Advertisement

ಸರ್ಕಾರದ ವಿರುದ್ಧದ ಪ್ರತಿಪಕ್ಷದ ಅವಿಶ್ವಾಸ ನಿರ್ಣಯ ಪ್ರಸ್ತಾಪ ಧ್ವನಿ ಮತದಿಂದ ತಿರಸ್ಕೃತ

11:14 PM Sep 26, 2020 | Team Udayavani |

ವಿಧಾನಸಭೆ: ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್‌ ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಧ್ವನಿಮತದ ಮೂಲಕ ಸೋಲುಂಟಾಯಿತು.

Advertisement

ಸುಮಾರು ಐದು ಗಂಟೆಗಳ ಕಾಲ ನಡೆದ ಚರ್ಚೆಯ ನಂತರ ನಿರ್ಣಯವನ್ನು ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಧ್ವನಿಮತಕ್ಕೆ ಹಾಕಿ ನಿರ್ಣಯ ತಿರಸ್ಕರಿಸಲ್ಪಟ್ಟಿತ್ತು ಎಂದು ಘೋಷಿಸಿದರು.

ಇದಕ್ಕೂ ಮುನ್ನ ಚರ್ಚೆಯ ನಂತರ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಹಗರಣ ಆರೋಪಕ್ಕೆ ಸಂಬಂಧಿಸಿದಂತೆ ಸತ್ಯಾಂಶ ಸಾಬೀತು ಮಾಡುವ ಜವಾಬ್ದಾರಿ ನಿಮ್ಮ ಮೇಲಿದೆ. ಇದರ ವಿರುದ್ಧ ಸಿಬಿಐಗಾದ್ರೂ ಹೋಗಿ ಲೋಕಾಯುಕ್ತಕ್ಕಾದರೂ ಹೋಗಿ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸಿದ ಅವರು, ಹಗರಣದಲ್ಲಿ ನಮ್ಮ ಕುಟುಂಬದವರ ಪಾತ್ರ ಇದ್ದರೆ ನಾನು ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಎಂದು ಸವಾಲು ಹಾಕಿದರು.

ಅವಿಶ್ವಾಸ ನಿರ್ಣಯದ ಮೇಲೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಮಾತನಾಡಿದ್ದಾರೆ. ಎಲ್ಲ ಆರೋಪಗಳು ನೂರಕ್ಕೆ ನೂರರಷ್ಟು ಸತ್ಯಕ್ಕೆ ದೂರ ಎಂದು ಹೇಳಿದರು.

Advertisement

ಮುಂಬರುವ ಉಪ ಚುನಾವಣೆಯಲ್ಲಿ ಜನರ ಮುಂದೆ ಆರೋಪ ಮಾಡಿ ಅಲ್ಲಿ ಜನರು ಏನು ತೀರ್ಮಾನ ಕೊಡುತ್ತಾರೋ ನೋಡೋಣ. ಮುಂದಿನ ಚುನಾವಣೆ ಯಲ್ಲಿ 135 ಸ್ಥಾನ ಗೆಲ್ಲಿಸಿಕೊಡುವ ಜವಾಬ್ದಾರಿ ನನ್ನದು. ಇನ್ನೂ 10 ವರ್ಷ ಕಾಂಗ್ರೆಸ್‌ ಪ್ರತಿಪಕ್ಷದಲ್ಲಿಯೇ ಕೂಡುವಂತಾಗುತ್ತದೆ ಎಂದು ತಿಳಿಸಿದರು.

ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವುದು ದುರ್ದೈವ. ಅದಕ್ಕೆ ಸಾಕಷ್ಟು ಕಾರಣಗಲು ಇವೆ. ಆದರೂ ಕಳೆದ ಒಂದು ವರ್ಷದಲ್ಲಿ ರಾಜ್ಯದ ಅಭಿವೃದ್ಧಿಗೆ ಸಾಕಷ್ಟು ಕಾರ್ಯಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಕೈಗೊಂಡ ಯೋಜನೆಗಳು, ಎರಡು ಬಾರಿ ಪ್ರವಾಹ ಉಂಟಾದಾಗ ಸಂತ್ರಸ್ತರಿಗೆ ನೀಡಿದ ಪರಿಹಾರ, ಕೊರೊನಾ ನಿರ್ವಹಣೆ, ಶ್ರಮಿಕರಿಗೆ ಪ್ಯಾಕೇಜ್‌ನ ವಿವರಗಳನ್ನು ಮುಖ್ಯಮಂತ್ರಿಯವರು ಅಂಕಿ-ಅಂಶಗಳ ಸಮೇತ ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next