Advertisement

ಹೊಂಡ ಗುಂಡಿಗಳ ಮಧ್ಯೆ ರಸ್ತೆ ಎಲ್ಲಿದೆ?

06:00 AM Jun 29, 2018 | |

ಕಾರ್ಕಳ: ಮಳೆಗಾಲ ಪ್ರಾರಂಭವಾಗಿ ತಿಂಗಳು ಕಳೆವ ಮುನ್ನವೇ ಹೊಂಡಗುಂಡಿಗಳು ಕಾರ್ಕಳದ ರಸ್ತೆಗಳಲ್ಲಿ ನಿರ್ಮಾಣವಾಗಿವೆ. 
 
ರಸ್ತೆ ಹಾಳಾಗಿದ್ದು ಎಲ್ಲೆಲ್ಲಿ? 
ನಗರದ ಮುಖ್ಯ ರಸ್ತೆಯ ಸಾಲ್ಮರ, ರಥಬೀದಿ, ತಾಲೂಕು ಕಚೇರಿ, ಮೂರು ಮಾರ್ಗ ರಸ್ತೆ ಹದಗೆಟ್ಟಿದೆ. ಸಾಲ್ಮರ- ರಥಬೀದಿ ರಸ್ತೆಯ ಮೇಲ್ಪದರವಂತೂ ಸಂಪೂರ್ಣ ಕೆಟ್ಟು ಹೋಗಿದೆ. ಸಮರ್ಪಕ ವಾಗಿ ಒಳಚರಂಡಿ ವ್ಯವಸ್ಥೆ ಇಲ್ಲದಿರು ವುದರಿಂದ ಮಳೆ ನೀರು ರಸ್ತೆಯಲ್ಲೇ ಹರಿದು  ಇಂತಹ ಸಮಸ್ಯೆ ಎದುರಾಗಿದೆ. 
 
ವಾಹನ ಸವಾರರಿಗೆ ಅಪಾಯ
ಜೋರಾಗಿ ಮಳೆ ಸುರಿಯವ ಸಂದರ್ಭ ಈ ಹೊಂಡಗಳು ನೀರಿನಿಂದ ತುಂಬುತ್ತವೆ. ಹೀಗಾಗಿ ಸವಾರರು ಅಂದಾಜಿಲ್ಲದೇ ತೆರಳುವುದರಿಂದ ಅಪಾಯ ಕಟ್ಟಿಟ್ಟ ಬುತ್ತಿ ಯಾಗಿದೆ.  ಈಗಾಗಲೇ ಕೆಲವು ದ್ವಿಚಕ್ರ ವಾಹನ ಸವಾರರು ರಸ್ತೆಯಲ್ಲಿ ಬಿದ್ದು ಗಾಯಗಳಾದ ಘಟನೆಗಳು ಸಂಭವಿಸಿವೆ.  

Advertisement

ಕಾರ್ಕಳ ಪೇಟೆಯಲ್ಲಿ ಸರಿಯಾದ ರೀತಿಯಲ್ಲಿ  ಫ‌ುಟ್‌ಪಾತ್‌ ವ್ಯವಸ್ಥೆ ಇನ್ನೂ ಇಲ್ಲ. ಇದ್ದಲ್ಲಿ ಹೊಂಡಗಳಿವೆ. ಮಳೆ ಬರುವ ವೇಳೆ  ರಸ್ತೆಯಲ್ಲೇ ನಡೆಯಬೇಕಾಗಿ ರುವುದರಿಂದ ಕೆಸರಿನ ಅಭಿಷೇಕವಾಗುತ್ತದೆ.  ಕೆಲವು ಭಾಗದಲ್ಲಿ ಫ‌ುಟ್‌ಪಾತ್‌ನಲ್ಲೇ ಅಂಗಡಿಗಳು ಕೂಡ ಇವೆ.

ಚರ್ಚೆಯಾದರೂ ಪ್ರಯೋಜನವಿಲ್ಲ
ರಸ್ತೆಹೊಂಡ ಮುಚ್ಚುವ ಕುರಿತು, ಒಳಚರಂಡಿ ವ್ಯವಸ್ಥೆ ಹಾಗೂ ಇನ್ನಿತರ ಸಮಸ್ಯೆಗಳ ಬಗ್ಗೆ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಪ್ರತೀಬಾರಿ ಚರ್ಚೆಯಾಗುತ್ತದೆ. ಆದರೆ  ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿಲ್ಲ.

ಕ್ರಮ ಕೈಗೊಳ್ಳಿ
ರಸ್ತೆ ಹೊಂಡಗಳನ್ನು ಜಲ್ಲಿ  ಹಾಕಿಯಾದರೂ ಮುಚ್ಚಬೇಕು. ಓಡಾಡಲೂ ಕಷ್ಟವಾಗುತ್ತಿದೆ. ಒಳಚರಂಡಿಗೆ ಸರಿಯಾದ ಸಂಪರ್ಕ ವ್ಯವಸ್ಥೆ ಇಲ್ಲದೇ ನೀರು ರಸ್ತೆಯಲ್ಲೇ ಹರಿದಾಡುತ್ತಿದೆ.
– ವಿವೇಕಾನಂದ ಶೆಣೈ,
ಪುರಸಭೆ ಸದಸ್ಯರು

ಎಚ್ಚೆತ್ತುಕೊಳ್ಳಿ 
ಮಳೆಗಾಲದ ಆರಂಭಕ್ಕೂ  ಮುನ್ನ ಕೆಲವೊಂದು ಸಮಸ್ಯೆಗಳನ್ನು ಬಗೆಹರಿಸಬಹುದಿತ್ತು. ಆದರೆ ಆ ಬಗ್ಗೆ  ಸಂಬಂಧಿಸಿದವರು ತಲೆಕೆಡಿಸಿಕೊಂಡಿಲ್ಲ.
– ಸತೀಶ್‌, ಸ್ಥಳೀಯ ನಿವಾಸಿ

Advertisement
Advertisement

Udayavani is now on Telegram. Click here to join our channel and stay updated with the latest news.

Next