ ಕರ್ನಾಟಕ ದರ್ಶನ

06:42 PM Aug 01, 2022 | Team Udayavani |

ಚಿಕ್ಕಬಳ್ಳಾಪುರ: 2022-23 ನೇ ಸಾಲಿನ ಆಯಾವ್ಯಯದಲ್ಲಿ ಎಸ್‌ಸಿಎಸ್‌ಪಿ ಹಾಗೂ ಟಿಎಸ್‌ಪಿ ಯೋಜನೆಯಡಿ ಪರಿಶಿಷ್ಟಜಾತಿಯ ಉಪಯೋಜನೆಯಡಿಯಲ್ಲಿ 200 ಲಕ್ಷ ಹಾಗೂಗಿರಿಜನ ಉಪಯೋಜನೆಯಡಿ 100 ಲಕ್ಷ ಸಹಿತ 300 ಲಕ್ಷ ರೂ.ಗಳನ್ನು ಪ್ರವಾಸೋದ್ಯಮ ಇಲಾಖೆಗೆ ಒದಗಿಸಲಾಗಿದ್ದು ಈ ಅನುದಾನದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿನ ಸರ್ಕಾರಿ ಪ್ರೌಢಶಾಲೆಗಳಲ್ಲಿ ಹಾಗೂ ವಸತಿ ಶಾಲೆಗಳಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಕರ್ನಾಟಕ ದರ್ಶನ ಭಾಗ್ಯವನ್ನು ಒದಗಿಸಲಾಗಿದೆ.

Advertisement

ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಸರ್ಕಾರಿ ಪ್ರೌಢಶಾಲೆಗಳಲ್ಲಿ ಹಾಗೂ ಮೊರಾರ್ಜಿ ದೇಸಾಯಿ, ಕ್ರೈಸ್‌ ವಸತಿ ಶಾಲೆಗಳಲ್ಲಿ 8ನೆ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ಪರಿಶಿಷ್ಟ ಜಾತಿಯ 5,715 ಹಾಗೂ ಪರಿಶಿಷ್ಟ ಪಂಗಡದ 2,858 ವಿದ್ಯಾರ್ಥಿಗಳು ಸಹಿತ ಒಟ್ಟು 8,573 ವಿದ್ಯಾರ್ಥಿಗಳಿಗೆ ಕರ್ನಾಟಕ ದರ್ಶನ ಶೈಕ್ಷಣಿಕ ಪ್ರವಾಸ ಕಾರ್ಯಕ್ರಮವನ್ನು ರೂಪಿಸಿ ಕೆಎಸ್‌ಟಿಡಿಸಿಯ ವ್ಯವಸ್ಥಾಪಕ ನಿರ್ದೇಶಕರನ್ನುನೋಡೆಲ್‌ ಏಜೆನ್ಸಿಯಾಗಿ ನೇಮಕ ಮಾಡಿಕೊಂಡುರಾಜ್ಯದ ಎಲ್ಲಾ ಜಿಪಂ ತಾಪಂ ಸಿಇಒಗಳು ಹಾಗೂಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಸಹಯೋಗದೊಂದಿಗೆ ಕಾರ್ಯಕ್ರಮವನ್ನು ಜಾರಿಗೊಳಿಸಲು ನಿರ್ದೇಶನ ನೀಡಲಾಗಿದೆ.

8ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ಎಸ್‌ಸಿ,ಎಸ್‌ಟಿ ವಿದ್ಯಾರ್ಥಿಗಳಿಗೆ ತಲಾ 3,500 ರೂ.ಗಳ ವೆಚ್ಚದಲ್ಲಿ ಕರ್ನಾಟಕ ದರ್ಶನ ಪ್ರವಾಸವನ್ನು ಕೈಗೊಳ್ಳಲು ಸಿದ್ಧತೆಮಾಡಿಕೊಳ್ಳಬೇಕೆಂದು ಈಗಾಗಲೇ ಸರ್ಕಾರ ಸಾರ್ವಜನಿಕಶಿಕ್ಷಣ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆಯನಿರ್ದೇಶಕರಿಗೆ ಈ ಸಂಬಂಧ ಆದೇಶದ ಸುತ್ತೋಲೆಯನ್ನೂರವಾನಿಸಲಾಗಿದೆ. ವಿದ್ಯಾರ್ಥಿಗಳ ಪ್ರವಾಸಕ್ಕಾಗಿ ತಗಲುವವೆಚ್ಚವನ್ನು 2022-23ನೇ ಸಾಲಿನಲ್ಲಿ ಒದಗಿಸಿರುವಅನುದಾನದಡಿ ಪರಿಶಿಷ್ಟ ಜಾತಿ ಉಪಯೋಜನೆ, ಗಿರಿಜನ ಉಪಯೋಜನೆ ಲೆಕ್ಕ ಶೀರ್ಷಿಕೆಯಡಿ ಅನುದಾನಮೀಸಲಿಟ್ಟು ಪ್ರವಾಸೋದ್ಯಮ ಇಲಾಖೆಯ ಅಧೀನ ಕಾರ್ಯದರ್ಶಿ ಬಿ.ವಿಮಲಾಕ್ಷಿ ಆದೇಶ ಹೊರಡಿಸಿದ್ದಾರೆ.

ಆಯ್ಕೆ ಹೇಗೆ?: ಕರ್ನಾಟಕ ದರ್ಶನ ಶೈಕ್ಷಣಿಕ ಪ್ರವಾಸವನ್ನು ಪ್ರವಾಸೋಧ್ಯಮ ಇಲಾಖೆ ಆಯೋಜಿಸುತ್ತದೆ. ಆಯೋಜನೆ ವೇಳೆ ಆಯಾ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪರಿಶಿಷ್ಟ ಜಾತಿ ಮತ್ತಿ ಪಂಗಡದವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಅದರ ಪಟ್ಟಿ ಸಲ್ಲಿಸಲು ಜಿಪಂ ಸಿಇಒಗೆ ನಿರ್ದೇಶಿಸುತ್ತಾರೆ. ಅವರು ಆಯ್ಕೆಯಾದ ಪಟ್ಟಿಸಲ್ಲಿಸುತ್ತಾರೆ. ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದವ್ಯವಸ್ಥಾಪಕ ನಿರ್ದೇಶಕರು ಪ್ರವಾಸಿ ಸ್ಥಳಗಳನ್ನು ಗುರುತಿಸಿ ಅನುದಾನ ಬಿಡುಗಡೆ ಮಾಡಿ ಶೈಕ್ಷಣಿಕ ಪ್ರವಾಸಕ್ಕೆ ದಿನಾಂಕನಿಗದಿ ಮಾಡುತ್ತಾರೆ.

ಜಿಲ್ಲಾವಾರು ಶಾಲಾ ಶಿಕ್ಷಕರು ಪ್ರವಾಸಕ್ಕೆ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಿ ಪ್ರವಾಸ ಕೈಗೊಳ್ಳುತ್ತಾರೆ. ಬೆಂಗಳೂರು ನಗರ 285 ಎಸ್‌ಸಿ 76 ಎಸ್‌ಟಿ,ಬೆಂಗಳೂರು 72 ಎಸ್‌ಸಿ 28 ಎಸ್‌ಟಿ, ರಾಮನಗರ 141ಎಸ್‌ಸಿ 57 ಎಸ್‌ಟಿ, ಚಿತ್ರದುರ್ಗ 200 ಎಸ್‌ಸಿ 132ಎಸ್‌ಟಿ, ದಾವಣಗೆರೆ 135 ಎಸ್‌ಸಿ 80 ಎಸ್‌ಟಿ, ಕೋಲಾರ185 ಎಸ್‌ಸಿ 68 ಎಸ್‌ಟಿ, ಚಿಕ್ಕಬಳ್ಳಾಪುರ 240 ಎಸ್‌ಸಿ 127 ಎಸ್‌ಟಿ, ತುಮಕೂರು 277 ಎಸ್‌ಸಿ 139 ಎಸ್‌ಟಿಸೇರಿದಂತೆ ವಿವಿಧ ಜಿಲ್ಲೆಗಳ ಪರಿಶಿಷ್ಟ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ.

Advertisement

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿದ್ಯಾರ್ಥಿಗಳ ಕರ್ನಾಟಕದರ್ಶನ ಪ್ರವಾಸ ಕಾರ್ಯಕ್ರಮವನ್ನು ಕೈಗೊಳ್ಳಲುಈಗಾಗಲೇ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.ಸರ್ಕಾರದ ಮಾರ್ಗದರ್ಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಪಿ.ಶಿವಶಂಕರ್‌, ಚಿಕ್ಕಬಳ್ಳಾಪುರ ಜಿಪಂ ಸಿಇಒ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next