Advertisement

ಮಳೆಗಾಗಿ ಹೋಮದ ಮೊರೆ ಹೋದ ಸಿದ್ದು ಸರ್ಕಾರ, 20 ಲಕ್ಷ ರೂ. ಖರ್ಚು!

07:47 PM Jun 01, 2017 | Sharanya Alva |

ಬೆಂಗಳೂರು:ಮೂಢನಂಬಿಕೆ ವಿರೋಧಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಇದೀಗ ಮಳೆಗಾಗಿ ಲಕ್ಷಾಂತರ ರೂಪಾಯಿ ವ್ಯಯಿಸಿ ಹೋಮ, ಹವನ ನಡೆಸಲು ಮುಂದಾಗಿದೆ.

Advertisement

ರಾಜ್ಯದಲ್ಲಿ ತೀವ್ರ ಬರ ಹಿನ್ನೆಲೆಯಲ್ಲಿ ಮಳೆಗಾಗಿ ಸಿಎಂ ಅವರ ಸೂಚನೆ ಮೇರೆಗೆ ಹೋಮ ನಡೆಸಲು ಎಲ್ಲಾ ಸಿದ್ಧತೆ ಮಾಡಲಾಗುತ್ತಿದೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದರೆ, ಮತ್ತೊಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೋಮ, ಹವನಕ್ಕೆ ರಾಜ್ಯ ಸರ್ಕಾರದಿಂದ ಹಣ ನೀಡಿಲ್ಲ. ಹೋಮ, ಹವನದ ಮೇಲೆ ನಂಬಿಕೆ ಇಲ್ಲ ಎಂದಿರುವುದು ವಿವಾದಕ್ಕೆ ಗ್ರಾಸವಾಗಿದೆ.

ಕೊಡಗಿನ ಕಾವೇರಿ ನದಿ ಮೂಲದ ಭಾಗಮಂಡಲದಲ್ಲಿ ಹಾಗೂ ಕೃಷ್ಣಾ ನದಿ ಮೂಲ ಮಹಾಬಲೇಶ್ವರದಲ್ಲಿ ಪರ್ಜನ್ಯ ಹೋಮ ನಡೆಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. ಎರಡೂ ಹೋಮಗಳಿಗೂ 20 ಲಕ್ಷ ರೂಪಾಯಿ ವ್ಯಯಿಸಲಾಗುತ್ತಿದೆ. ಕೇರಳದ ಪಂಡಿತರನ್ನು ಕರೆಯಿಸಿ ಹೋಮ ಮಾಡಿಸಲು ಜಲಸಂಪನ್ಮೂಲ ಇಲಾಖೆ ನಿರ್ಧರಿಸಿದೆ ಎಂದು ಮೂಲಗಳು ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಜೂನ್ 2ರಂದು ಕೃಷ್ಣಾ ನದಿ ಮೂಲದ ಮಹಾಬಲೇಶ್ವರದಲ್ಲಿ ಮತ್ತು ಜೂನ್ 4ರಂದು ಭಾಗಮಂಡಲದಲ್ಲಿ ಪರ್ಜನ್ಯ ಹೋಮ ನಡೆಯಲಿದೆ ಎಂದು ವರದಿ ಹೇಳಿದೆ.

ಪರ್ಜನ್ಯ ಹೋಮ ಅಲ್ಲ, ಸರ್ಕಾರದ ನಡೆಗೆ ಸಚಿವ ಎಂಬಿ ಪಾಟೀಲ್ ಸಮರ್ಥನೆ:
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೋಮ, ಹವನದ ಮೇಲೆ ನಂಬಿಕೆ ಇಟ್ಟಿಲ್ಲ. ಆದರೆ ಅವರು ದೇವರನ್ನು ನಂಬುತ್ತಾರೆ. ಹಾಗಾಗಿ ರೈತರ, ಜನರ ಕಷ್ಟ ನಿವಾರಣೆಗಾಗಿ ಪರ್ಜನ್ಯ ಪ್ರಾರ್ಥನೆ ಮಾಡಲಾಗುತ್ತಿದೆ, ಹೋಮ, ಹವನ ನಡೆಸುತ್ತಿಲ್ಲ ಎಂದು ಜಲಸಂಪನ್ಮೂಲ ಸಚಿವ ಎಂಬಿ ಪಾಟೀಲ್ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

Advertisement

ಮಳೆಗಾಗಿ ರಾಜ್ಯ ಸರ್ಕಾರವೇ ಪರ್ಜನ್ಯ ಪ್ರಾರ್ಥನೆ ನಡೆಸುತ್ತಿದೆ ಎಂದು ತಿಳಿಸಿದ್ದಾರೆ. ಆದರೆ ಮುಖ್ಯಮಂತ್ರಿಗಳಿಗೆ ಇದರಲ್ಲಿ ನಂಬಿಕೆ ಇಲ್ಲವಲ್ಲಾ ಎಂಬ ಪ್ರಶ್ನೆಗೆ ಅವರಿಗೆ ಹೋಮ, ಹವನದಲ್ಲಿ ನಂಬಿಕೆ ಇಲ್ಲ. ದೇವರ ಮೇಲೆ ನಂಬಿಕೆ ಇದೆ. ಪೂಜೆ ಮಾಡಲು ಅವರಿಂದ ಯಾವುದೇ ಆಕ್ಷೇಪ ಇಲ್ಲ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next