ನವ ದೆಹಲಿ : ರಿಲಯನ್ಸ್ ಹೋಮ್ ಫೈನಾನ್ಸ್ ಮತ್ತು ರಿಲಯನ್ಸ್ ಕಮರ್ಷಿಯಲ್ ಫೈನಾನ್ಸ್ ಕಂಪನಿಗಳು ಒಟ್ಟಾರೆ 160 ಕೋಟಿ ಮೊತ್ತದ ಸಾಲ ಕರ್ನಾಟಕ ಬ್ಯಾಂಕ್ ನಲ್ಲಿ ಉಳಿಸಿಕೊಂಡಿದ್ದು, ಈ ಸಾಲಗಳನ್ನು ‘ವಂಚನೆ’ ಎಂದು ಹೇಳಿದೆ.
ಈಗಾಗಲೇ ಸಾಲ ಸೌಲಭ್ಯಗಳಲ್ಲಿನ ವಂಚನೆಯ ಬಗ್ಗೆ ಆರ್ ಬಿ ಐಗೆ ಕರ್ನಾಟಕ ಬ್ಯಾಂಕ್ ಮಾಹಿತಿ ನೀಡಿದ್ದು, ರಿಲಯನ್ಸ್ ಹೋಮ್ ಫೈನಾನ್ಸ್ 21.94 ಕೋಟಿ ಹಾಗೂ ರಿಲಯನ್ಸ್ ಕಮರ್ಷಿಯಲ್ ಫೈನಾನ್ಸ್ 138.41 ಕೋಟಿ ಮೊತ್ತದ ಸಾಲ ಬಾಕಿ ಉಳಿಸಿಕೊಂಡಿದೆ’ ಎಂದು ಕರ್ಣಾಟಕ ಬ್ಯಾಂಕ್ ಷೇರುಪೇಟೆಗೆ ಮಾಹಿತಿ ನೀಡಿದೆ.
ಇದನ್ನೂ ಓದಿ : ಉಡುಪಿ ಜಿಲ್ಲೆ ಬಹುತೇಕ ಅನ್‌ಲಾಕ್ : ನಿಯಮ ಪಾಲಿಸದಿದ್ದರೆ ಕ್ರಿಮಿನಲ್ ಕೇಸ್ : ಜಿಲ್ಲಾಧಿಕಾರಿ
ರಿಲಯನ್ಸ್ ಹೋಮ್ ಫೈನಾನ್ಸ್ ಜತೆ 2015ರಿಂದ ಹಾಗೂ ರಿಲಯನ್ಸ್ ಕಮರ್ಷಿಯಲ್ ಫೈನಾನ್ಸ್ ಜೊತೆ 2014ರಿಂದ ವ್ಯವಹಾರ ಹೊಂದಿರುವು ದಾಗಿ ಬ್ಯಾಂಕ್ ತಿಳಿಸಿದ್ದು, 24ಕ್ಕೂ ಹೆಚ್ಚಿನ ಬ್ಯಾಂಕ್ ಗಳು ಒಟ್ಟಾಗಿ ರಿಲಯನ್ಸ್ ಹೋಮ್ ಫೈನಾನ್ಸ್ ಗೆ ಸಾಲ ನೀಡಿವೆ.
ಕರ್ಣಾಟಕ ಬ್ಯಾಂಕ್‌ನ ಪಾಲು ಶೇಕಡ 0.39ರಷ್ಟು. ರಿಲಯನ್ಸ್ ಕಮರ್ಷಿಯಲ್ ಫೈನಾನ್ಸ್‌ಗೆ 22 ಬ್ಯಾಂಕ್‌ಗಳು ಒಟ್ಟಾಗಿ ಸಾಲ ನೀಡಿದ್ದು ಅದರಲ್ಲಿ ಕರ್ಣಾಟಕ ಬ್ಯಾಂಕ್ ಪಾಲು ಶೇ 1.98ರಷ್ಟಿದೆ ಎಂದು ಅದು ಮಾಹಿತಿ ನೀಡಿದೆ.
ಇದನ್ನೂ ಓದಿ : ದಾವಣಗೆರೆ ಜಿಲ್ಲೆಯಲ್ಲಿ 150 ಮಂದಿ ಗುಣಮುಖ : 176 ಹೊಸ ಪ್ರಕರಣ ಪತ್ತೆ