Advertisement

Karnataka Budget: ʻಪವರ್‌ ಸ್ಟಾರ್‌ʼ ಸ್ಮರಣಾರ್ಥ ಯೋಜನೆಯೊಂದನ್ನು ಘೋಷಿಸಿದ ಸಿದ್ದರಾಮಯ್ಯ

04:38 PM Jul 07, 2023 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ತಮ್ಮ ದಾಖಲೆಯ 14ನೇ ರಾಜ್ಯ ಬಜೆಟ್ ಮಂಡಿಸಿದ್ಧಾರೆ. ಮೂರು ಲಕ್ಷದ 27 ಸಾವಿರ ಕೋಟಿ ರೂ ಗಾತ್ರದ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಹಲವು ಯೋಜನೆಗಳನ್ನು ಘೋಷಿಸಿದ್ದಾರೆ.

Advertisement

ಅವುಗಳ ಪೈಕಿ ವಿಶೇಷವಾಗಿ ʻಪವರ್‌ ಸ್ಟಾರ್‌ʼ ಸ್ಮರಣಾರ್ಥ ಯೋಜನೆಯೊಂದನ್ನು ಘೋಷಿಸಿದ್ದು, ಹಠಾತ್ ಹೃದಯ ಸ್ತಂಭನದ ವೇಳೆ ತುರ್ತು ಚಿಕಿತ್ಸೆಗೆ ಈ ಯೋಜನೆ ನೆರವಾಗಲಿದೆ.

ಕರ್ನಾಟಕ ರತ್ನ ಡಾ|| ಪುನೀತ್‌ ರಾಜ್‌ಕುಮಾರ್‌ರವರ ಸ್ಮರಣಾರ್ಥವಾಗಿ ಹಠಾತ್ ಹೃದಯ ಸಂಬಂಧಿ ಸಾವುಗಳನ್ನು ತಡೆಗಟ್ಟಲು ಸರ್ಕಾರ Automated External Defibrillators (AED) ಗಳನ್ನು ಜಿಲ್ಲಾ ಆಸ್ಪತ್ರೆ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಅಳವಡಿಸುವ ಯೋಜನೆಯ ಬಗ್ಗೆ ಬಜೆಟ್‌ನಲ್ಲಿ ಹೇಳಿಕೊಂಡಿದೆ. ಇದಕ್ಕಾಗಿ ಆರು ಕೋಟಿ ರೂ. ಅನುದಾನ ಒದಗಿಸಲಾಗುವುದು ತಮ್ಮ ಬಜೆಟ್‌ ಮಂಡನೆಯ ವೇಲೆ ಸಿಎಂ ಸಿದ್ದರಾಮಯ್ಯ ಘೋಷಿಸಿದ್ಧಾರೆ.

ಇದನ್ನೂ ಓದಿ: Budget: ಆಶಾಕಿರಣ ಯೋಜನೆ, ಸಿ.ಟಿ ಸ್ಕ್ಯಾನ್ ಸೆಂಟರ್; ಆರೋಗ್ಯ ಕ್ಷೇತ್ರಕ್ಕೆ ಸಿಕ್ಕಿದ್ದೇನು?

Advertisement

Automated External Defibrillators (AED) ಎಂದರೇನು.?
ಸ್ವಯಂಚಾಲಿತ ಬಾಹ್ಯ ಡಿಫಿಬ್ರಿಲೇಟರ್ ಅಥವಾ Automated External Defibrillators (AED)ಗಳು, ಹಠಾತ್ ಹೃದಯ ಸ್ತಂಭನದ ಸಮಯದಲ್ಲಿ ವ್ಯಕ್ತಿಗೆ ತುರ್ತು ಚಿಕಿತ್ಸೆಯಾಗಿ ಹೃದಯಕ್ಕೆ ವಿದ್ಯುತ್ ಆಘಾತವನ್ನು ನೀಡುವ ಸುರಕ್ಷಿತ ಮತ್ತು ಬಳಸಲು ಸುಲಭವಾದ ಸಾಧನವಾಗಿದೆ. AED ಗಳು ಮೊಬೈಲ್‌ ಯಂತ್ರಗಳಾಗಿದ್ದು ಎಲ್ಲಿಂದೆಲ್ಲಿಗೂ ಕೊಂಡೊಯ್ಯಬಹುದಾಗಿದೆ. ಸಾಮಾನ್ಯವಾಗಿ ಅಗ್ನಿಶಾಮಕ ಯಂತ್ರದಂತೆಯೇ ಅಮೆರಿಕದಾದ್ಯಂತ ಸಾರ್ವಜನಿಕ ಸ್ಥಳಗಳು ಮತ್ತು ನಿಗಮಗಳ ಗೋಡೆಗಳ ಮೇಲೆ AED ಯಂತ್ರಗಳು ಕಂಡುಬರುತ್ತವೆ.

Advertisement

Udayavani is now on Telegram. Click here to join our channel and stay updated with the latest news.

Next