Advertisement

Karnataka Assembly Elections; ರೇಣುಕಾಚಾರ್ಯ ವಿರುದ್ಧ ಎಫ್ ಐಆರ್ ದಾಖಲು

04:18 PM Apr 07, 2023 | Team Udayavani |

ಬೆಂಗಳೂರು: ಚುನಾವಣ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಕಾರಣಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅವರ ರಾಜಕೀಯ ಕಾರ್ಯದರ್ಶಿ ಮತ್ತು ಹೊನ್ನಾಳಿ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಎಫ್‌ಐಆರ್ ದಾಖಲಿಸಲಾಗಿದೆ.

Advertisement

ವರದಿಗಳ ಪ್ರಕಾರ, ನೀತಿ ಸಂಹಿತೆ ಉಲ್ಲಂಘಿಸಿ ಕಲ್ಯಾಣ ಮಂಟಪದಲ್ಲಿ ಸಭೆ ನಡೆಸಿದ ಆರೋಪದಲ್ಲಿ ಚುನಾವಣಾಧಿಕಾರಿ ದೂರು ಸಲ್ಲಿಸಿದ್ದು ಐಪಿಸಿಯ ಸೆಕ್ಷನ್ 171 E ಮತ್ತು 171 I ಅಡಿಯಲ್ಲಿ ಆರೋಪ ಹೊರಿಸಲಾಗಿದೆ.

ರೇಣುಕಾಚಾರ್ಯ ಅವರು ತಾವು ಕಾನೂನು ಬಾಹಿರವಾಗಿ ಏನನ್ನೂ ಮಾಡಿಲ್ಲ ಎಂದು ಪೊಲೀಸರಿಗೆ ಮನವರಿಕೆ ಮಾಡಿಕೊಡಲು ಯತ್ನಿಸಿದ್ದು, ಪಕ್ಷದಲ್ಲಿ ಟಿಕೆಟ್ ಹಂಚಿಕೆ ವಿಚಾರದಲ್ಲಿ ಆಂತರಿಕ ಬಂಡಾಯ ಎದ್ದಿದ್ದು, ತಮ್ಮ ಬೆಂಬಲಿಗರು ಮತ್ತು ಅಲ್ಲಿ ನೆರೆದಿದ್ದವರಿಗೆ ಪೊಲೀಸರ ಬಗ್ಗೆ ಚಿಂತಿಸಬೇಡಿ ಎಂದು ಹೇಳುತ್ತಿದ್ದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next