Advertisement

ಕಾರ್ಕಳ- ಪಡುಬಿದ್ರಿ ಹೆದ್ದಾರಿ: ಹೆಜ್ಜೆ ಹೆಜ್ಜೆಗೂ ಹಂಪ್‌ಗ್ಳು: ಸಂಚಾರ ಸಂಕಷ್ಟ!

09:30 PM Oct 05, 2020 | mahesh |

ಕಾರ್ಕಳ: ಕಾರ್ಕಳ- ಪಡುಬಿದ್ರಿ ಹೆದ್ದಾರಿಯಲ್ಲಿ ಅತ್ಯಲ್ಪ ಅಂತರದಲ್ಲಿ ಇರುವ ಹಂಪ್‌ಗಳಿಂದಾಗಿ ಸಂಚಾರದ ವೇಳೆ ವಾಹನ ಸವಾರರ ಕಷ್ಟ ಹೇಳತೀರದು. ಅನೇಕ ಅಪಘಾತಗಳಿಗೂ ಈ ಹಂಪ್‌ಗ್ಳೇ ಕಾರಣವಾಗಿವೆ ಎಂಬುದು ಸವಾರರ ಸಾರ್ವತ್ರಿಕ ಅಭಿಪ್ರಾಯವಾಗಿದೆ.

Advertisement

ನಗರ ಹಾಗೂ ಗ್ರಾಮೀಣ ಪ್ರದೇಶ ಸಂಪರ್ಕಿಸುವ ಪ್ರಮುಖ ಹೆದ್ದಾರಿಯಾಗಿರುವ ಇಲ್ಲಿ ನಿತ್ಯ ಸಹಸ್ರಾರು ವಾಹನಗಳು ಸಂಚರಿಸುತ್ತವೆ. ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಹಂಪ್‌ ಗಳಿಂದಾಗಿ ವಾಹನ ಸವಾರರ ಪಾಲಿಗೆ ಅಪಘಾತ ವಲಯಗಳಾಗಿ ಪರಿವರ್ತಿಸಿವೆ.

ಕಾರ್ಕಳ -ಪಡುಬಿದ್ರಿ ರಾಜ್ಯ ಹೆದ್ದಾರಿಯ ನಿರ್ಮಾಣದ ಬಳಿಕ ಅಪಘಾತಗಳ ಪ್ರಮಾಣವೂ ಹೆಚ್ಚಾಗತೊಡಗಿದೆ. ಸವಾರರ ಮತ್ತು ಪ್ರಯಾಣಿಕರ ಸುರಕ್ಷತೆಗಾಗಿ ಅಪಘಾತ ನಡೆಯುವ ಸ್ಥಳಗಳಿಗೆ ಹಂಪ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಕಾರ್ಕಳ ಪಡುಬಿದ್ರಿ ರಾಜ್ಯ ಹೆದ್ದಾರಿಯಲ್ಲಿ 29 ಕಿ.ಮೀ. ಅಂತರದಲ್ಲಿ 38 ಹಂಪ್ಸ್‌ ಹಾಗೂ ಸ್ಪೀಡ್‌ ಬ್ರೇಕರ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಅವೆಲ್ಲವೂ ಈಗ ಬಣ್ಣ ಕಳೆದುಕೊಂಡು ಸವಾರರ ಗೋಚರಕ್ಕೆ ಬಾರದ ಸ್ಥಿತಿಗೆ ತಲುಪಿವೆ. ಹೆದ್ದಾರಿಯಲ್ಲಿ ನಿತ್ಯ ಒಂದಲ್ಲ ಒಂದು ಕಡೆ ಅವಘಡಗಳು ಸಂಭವಿಸಲು ಕಾರಣವಾಗುತ್ತಿವೆ ಎಂದು ಸವಾರರು ಅಳಲು ತೋಡಿಕೊಂಡಿದ್ದಾರೆ.

ಈ ಹೆದ್ದಾರಿಯಲ್ಲಿ ಲೆಕ್ಕಕ್ಕಿಂತ ಹೆಚ್ಚು ಹಂಪ್ಸ್‌ ನಿರ್ಮಿಸಿರುವುದು ಸುರಕ್ಷತೆಗಿಂತ ಅಸುರಕ್ಷಿತೆಯೇ ಹೆಚ್ಚಾಗುವಂತೆ ಮಾಡು ತ್ತದೆ. ವಾಹನ ಸವಾರರು ಮೇಲಿಂದ ಮೇಲೆ ಬ್ರೇಕ್‌ ಹೊಡೆದು ಸಾಗುವ ಸ್ಥಿತಿಯಿದ್ದು, ಸವಾರರ, ಪ್ರಯಾಣಿಕರ ಜೀವಕ್ಕೆ ಸಂಚಕಾರ ಎದುರಾಗುತ್ತಿದೆ.
ಬಹುಮುಖ್ಯವಾಗಿ ನಿಟ್ಟೆ, ಹಾಳೆಕಟ್ಟೆ, ಬೆಳ್ಮಣ್‌, ಕೆದಿಂಜೆ, ನಂದಳಿಕೆ ಲಕ್ಷ್ಮೀ ಜನಾರ್ದನ ಶಾಲೆ, ಅಡ್ವೆ, ನಂದಿಕೂರು, ಕಾಂಜರಕಟ್ಟೆ, ಅಂಚೆಕಚೇರಿ, ಚರ್ಚ್‌ ಬಳಿಯ ಹಂಪ್ಸ್‌ಗಳು ಹೆಚ್ಚು ಅಪಾಯಕಾರಿ ಸ್ಥಳಗಳಾಗಿವೆ.

ಹಂಪ್ಸ್‌ ಸಂಖ್ಯೆ ಇಳಿಸಿ
ಹೆದ್ದಾರಿಯಲ್ಲಿ ಹಂಪ್ಸ್‌ಗಳು ಅಗತ್ಯಕ್ಕಿಂತ ಹೆಚ್ಚಿವೆ. ರಾಜ್ಯ ಹೆದ್ದಾರಿ ಇಲಾಖೆ ಸುರಕ್ಷೆಯ ಬಗ್ಗೆ ಪುನರ್‌ ಪರಿಶೀಲನೆ ನಡೆಸಿ, ಸುರಕ್ಷೆಯ ಮಾನದಂಡ ಅಳವಡಿಸಿ ಹಂಪ್ಸ್‌ ಸಂಖ್ಯೆ ಕಡಿಮೆಗೊಳಿಸಬೇಕಿದೆ. ಅಪಘಾತ ಪ್ರಮಾಣಕ್ಕೆ ಕಡಿವಾಣ ಹಾಕಬೇಕಿದೆ.
-ದಿನೇಶ್‌ ಶೆಟ್ಟಿ, ಸವಾರ

Advertisement

ಶೀಘ್ರ ಬಣ್ಣ
ಹಿಂದಿನ ವರ್ಷ ಬಣ್ಣ ಬಳಿಯಲಾಗಿತ್ತು. ಈ ಬಾರಿ ಆಗಿಲ್ಲ. ವಿವಿಧ ಕಾರಣಗಳಿಂದ ತಡವಾಗಿದೆ. ಶೀಘ್ರದಲ್ಲೇ ಹಂಪ್ಸ್‌ಗಳಿಗೆ ಬಣ್ಣ ಕೊಡಲಾಗುವುದು. ಸುರಕ್ಷತೆಗೂ ಕ್ರಮ ವಹಿಸಲಾಗುವುದು .
-ಮಿಥುನ್‌ಕುಮಾರ್‌ ಅಸಿಸ್ಟೆಂಟ್‌ ಎಕ್ಸಿಕ್ಯೂಟಿವ್‌ ಎಂಜಿನಿಯರ್‌

Advertisement

Udayavani is now on Telegram. Click here to join our channel and stay updated with the latest news.

Next