ನಾಂಚಾಂಗ್ (ಚೀನ): ಭಾರತದ ಅರ್ಹತಾ ಆಟಗಾರ್ತಿ ಕರ್ಮನ್ ಕೌರ್ ಥಾಂಡಿ ತಮ್ಮ ಮೊದಲ ಡಬ್ಲ್ಯು ಟಿಎ ಗೆಲುವಿನ ಸಂಭ್ರಮ ಆಚರಿಸಿದ್ದಾರೆ. ಚೀನದ ನಾಂಚಾಂಗ್ನಲ್ಲಿ ನಡೆಯು ತ್ತಿರುವ “ಜಿಯಾಂಗ್ಕ್ಸಿ ಓಪನ್ ಟೆನಿಸ್’ ಪಂದ್ಯಾವಳಿಯ ಮೊದಲ ಸುತ್ತಿನ ಮುಖಾಮುಖೀಯಲ್ಲಿ ಅವರು ತವರಿನ ಜಿಯಾ ಜಿಂಗ್ ಲು ಅವರನ್ನು 3 ಸೆಟ್ಗಳ ಕಠಿನ ಹೋರಾಟದ ಬಳಿಕ 6-3, 3-6, 7-5 ಅಂತರದಿಂದ ಮಣಿಸುವಲ್ಲಿ ಯಶಸ್ವಿಯಾದರು.
ಮುಂದಿನ ಸುತ್ತಿನಲ್ಲಿ 6ನೇ ಶ್ರೇಯಾಂಕದ ಚೀನೀ ಆಟಗಾರ್ತಿ ಸೈಸೈ ಜೆಂಗ್ ಅವರನ್ನು ಕರ್ಮನ್ ಎದುರಿಸಲಿದ್ದಾರೆ.