Advertisement
ಕ್ಷೇತ್ರದಲ್ಲಿ ಬಿಜೆಪಿ ಈಗಾಗಲೇ ಸಾಕಷ್ಟು ಕಾರ್ಯ ಕ್ರಮಗಳನ್ನು ಆಯೋಜಿಸಿಕೊಂಡು ಪಕ್ಷ ಸಂಘಟನೆಯಲ್ಲಿ ತೊಡಗಿದೆ. 34 ಗ್ರಾಮ ಸಮಿತಿ ಸಭೆಗಳನ್ನು ನಡೆಸಲಾಗಿದೆ. ಕ್ಷೇತ್ರದಲ್ಲಿ 2 ಬಾರಿ ಕಾರ್ಯ ಕರ್ತರ ಸಮಾವೇಶ ಹಾಗೂ 1 ಬಾರಿ ಮಹಿಳಾ ಸಮಾವೇಶವನ್ನು ಕ್ಷೇತ್ರ ಮಟ್ಟದಲ್ಲಿ ಮಾಡಲಾಗಿದೆ. ಮಹಿಳಾ ಮೋರ್ಚಾ ಶಕ್ತಿಕೇಂದ್ರದ ಸಮಾವೇಶಗಳು ನಡೆಯುತ್ತಿವೆ. ಬೆಳ್ಮಣ್, ಬಜಗೋಳಿ, ಕಾರ್ಕಳ ನಗರ, ಹೆಬ್ರಿ ಮೊದಲಾದ ಭಾಗದಲ್ಲಿ ಮುಕ್ತಾಯಗೊಂಡಿದೆ. ಎ. 13ರಂದು ಮತ್ತೂಂದು ದೊಡ್ಡಮಟ್ಟದ ಕಾರ್ಯಕರ್ತರ ಸಮಾವೇಶ ಕಾರ್ಕಳದಲ್ಲಿ ನಡೆಯಲಿದೆ.
ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ವಿ. ಸುನಿಲ್ ಕುಮಾರ್ ಅವರು ನಾಲ್ಕನೇ ಬಾರಿಗೆ ಸ್ಪರ್ಧಿಸು ತ್ತಿದ್ದಾರೆ. 2004ರಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದ್ದ ವಿ. ಸುನಿಲ್ ಕುಮಾರ್ ಅವರು ಎಚ್. ಗೋಪಾಲ ಭಂಡಾರಿ ಅವರ ವಿರುದ್ಧ ಜಯಗಳಿಸಿದ್ದು, 2008ರಲ್ಲಿ ಭಂಡಾರಿ ವಿರುದ್ಧ ಪರಾಜಿತ ಗೊಂಡಿದ್ದರು. 2013ರಲ್ಲಿ ಮತ್ತೂಮ್ಮೆ ಭಂಡಾರಿ ವಿರುದ್ಧ ಜಯಗಳಿಸಿದ್ದು, ಇದೀಗ ನಾಲ್ಕನೇ ಬಾರಿಗೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಪ್ರಾರಂಭದಿಂದಲೂ ಒಂದೇ ಹೆಸರು!
ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ 2018ರ ಚುನಾವಣೆಗೆ ಬಿಜೆಪಿಯಿಂದ ಹಾಲಿ ಶಾಸಕ ವಿ. ಸುನಿಲ್ ಕುಮಾರ್ ಅವರ ಹೆಸರು ಕೇಳಿ ಬರುತ್ತಿತ್ತು. ಆದರೆ ಕೆಲವು ಸಂದರ್ಭಲ್ಲಿ ಸುನಿಲ್ ಅವರು ಮೂಡಬಿದಿರೆ ಕ್ಷೇತ್ರದಿಂದ ಅಥವಾ ಉಡುಪಿಯಿಂದ ಸ್ಪರ್ಧಿಸುತ್ತಾರೆ ಎನ್ನುವ ಮಾತು ಹರಿದಾಡುತ್ತಿತ್ತಾದರೂ ಅದು ಗಾಳಿ ಸುದ್ದಿ ಎನ್ನಲಾಗುತ್ತಿತ್ತು. ರವಿವಾರ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುತ್ತಲೇ ವಿ. ಸುನಿಲ್ ಅವರ ಸ್ಫರ್ಧೆ ಖಚಿತಗೊಂಡಿದ್ದು, ಕಾರ್ಯಕರ್ತರು ಉತ್ಸುಕರಾಗಿದ್ದಾರೆ.