Advertisement

Karnataka: ಕೊನೆಗೂ ಬಂತು ನಿಗಮ, ಮಂಡಳಿ ನೇಮಕ ಪಟ್ಟಿ: ಹಂಚಿಕೆ ಸರ್ಕಸ್‌ ಬಾಕಿ!

10:20 PM Jan 16, 2024 | Team Udayavani |

ಬೆಂಗಳೂರು: ನಿರೀಕ್ಷೆಯಂತೆ ಮಕರ ಸಂಕ್ರಾಂತಿ ಮರುದಿನವೇ ನಿಗಮ- ಮಂಡಳಿಗಳ ಅಧ್ಯಕ್ಷರ ನೇಮಕಾತಿ ಪಟ್ಟಿ ಕಾಂಗ್ರೆಸ್‌ ಹೈಕಮಾಂಡ್‌ನಿಂದ ಬಂದಿದೆ. ಈಗ ಅವುಗಳ ಹಂಚಿಕೆ ಸರ್ಕಸ್‌ ಶುರುವಾಗಿದೆ.

Advertisement

ಸುಮಾರು 40 ಜನರ ಪಟ್ಟಿಯನ್ನು ಪಕ್ಷದ ಹೈಕಮಾಂಡ್‌ ಕಳುಹಿಸಿಕೊಟ್ಟಿದೆ. ಅದರಲ್ಲಿ ಯಾರಿಗೆ ಯಾವ ನಿಗಮ ಅಥವಾ ಮಂಡಳಿ ನೀಡಬೇಕು ಎನ್ನುವುದನ್ನು ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್‌ ಒಂದೆರಡು ದಿನಗಳಲ್ಲಿ ಚರ್ಚಿಸಿ ಅಂತಿಮಗೊಳಿಸಲಿದ್ದಾರೆ.

ಕೆಲವು ನಿಗಮ- ಮಂಡಳಿಗಳಿಗೆ ಭಾರೀ ಬೇಡಿಕೆ ಇದ್ದು, ಇಬ್ಬರೂ ನಾಯಕರ ಬೆಂಬಲಿಗರ ನಡುವೆ ಪೈಪೋಟಿ ಏರ್ಪಟ್ಟಿದೆ. ಕೆಲವು ಪ್ರತಿಷ್ಠಿತ ನಿಗಮಗಳನ್ನು ತಮ್ಮ ಬೆಂಬಲಿಗರಿಗೇ ನೀಡಬೇಕು ಎಂಬ ಪಟ್ಟು ಕೂಡ ಇದೆ. ಇನ್ನು ಮೂರು-ನಾಲ್ಕು ಬಾರಿ ಆಯ್ಕೆಯಾದ ಶಾಸಕರು, ಅತ್ತ ತಮಗೆ ಸಚಿವ ಸ್ಥಾನವೂ ಇಲ್ಲ. ಇತ್ತ ಕೇಳಿದ ನಿಗಮ ಅಥವಾ ಮಂಡಳಿಯೂ ಕೊಡುವುದಿಲ್ಲ ಎಂದರೆ ಹೇಗೆ? ಎಂಬ ಮುನಿಸೂ ಕೇಳಿಬರುತ್ತಿದೆ ಎಂದು ಮೂಲಗಳು ತಿಳಿಸಿವೆ.

ಈ ಮಧ್ಯೆ ಈಗಾಗಲೇ ಪಟ್ಟಿಯಲ್ಲಿದ್ದ ಕೆಲವರಿಗೆ ಯಾವ ನಿಗಮ-ಮಂಡಳಿ ಅಧ್ಯಕ್ಷಗಿರಿ ತಮಗೆ ಒಲಿಯಲಿದೆ ಎಂಬ ಸುಳಿವನ್ನೂ ನಾಯಕರು ನೀಡಿದ್ದಾರೆ. ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ. ಇದರಲ್ಲಿ ಎರಡು ಬಾರಿ ಶಾಸಕರಾದವರಿಗೂ ಈ ಅಧಿಕಾರ ಭಾಗ್ಯ ಒಲಿದಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next