Advertisement

ಕಾರ್ಕಳ: ಮುಂಡ್ಕೂರು ಗ್ರಾಮದಲ್ಲಿ ವೃದ್ಧರ ಮೇಲೆ ಚಿರತೆ ದಾಳಿ

10:53 AM Sep 09, 2022 | Team Udayavani |

ಬೆಳ್ಮಣ್: ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಚಿರತೆಯೊಂದು ದಾಳಿ ಮಾಡಿದ ಘಟನೆ ಶುಕ್ರವಾರ ನಡೆದಿದೆ.

Advertisement

ಮುಲ್ಲಡ್ಕದ ರಾಜಶ್ರೀ ರೈಸ್ ಮಿಲ್ ಬಳಿಯ ಕೃಷ್ಣ ಶೆಟ್ಟಿ ಎಂಬವರ ಮೇಲೆ ಚಿರತೆ ದಾಳಿ ನಡೆಸಿದೆ. ಕೃಷ್ಣ ಶೆಟ್ಟಿ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಅರಣ್ಯ ಇಲಾಖೆಯವರು, ಕಾರ್ಕಳ ಗ್ರಾಮಾಂತರ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:ಭಾರಿ ಮಳೆಗೆ ಕೊಚ್ಚಿಹೋದ ಸೋಗಲಿ-ಮೂಕಿಹಾಳ ಹಳ್ಳದ ಸೇತುವೆ: ಸಂಪರ್ಕ ಕಡಿತ

ಸುಮಾರು 20 ದಿನಗಳ ಹಿಂದೆ ಬಳಿಯ ಬೋಳ ಗ್ರಾಮದಲ್ಲಿ ಚಿರತೆಯೊಂದು ಬೋನಿಗೆ ಬಿದ್ದಿತ್ತು. ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಒಂದು ಚಿರತೆ ಬಿದ್ದಿತ್ತು. ಆದರೆ ಪರಿಸರದಲ್ಲಿ ಇನ್ನೆರಡು ಚಿರತೆಗಳು ಓಡಾಡುತ್ತಿವೆ ಎಂದು ಸ್ಥಳಿಯರು ಆತಂಕ ವ್ಯಕ್ತಪಡಿಸಿದ್ದರು. ಸೆರೆ ಹಿಡಿದ ಚಿರತೆಯನ್ನು ಕುದುರೆಮುಖ ಅಭಯಾರಣ್ಯ್ಕಕೆ ಬಿಟ್ಟಿದ್ದರು. ಬೋಳಕೋಡಿ ಪರಿಸರದಲ್ಲಿದ್ದ ಚಿರತೆಗಳು ಇದೀಗ ಮುಲ್ಲಡ್ಕ ಕಡೆಗೆ ಬಂದಿರಬಹುದು ಎನ್ನುತ್ತಾರೆ ಸ್ಥಳೀಯರು.

Advertisement
Advertisement

Udayavani is now on Telegram. Click here to join our channel and stay updated with the latest news.

Next