Advertisement
ಹಿರಿಯರಿಗೆ ಕಷ್ಟಪುರಸಭೆ ವ್ಯಾಪ್ತಿಯಲ್ಲಿ ಹನ್ನೆರಡು ಸಾವಿರಕ್ಕೂ ಅಧಿಕ ಕಟ್ಟಡ, ನೀರಿನ ಸಂಪರ್ಕ ಹೊಂದಿದ್ದರೂ ತೆರಿಗೆ/ ಶುಲ್ಕ ಸಂಗ್ರಹಕ್ಕೆ ನಗದು ಸ್ವೀಕೃತಿ ವಿಭಾಗ ಇಲ್ಲ. ಇದರಿಂದಾಗಿ ಜನಸಾಮಾನ್ಯರು ಕಚೇರಿಗಳಿಗೆ ಅಲೆದಾಡುವುದು ನಿತ್ಯದ ಕಾಯಕವಾಗಿದೆ. ಇದರಿಂದ ಹೆಚ್ಚು ಕಿರಿಕಿರಿ ಅನುಭವಿಸುತ್ತಿರುವವರು ಹಿರಿಯ ನಾಗರಿಕರು. ಸದ್ಯ ಬಿಸಿಲಿನ ತಾಪ, ಕೊರೊನಾ ಸೋಂಕಿನ ಭೀತಿ ನಡುವೆ ಹಿರಿಯರು ತೆರಿಗೆ/ಶುಲ್ಕ ಪಾವತಿಗೆ ಅಲೆದಾಡುತ್ತಿದ್ದಾರೆ. ಮೊದಲೆಲ್ಲ ಶುಲ್ಕ, ತೆರಿಗೆ ಸಂಗ್ರಹಕ್ಕೆ ಮನೆ ಬಾಗಿಲಿಗೆ ಸಿಬಂದಿಯೇ ಬಂದು ಸಂಗ್ರಹಿಸುತ್ತಿದ್ದರು. ಅದು ಕಾಲಕ್ರಮೇಣ ರದ್ದುಗೊಂಡಿದೆ. ಪುರಸಭೆ ಕಚೇರಿಗೆ ಬಂದು ಪಾವತಿಸುವ ನಿಯಮ ರೂಪಿಸಲಾಯಿತು. ಅದಕ್ಕೂ ನಾಗರಿಕರೂ ಹೊಂದಿಕೊಂಡಿದ್ದರು.
Related Articles
ಮೆಸ್ಕಾಂ ವ್ಯವಸ್ಥೆಯಲ್ಲಿ ಕೌಂಟರ್‌ನಲ್ಲಿ ಹಣ ಪಾವತಿಸುವ, ಆನ್‌ಲೈನ್‌ನಲ್ಲಿ ಹಣ ಪಾವತಿಸುವ ಸೌಕರ್ಯವಿದೆ. ಇಂತಹ ವ್ಯವಸ್ಥೆ ಪುರಸಭೆಗೂ ಬಂದರೆ ಅನುಕೂಲ. ಅಥವಾ ಪುರಸಭೆ ಆವರಣದಲ್ಲೇ ಒಂದು ನಗದು ಸ್ವೀಕೃತಿ ವಿಭಾಗ ತೆರೆದು ಅನುಕೂಲ ಮಾಡಿಕೊಡುವಂತೆ ನಾಗರಿಕರು ಆಗ್ರಹಿಸಿದ್ದಾರೆ. ಕೋಟ್ಯಂತರ ರೂ. ತೆರಿಗೆ, ನೀರಿನ ಬಿಲ್ಲು ಇತ್ಯಾದಿ ಹರಿದು ಬರುವಾಗ ಪ್ರತ್ಯೇಕ ಕೌಂಟರ್ ತೆರೆಯು ವುದು ಸಂಸ್ಥೆಗೆ ಹೊರೆಯಾಗದು ಎನ್ನುವ ಅಭಿ ಪ್ರಾಯವೂ ವ್ಯಕ್ತವಾಗಿದೆ.
Advertisement
ಎರಡು ಬಾರಿ ಅಲೆದಾಟಇತ್ತೀಚಿನ ಕೆಲವು ವರ್ಷಗಳಿಂದ ಬದಲಾದ ನಿಯಮಗಳಿಂದ ಹೆಚ್ಚು ತೊಂದರೆಗೆ ಒಳಗಾಗು ತ್ತಿರುವವರು ಹಿರಿಯ ನಾಗರಿಕರು. ವರ್ಷಕ್ಕೊಮ್ಮೆ ಮನೆ ತೆರಿಗೆ ಬ್ಯಾಂಕು, ಕಚೇರಿಗೆ ತೆರಳಿ ಕಟ್ಟುವುದಕ್ಕೆ ಸಮಸ್ಯೆ ಆಗುತ್ತಿರಲಿಲ್ಲ. ಇತ್ತೀಚೆಗೆ ಮಾಸಿಕ ನೀರಿನ ಶುಲ್ಕವನ್ನು ಕೂಡ ಪುರಸಭೆಗೆ ಆಗಮಿಸಿ ಅಲ್ಲಿಂದ ಚಲನ್‌ನೊಂದಿಗೆ ಬ್ಯಾಂಕಿಗೆ ತೆರಳಿ ಹಣ ಪಾವತಿಸಿ ಅನಂತರ ಪುರಸಭೆಗೆ ತಲುಪಿಸಬೇಕು. ಈ ನಿಯಮಗಳಿಂದಾಗಿ ಕಚೇರಿಯಿಂದ ಕಚೇರಿಗೆ ಅಲೆದು ಹಿರಿ ಜೀವಗಳು ಸುಸ್ತಾಗುತ್ತಿವೆ. ಗಮನ ಸೆಳೆಯಲು ಯತ್ನ
ಹಿರಿಯ ನಾಗರಿಕರು ನಾವು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ತೆರಿಗೆ/ಶುಲ್ಕ ಪಾವತಿಗೆ ಸಮಸ್ಯೆಯಾಗಿದ್ದು, ಈ ಬಗ್ಗೆ ಒಕ್ಕೂಟಗಳಲ್ಲಿ ಚರ್ಚಿಸಿ ಸಂಬಂಧಪಟ್ಟವರ ಗಮನ ಸೆಳೆಯಲು ಯತ್ನಿಸುತ್ತಿದ್ದೇವೆ.
-ಕೆ.ವಾಸುದೇವ ರಾವ್, ಕಾರ್ಯದರ್ಶಿ, ಹಿರಿಯ ನಾಗರಿಕರ ವೇದಿಕೆ ಕಾರ್ಕಳ ತಾ| ಸಮಿತಿ ಶೀಘ್ರ ಅಳವಡಿಕೆ
ಹಿರಿಯ ನಾಗರಿಕರಿಗೆ ಕಷ್ಟವಾಗುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಶೀಘ್ರವೇ ಪೇಮೆಂಟ್ ಇನ್‌ಸ್ಟಾಲೇಶನ್ ವ್ಯವಸ್ಥೆಯನ್ನು ಪುರಸಭೆ ಆವರಣದಲ್ಲಿ ಅಳವಡಿಸಲಾಗುವುದು. ಇದರಿಂದ ಅನುಕೂಲವಾಗಲಿದೆ.- ರೇಖಾ ಜೆ. ಶೆಟ್ಟಿ , ಮುಖ್ಯಾಧಿಕಾರಿ, ಪುರಸಭೆ – ಬಾಲಕೃಷ್ಣ ಭೀಮಗುಳಿ