ರಾಮನಗರ: ಮರಾಠಿ ಸಮುದಾಯಕ್ಕೆ ನಿಗಮ ರಚನೆಯನ್ನು ವಿರೋಧಿಸಿ ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್ ಗೆ ಕರೆನೀಡಿದ್ದು, ಜಿಲ್ಲಾ ಕೇಂದ್ರ ರಾಮನಗರದಲ್ಲಿ ಬೆಳ್ಳಂಬೆಳಿಗ್ಗೆ ಕಸ್ತೂರಿ ಕರ್ನಾಟಕ ವೇದಿಕೆ ಮತ್ತು ಕರುನಾಡ ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ವಾಹನ ಸಂಚಾರ ಎಂದಿನಂತಿದೆ. ಹೋಟೆಲ್ ಗಳು, ಟೀ ಅಂಗಡಿಗಳು, ಹೂ, ತರಕಾರಿ ಅಂಗಡಿಗಳು, ರೇಷ್ಮೆಗೂಡು ಮಾರುಕಟ್ಟೆ, ಸರ್ಕಾರಿ ಬಸ್, ಆಟೋ ರಿಕ್ಷಾ ಸೇವೆಗೆ ಬಾಧಕವಾಗಿಲ್ಲ. ಬಂದ್ ಗೆ ಜನತೆ ನೀರಸ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ:ಇಂದು ಕರ್ನಾಟಕ ಬಂದ್: ಬೆಂಗಳೂರಿನ ಹಲವೆಡೆ ಕಲ್ಲು ತೂರಾಟ, ಕರಾವಳಿಯಲ್ಲಿ ನೀರಸ ಪ್ರತಿಕ್ರಿಯೆ
ಬಂದ್ ಹಿನ್ನೆಲೆಯಲ್ಲಿ ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದಾರೆ.