ಕಾರ್ಕಳ: ಸರಕಾರಿ ಜಾಗಗಳಲ್ಲಿ ಸರಕಾರದ ಅನುಮತಿ ಇಲ್ಲದೇ ನಿರ್ಮಾಣವಾದ ಮನೆಗಳನ್ನು ಕಾರ್ಕಳ ತಹಶೀಲ್ದಾರ್ ಮಾರ್ಗದರ್ಶನದಂತೆ ಕಂದಾಯ ಇಲಖೆಯ ಅಧಿಕಾರಿಗಳು ಶನಿವಾರ ತೆರವುಗೊಳಿಸಿದ್ದಾರೆ.
ಮುಡಾರು ಗ್ರಾಮದ 5 ಹಾಗೂ ಜಾರ್ಕಳ ಗ್ರಾಮದ ಆರು ಮನೆಗಳನ್ನು ತೆರವುಗೊಳಿಸಲಾಗಿದೆ. ಈ ಮೂಲಕ ಸರಕಾರಿ ಜಾಗದಲ್ಲಿ ಮನೆ ಇದ್ದರೆ 94ಸಿ ಮೂಲಕ ಹಕ್ಕುಪತ್ರ ಸಿಗಲಿದೆ ಎಂದು ಯಾರ ಯಾರ ಮಾತನ್ನು ಕೇಳಿ, ಅರಿಯದೇ ಸರಕಾರಿ ಜಾಗದಲ್ಲಿ ಮನೆ ಕಟ್ಟಿ ಕೂತವರಿಗೆ ತಾಲೂಕಾಡಳಿತ ಎಚ್ಚರಿಕೆ ಹಾಗೂ ಸರಕಾರಿ ಜಾಗದಲ್ಲಿ ಮನೆ ಕಟ್ಟಿ ಕೂರು ಅಪರಾಧ ಎನ್ನುವ ಸೂಚನೆ ನೀಡಿದೆ.
2012ರ ಮೊದಲು ಸರಕಾರಿ ಜಾಗದಲ್ಲಿ ಮನೆ ಇದ್ದು 94ಸಿ ಗಾಗಿ ಅರ್ಜಿ ಸಲ್ಲಿಸಿದವರಿಗೆ ಮಾತ್ರ ಸರಕಾರಿ ಜಾಗವನ್ನು ತಮ್ಮದಾಗಿಸಿಕೊಳ್ಳಲು ಹಕ್ಕುಪತ್ರ ನೀಡಲಾಗುತ್ತದೆ ಬಿಟ್ಟರೆ 2012 ರ ಬಳಿಕ ಸರಕಾರಿ ಜಾಗದಲ್ಲಿ ಮನೆ ಕಟ್ಟಿ ಕೂತವರಿಗೆ ಹಕ್ಕುಪತ್ರ ನೀಡಲಾಗುವುದಿಲ್ಲ.ಕೆಲವರು ಸರಕಾರಿ ಜಾಗದಲ್ಲಿ ಮನೆ ಕಟ್ಟಿದರೆ ಸವಲತ್ತು ಸಿಗುತ್ತದೆ ಎನ್ನುವ ಕುರಿತು ಸುಮ್ಮನೆ ಗುಲ್ಲೆಬ್ಬಿಸುವುದು ಕಂಡುಬಂದಿದೆ. ಹಾಗೆ ಮನೆಕಟ್ಟಿದವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವ ಹಕ್ಕು ಇದೆ.ತಾಲೂಕಿನ ಜನರು ಈ ಕುರಿತು ಎಚ್ಚರಾಗಿರಬೇಕು ಸರಕಾರಿ ಜಾಗದಲ್ಲಿ ಈಗ ಮನೆ ಕಟ್ಟುವುದು ಅಪರಾಧ.ಮನೆ ಬೇಕಿದ್ದರೆ ಪಂ. ವ್ಯಾಪ್ತಿಯಲ್ಲಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಬೇಕು.
-ಟಿ.ಜಿ.ಗುರುಪ್ರಸಾದ್, ಕಾರ್ಕಳ ತಹಶೀಲ್ದಾರ್