Advertisement
ಸಂಕ್ರಾಂತಿ ಹಿಂದಿನ ದಿನ ಅಂದರೆ ಬುಧವಾರ ಮಧ್ಯಾಹ್ನ ನೂತನ ಸಚಿವ ಪ್ರಮಾಣ ವಚನ ನಡೆಯಲಿದೆ ಎಂದು ಬಿಎಸ್ ವೈ ಹೇಳಿದ್ದಾರೆ. ಇದೇ ವೇಳೆ ಏಳು ಮಂದಿ ಸಚಿವರಾಗಿಲಿದ್ದಾರೆ ಎಂದಿದ್ದಾರೆ. ಆದರೆ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರಚನೆಯೋ ಎನ್ನುವ ಬಗ್ಗೆ ಬಿಎಸ್ ವೈ ಇನ್ನೂ ಸಸ್ಪನ್ಸ್ ಬಿಟ್ಟುಕೊಟ್ಟಿಲ್ಲ.
Related Articles
Advertisement
ಉಳಿದಂತೆ ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ಹಿರಿಯ ಶಾಸಕ ಉಮೇಶ್ ಕತ್ತಿ ಅವರ ಹೆಸರು ಮುಂಚೂಣಿಯಲ್ಲಿದೆ. ಈ ಬಾರಿ ಅವರಿಗೆ ಸ್ಥಾನ ನೀಡಿ ಸಮಾಧಾನ ಪಡಿಸುವ ಯೋಜನೆಯಲ್ಲಿ ಬಿಎಸ್ ವೈ ಇದ್ದಾರೆ ಎನ್ನಲಾಗಿದೆ.
ಕರಾವಳಿಗೆ ಸ್ಥಾನ: ಕರಾವಳಿಯ ಉಡುಪಿ – ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಯು.ಟಿ. ಖಾದರ್ ಹೊರತುಪಡಿಸಿ ಉಳಿದೆಲ್ಲಾ ಬಿಜೆಪಿ ಶಾಸಕರಿದ್ದಾರೆ, ಆದರೆ ಸಚಿವ ಸ್ಥಾನ ನೀಡಿರುವುದು ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿಗೆ. ಆದರೆ ಈ ಬಾರಿ ಒಬ್ಬರಿಗಾದರೂ ಸಚಿವ ಸ್ಥಾನ ನೀಡಬೇಕೆಂಬ ಕೂಗಿದೆ. ರೇಸ್ ನಲ್ಲಿ ಮುಂಚೂಣಿಯಲ್ಲಿರುವುದು ಕಾರ್ಕಳ ಶಾಸಕ ಸುನೀಲ್ ಕುಮಾರ್ ಹೆಸರು. ಸುಳ್ಯ ಶಾಸಕ ಎಸ್.ಅಂಗಾರ ಹೆಸರು ಈ ಹಿಂದೆ ಕೇಳಿ ಬಂದಿತ್ತಾದರೂ ಈ ಬಾರಿ ಅಂಥಹ ಲಾಬಿ ಕಾಣಿಸಿಲ್ಲ.
ಇದನ್ನೂ ಓದಿ: ಕಾರಿನಲ್ಲೇ ಕುಳಿತು ಹೈಕಮಾಂಡ್ ಜತೆ ಸಿಎಂ ಚರ್ಚೆ: ರಾಘವೇಂದ್ರಗೆ ಮಂತ್ರಿಗಿರಿ?
ಉಳಿದಂತೆ ಅರವಿಂದ ಲಿಂಬಾವಳಿ, ಹಾಲಪ್ಪ ಆಚಾರ್, ರೇಣುಕಾಚಾರ್ಯ, ರಾಮದಾಸ್, ಪೂರ್ಣಿಮಾ ಶ್ರೀನಿವಾಸ್ ಮುಂತಾದವರ ಹೆಸರುಗಳು ಕೇಳಿ ಬರುತ್ತಿದೆ. ಅರವಿಂದ ಬೆಲ್ಲದ್, ಪರಣ್ಣ ಮುನವಳ್ಳಿ ಸೇರಿದಂತೆ ಅಚ್ಚರಿಯ ಹೆಸರುಗಳು ಸಂಪುಟ ಪಟ್ಟಿಯಲ್ಲಿ ಸ್ಥಾನ ಪಡೆಯಲೂ ಬಹುದು. ಎಲ್ಲಾ ಪ್ರಶ್ನೆಗಳಿಗೂ, ಲೆಕ್ಕಾಚಾರಗಳಿಗೂ ಇನ್ನೆರಡು ದಿನಗಳಲ್ಲಿ ತೆರೆ ಬೀಳಲಿದೆ.