Advertisement

ಕಾರ್ಕಳ ತಾ|: ಪಾಲ ಸಂಕಗಳಿಗೆ ಮುಕ್ತಿ

01:00 AM Feb 25, 2019 | Harsha Rao |

ಕಾರ್ಕಳ: ತಾಲೂಕಿನಲ್ಲಿ ಕಾಲು ಸಂಪರ್ಕ ನಿರ್ಮಾಣಕ್ಕೆ 12 ಕೋಟಿ ರೂ. ಬಿಡುಗಡೆಗೊಂಡಿದ್ದು, ತಾಲೂಕಿನೆಲ್ಲೆಡೆ ಸುಮಾರು 246 ಕಾಲು ಸೇತುವೆಗಳ ನಿರ್ಮಾಣವಾಗಲಿದೆ. ರಾಜ್ಯ ಸರಕಾರ ಶಾಲಾ ಮಕ್ಕಳ ಅನುಕೂಲಕ್ಕಾಗಿ ಜಾರಿಗೊಳಿಸಿದ ಶಾಲಾ ಸಂಪರ್ಕ ಸೇತು ಯೋಜನೆಯಡಿ ಅನುದಾನ ದೊರೆಯುತ್ತಿದ್ದು, ಮಳೆಗಾಲಕ್ಕೆ ಮುಂಚೆ ಕಾಮಗಾರಿ ಪೂರ್ಣಗೊಳ್ಳಲಿದೆ.

Advertisement

ಶಾಲಾ ಮಕ್ಕಳ ಅನುಕೂಲಕ್ಕಾಗಿಯೇ ಪ್ರಮುಖವಾಗಿ ಕರಾವಳಿ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಯೋಜನೆ ಅನುಷ್ಠಾನಗೊಳ್ಳುತ್ತಿದ್ದು, ಹಳ್ಳಿಗಳು ಮುಖ್ಯ ವಾಹಿನಿಗೆ ಸುಲಭವಾಗಿ ಸಂಪರ್ಕ ಹೊಂದುವ ಮತ್ತು ಪಾಲ ಸಂಪರ್ಕ ದಿಂದಾಗುವ ತೊಂದರೆ ತಪ್ಪಿಸುವ ಉದ್ದೇಶದಿಂದ ಈ ಹೊಸಯೋಜನೆ ಜಾರಿಗೊಂಡಿದ್ದು ಬಹಳ ಪ್ರಯೋಜನಕಾರಿಯಾಗಲಿದೆ.

ಸೇತುವೆ ನಿರ್ಮಾಣದೊಂದಿಗೆ ಅಪಾಯಕಾರಿ ತೋಡು, ಹಳ್ಳ-ಕೊಳ್ಳ ದಾಟುವ ಪ್ರಯಾಸವನ್ನು ಶಾಶ್ವತವಾಗಿ ಪರಿ ಹರಿಸುವಂತಾಗುವ ಮೂಲಕ ವಿದ್ಯಾರ್ಥಿ ಗಳ ಸುರಕ್ಷೆಯೊಂದಿಗೆ ಹಳ್ಳಿಗಾಡಿನವರಿಗೆ ಅನುಕೂಲವಾಗಲಿದೆ.

ಕಾರ್ಕಳಕ್ಕೆ 12 ಕೋಟಿ ರೂ.
ಕಾರ್ಕಳ ತಾಲೂಕಿನಾದ್ಯಂತ ಸುಮಾರು 246 ಕಾಲು ಸೇತುವೆಗಳ ನಿರ್ಮಾಣಕ್ಕಾಗಿ ರೂ. 12 ಕೋಟಿ ರೂ. ಈಗಾಗಲೇ ಬಿಡುಗಡೆಯಾಗಿದೆ.

ಸ್ಥಳ ಲಭ್ಯತೆಯನ್ನು ದೃಷ್ಟಿಯಲ್ಲಿಟ್ಟು ಕೊಂಡು 1ರಿಂದ 3 ಕಿ.ಮೀ. ಅಗಲದಲ್ಲಿ ಸೇತುವೆ ನಿರ್ಮಾಣವಾಗಲಿದೆ. ಸಾರ್ವಜನಿಕರ ಓಡಾಟ ಮಾತ್ರವಲ್ಲದೆ ಈ ಕಿರು ಸೇತುವೆ ಮೂಲಕ ದ್ವಿಚಕ್ರ, ತ್ರಿಚಕ್ರ ವಾಹನ ಸಂಚಾರಕ್ಕೂ ಅವಕಾಶ ದೊರೆಯಲಿದೆ.

Advertisement

ಪಾಲಕ್ಕೆ ಮುಕ್ತಿ
ಈ ಹಿಂದೆ ತೋಡು ಹಳ್ಳ-ಕೊಳ್ಳ ದಾಟಲು ಅಡಿಕೆ ಮರ, ಹಲಗೆ, ಬಿದಿರು, ಮರಗಳನ್ನು ಬಳಸಿ ಹಗ್ಗದಿಂದ ಹೆಣೆದು ಪಾಲ ಸಂಕ ನಿರ್ಮಿಸಲಾಗುತ್ತಿತ್ತು. ಇದೇ ಪಾಲ ಸಂಪರ್ಕ ಕೊಂಡಿಯಾಗಿರುತ್ತಿತ್ತು. ಹೊಸ ಯೋಜನೆಯಿಂದ ಪಾಲಕ್ಕೆ ಮುಕ್ತಿ ಲಭಿಸಲಿದೆ.

ಬೇಡಿಕೆ ಸ್ವೀಕರಿಸಲಾಗುತ್ತಿದೆ
ಶಾಲಾ ಸಂಪರ್ಕ ಯೋಜನೆಯಡಿ ಸೇತುವೆ ನಿರ್ಮಾಣಕ್ಕಾಗಿ ಶಾಲೆಗಳಿಂದ ಬೇಡಿಕೆ ಸ್ವೀಕರಿಸಲಾಗುತ್ತಿದೆ. ಯೋಜನೆ ಕುರಿತಂತೆ ಲೋಕೋಪಯೋಗಿ ಇಲಾಖೆ ಕ್ರಿಯಾ ಯೋಜನೆ ತಯಾರಿಸಿ ಅನುಮೋದನೆ ಪಡೆಯಲಿದೆ.
– ಸೋಮಶೇಖರ್‌ ಸಿ. ಎಇ, ಲೋಕೋಪಯೋಗಿ ಇಲಾಖೆ, ಕಾರ್ಕಳ

ಸ್ವರ್ಣ ಕಾರ್ಕಳದತ್ತ ದೃಢ ಹೆಜ್ಜೆ
ರಾಜ್ಯದಲ್ಲೇ ಅತಿ ಹೆಚ್ಚಿನ ಕಾಲು ಸೇತುವೆಗಳು ಕಾರ್ಕಳದಲ್ಲಿ ನಿರ್ಮಾಣವಾಗುವ ಮೂಲಕ ತಾಲೂಕಿನಲ್ಲಿ ಕಾಲು ಸೇತುವೆಗಳು ಮಾಯವಾಗಲಿದೆ. ಕಳೆದ ವರ್ಷ ತಾಲೂಕಿನಲ್ಲಿ 57 ಕಿಂಡಿ ಅಣೆಕಟ್ಟುಗಳ ರಚನೆ, ಈ ವರ್ಷ 222 ಕಾಲುಸೇತುವೆಗಳ ನಿರ್ಮಾಣದೊಂದಿಗೆ ಕನಸಿನ ಸ್ವರ್ಣ ಕಾರ್ಕಳದತ್ತ ದೃಢ ಹೆಜ್ಜೆಯನ್ನಿಡಲಾಗುತ್ತಿದೆ.
-ವಿ.ಸುನಿಲ್‌ ಕುಮಾರ್‌ ಶಾಸಕರು, ಕಾರ್ಕಳ

Advertisement

Udayavani is now on Telegram. Click here to join our channel and stay updated with the latest news.

Next