ನವದೆಹಲಿ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಸೋಮವಾರ ದೆಹಲಿಯ ಇಡಿ ಕಚೇರಿಗೆ ವಿಚಾರಣೆಗಾಗಿ ಹಾಜರಾಗಿದ್ದಾರೆ.
ಅಕ್ರಮ ಹಣ ಸಾಗಣೆ ಪ್ರಕರಣ ಸಂಬಂಧ ಡಿ.ಕೆ.ಶಿವಕುಮಾರ್ ಅವರಿಗೆ ಗುರುವಾರ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿಗೊಳಿಸಿತ್ತು. ಈ ಬಗ್ಗೆ ಸ್ವತಃ ಡಿ.ಕೆ. ಶಿವಕುಮಾರ್ ಅವರೇ ಟ್ವಿಟರ್ ಮೂಲಕ ಮಾಹಿತಿ ನೀಡಿ”ಕರ್ನಾಟಕದಲ್ಲಿ ವಿಧಾನಸಭೆ ಅಧಿವೇಶನ ನಡೆಯುತ್ತಿರುವಾಗಲೂ ದೆಹಲಿಯಲ್ಲಿ ಇಡಿಯಿಂದ ತಮಗೆ ಸಮನ್ಸ್ ಬಂದಿದೆ” ಎಂದು ಸೆ. 15 ರಂದು ಟ್ವೀಟ್ ಮಾಡಿದ್ದರು.
ನಾನು ತನಿಖಾ ಸಂಸ್ಥೆಗೆ ಎಲ್ಲ ರೀತಿ ಸಹಕರಿಸಲು ಸಿದ್ಧ. ಆದರೆ, ಅವರು ಸಮನ್ಸ್ ಕೊಟ್ಟಿರುವ ಸಮಯ ಮಾತ್ರ ಅನುಮಾನಾಸ್ಪದವಾಗಿದೆ ಎಂದಿದ್ದರು.
ಡಿಕೆ ಸುರೇಶ್ ಕಿಡಿ
”ಅವರು ಯಾವ ಪ್ರಕರಣದಲ್ಲಿ ಕರೆದಿದ್ದಾರೆ ಎಂಬುದು ತಿಳಿದಿಲ್ಲ. ಏಜೆನ್ಸಿಗಳನ್ನು ಕೇಂದ್ರ ಸರಕಾರ ದುರ್ಬಳಕೆ ಮಾಡಿಕೊಂಡಿವೆ. ಇದು ರಾಜಕೀಯ ದ್ವೇಷ. ಚುನಾವಣೆಗೆ 6 ತಿಂಗಳಿರುವಾಗ ಎದುರಾಳಿಗಳ ನ್ನು ಗುರಿಯಾಗಿರಿಸಿಕೊಂಡಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಸ್ಕ್ರಿಪ್ಟ್ ಬರೆಯಲಾಗುತ್ತದೆ ಅದನ್ನು ಇಡಿ ಕಚೇರಿಯಲ್ಲಿ ಕಾರ್ಯರೂಪಕ್ಕೆ ತರಲಾಗುತ್ತದೆ” ಎಂದು ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಕಿಡಿ ಕಾರಿದ್ದಾರೆ.