ಮಂಗಳೂರು: ವಿದೇಶ ವಿನಿಮಯ ಮಾರುಕಟ್ಟೆಗೆ ಕರ್ಣಾಟಕ ಬ್ಯಾಂಕ್ ಆದ್ಯತೆ ನೀಡುತ್ತಿದೆ ಮತ್ತು 2,500 ಕೋಟಿ ರೂ. ವ್ಯವಹಾರ ಗುರಿಯನ್ನು ಶೀಘ್ರ ಸಾಧಿಸಲಿದೆ ಎಂದು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್. ಹೇಳಿದರು.
ಬ್ಯಾಂಕಿನಲ್ಲಿ ಶುಕ್ರವಾರ ಜರಗಿದ ವಿದೇಶ ವಿನಿಮಯ ವ್ಯವಹಾರ ಸಮ್ಮೇಳನದಲ್ಲಿ ಅವರು ಆಶಯ ಭಾಷಣ ಮಾಡಿದರು. ಕಳೆದ ಕೆಲವು ತಿಂಗಳುಗಳಿಂದ ಭಾರತದ ರಫ್ತು ವ್ಯವಹಾರ ಗಮನಾರ್ಹವಾಗಿ ವೃದ್ಧಿಸುತ್ತಿದೆ ಎಂದು ಅವರು ತಿಳಿಸಿದರು.
ಚೀಫ್ ಜನರಲ್ ಮ್ಯಾನೇಜರ್ ರಾಘವೇಂದ್ರ ಭಟ್ ಎಂ. ಅವರು ಕೆಬಿಎಲ್- ಎಕ್ಸ್‌ಪೋರ್ಟ್ ಮಿತ್ರ ಯೋಜನೆ ಬಗ್ಗೆ, ಜಿಎಂ ಮುರಲೀಧರ ಕೃಷ್ಣ ರಾವ್ ಅವರು ಫೂರೆಕ್ಸ್ ವ್ಯವಹಾರ ಬಗ್ಗೆ ಮಾಹಿತಿ ನೀಡಿದರು.
ಜನರಲ್ ಮ್ಯಾನೇಜರ್‌ಗಳಾದ ಚಂದ್ರಶೇಖರ ರಾವ್ ಬಿ., ಸುಭಾಶ್ಚಂದ್ರ ಪುರಾಣಿಕ್, ವೈ. ವಿ. ಬಾಲಚಂದ್ರ, ನಾಗರಾಜ ರಾವ್ ಬಿ. ಉಪಸ್ಥಿತರಿದ್ದರು. ಡಿಜಿಎಂ ಮಹಾಲಿಂಗೇಶ್ವರ ಕೆ. ಸ್ವಾಗತಿಸಿದರು.
ಚೀಫ್ ಮ್ಯಾನೇಜರ್ ಶ್ರೀನಿವಾಸ್ ಎಸ್. ದಂಡಾಪುರ್ ಅವರು ಪ್ರಸ್ತಾವನೆಗೈದರು. ಎಜಿಎಂ ಚಂದ್ರಶೇಖರ್ ಅವರು ವಂದಿಸಿದರು.