Advertisement

ಮೋದಿ ಇಷ್ಟು ಕೆಳಮಟ್ಟಕ್ಕೆ ಇಳಿಯುವುದು ದೇಶಕ್ಕೆ ಒಳ್ಳೆಯದಲ್ಲ: ಸಿಂಗ್‌

03:31 PM May 07, 2018 | Team Udayavani |

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ಕೇಂದ್ರ ಸರಕಾರ ತನ್ನ ಇಷ್ಟಾನುಸಾರ ದೇಶವನ್ನು ನಡೆಸುತ್ತಿದ್ದು ಹಿಂದಿನ ಯುಪಿಯ ಸರಕಾರದ ಸಾಧನೆಗಳನ್ನೆಲ್ಲ ನಿರಸನಗೊಳಿಸುತ್ತಿದೆ ಎಂದು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಆರೋಪಿಸಿದ್ದಾರೆ.

Advertisement

ಕರ್ನಾಟಕ ವಿಧಾನಸಭಾ ಚುನಾವಣೆ ಪ್ರಯುಕ್ತ ಕಾಂಗ್ರೆಸ್‌ ಪಕ್ಷದ ಪ್ರಚಾರಾರ್ಥವಾಗಿ ಇಂದು ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಂಗ್‌ ಅವರು, “ದೇಶದ ಈ ವರೆಗಿನ ಯಾವುದೇ ಪ್ರಧಾನಿಗಳು ಮೋದಿ ಅವರಂತೆ ತಮ್ಮ ಎದುರಾಳಿಗಳ ವಿರುದ್ಧ ಹೊತ್ತು ಗೊತ್ತು ಇಲ್ಲದೆ ಕೆಳಮಟ್ಟದಲ್ಲಿ ಮಾತನಾಡಿದ ಉದಾಹರಣೆಗಳಿಲ್ಲ; ಮೋದಿ ಅವರು ಇಷ್ಟೊಂದು ಕೆಳಮಟ್ಟಕ್ಕೆ ಇಳಿದಿರುವುದು ದೇಶಕ್ಕೆ ಒಳ್ಳೆಯದಲ್ಲ’ ಎಂದು ಹೇಳಿದರು 

ಪ್ರಧಾನಿ ನರೇಂದ್ರ ಮೋದಿ ಸರಕಾರದ ಆರ್ಥಿಕ ನೀತಿಗಳನ್ನು ಟೀಕಿಸಿ ಮಾತನಾಡಿದ ಸಿಂಗ್‌, “ಮೋದಿ ಆರ್ಥಿಕ ನೀತಿಯಿಂದಾಗಿ ದೇಶಕ್ಕೆ ಭಾರಿ ದೊಡ್ಡ ನಷ್ಟವಾಗಿದೆ. ಯುಪಿಎ ಕಾಲದಲ್ಲಿ ಎಲ್ಲ ವೈರುಧ್ಯಗಳನ್ನು ಪ್ರತಿಕೂಲ ಪರಿಸ್ಥಿತಿಗಳನ್ನು ಮೀರಿ ಕಾಂಗ್ರೆಸ್‌ ಸರಕಾರ ಶೇ.7.8 ಜಿಡಿಪಿಯನ್ನು ಸಾಧಿಸಿತ್ತು. ಮೋದಿಯವರ ಕಾಲದಲ್ಲೀಗ ಅದು ಪ್ರಪಾತಕ್ಕೆ ಕುಸಿದಿದೆ. ನೋಟು ಅಮಾನ್ಯ, ಅವಸರವಸರದ ಜಿಎಸ್‌ಟಿ ಅನುಷ್ಠಾನದಿಂದ ದೇಶದ ಸಾಮಾನ್ಯ ಜನರ ಆರ್ಥಿಕ ಬದುಕು ನಾಶವಾಗಿ ಹೋಗಿದೆ. ಲಕ್ಷಾಂತರ ಜನರು ನಿರ್ಗತಿಕರಾಗಿ ಬೀದಿಪಾಲಾಗಿದ್ದಾರೆ; ಉದ್ಯೋಗವೆಂಬುದು ಜನರಿಗೆ ಮರಿಚೀಕೆಯಾಗಿದೆ’ ಎಂದು ಟೀಕಿಸಿದರು. 

“ಒಳ್ಳೆಯ ನಾಯಕತ್ವ ಯಾವತ್ತೂ ಜನರಿಗೆ ಅವಕಾಶಗಳನ್ನು ಸೃಷ್ಟಿಸುತ್ತದೆ; ನಾಶಮಾಡುವುದಿಲ್ಲ. ಮೋದಿ ಅವರ ನಾಯಕತ್ವ ತದ್ವಿರುದ್ಧವಾಗಿದೆ. ಅವರು ಜನರನ್ನು ಮರಳು ಮಾಡಲು ಬಳಸುವ ಅಮೃತ, ಸ್ಮಾರ್ಟ್‌ ಸಿಟಿ ಪದಗಳು ಕಳಪೆಯಾಗಿ ಕಂಡುಬಂದಿವೆ’ ಎಂದು ಮಾಜಿ ಪ್ರಧಾನಿ ಸಿಂಗ್‌ ಹೇಳಿದರು.

“ಯುಪಿಯ ಕಾಲದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ದರಗಳು ಐತಿಹಾಸಿಕ ಎತ್ತರದ ಮಟ್ಟಕ್ಕೆ ಏರಿದ್ದವು; ಮೋದಿ ಅವರ ಕಾಲದಲ್ಲೀಗ ಅವು ಶೇ.67ರಷ್ಟು ಕುಸಿದಿವೆ. ಆದರೂ ದೇಶದಲ್ಲಿನ ಪೆಟ್ರೋಲ್‌, ಡೀಸಿಲ್‌ ಬೆಲೆ ಭಾರೀ ಏರಿಕೆಯನ್ನು ಕಂಡಿವೆ. ಹಾಗಿದ್ದರೂ ಇದಕ್ಕೆ ಮೋದಿ ಸರಕಾರ ಬೇರೆಯವರನ್ನು ಹೊಣೆ ಮಾಡುತ್ತದೆ. ಮೋದಿ ಕಾಲದಲ್ಲೀಗ ಬ್ಯಾಂಕ್‌ ವಂಚನೆಗಳು ಸಿಕ್ಕಾಪಟ್ಟೆ ಜಾಸ್ತಿಯಾಗಿವೆ. ಹಾಗಾಗಿ ಸಾಮಾನ್ಯ ಜನರಿಗೆ ದೇಶದ ಬ್ಯಾಂಕಿಂಗ್‌ ವ್ಯವಸ್ಥೆ ಮೇಲಿನ ವಿಶ್ವಾಸವೇ ಹೊರಟುಹೋಗಿದೆ’ ಎಂದು ಸಿಂಗ್‌ ಟೀಕಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next