Advertisement

ಕಾರ್ಕಳ: ಬೀದಿನಾಯಿ ನಿಯಂತ್ರಣಕ್ಕೆ ಆರ್ಥಿಕ ಕೊರತೆ!

07:26 PM Oct 23, 2021 | Team Udayavani |

ಕಾರ್ಕಳ: ತಾಲೂಕಿನಲ್ಲಿ ಬೀದಿ ನಾಯಿಗಳ ಕಾಟದಿಂದಾಗಿ ನಗರದ ರಸ್ತೆಗಳಲ್ಲಿ  ಜನ ಓಡಾಡುವುದಕ್ಕೂ ಭಯಪಡುವಂತಾಗಿದೆ. ಕಾರ್ಕಳ ಪುರಸಭೆ ವ್ಯಾಪ್ತಿಯ ಆನೆಕೆರೆ,  ಪೆರ್ವಾಜೆ,  ಬಂಡಿಮಠ ಬಸ್‌ ನಿಲ್ದಾಣ, ಸ್ವರಾಜ್‌ ಮೈದಾನ, ನಗರದ ಬಸ್‌ ನಿಲ್ದಾಣ, ಬೈಪಾಸ್‌ ರಸ್ತೆಯ ಸರ್ವಜ್ಞ  ವೃತ್ತಗಳಲ್ಲಿ  ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ. ಮಕ್ಕಳು ಶಾಲೆಗೆ ತೆರಳುವ ಸಂದರ್ಭ ನಾಯಿಗಳು ಗುರುಗುಟ್ಟುತ್ತಿರುತ್ತವೆ. ರಸ್ತೆ, ವಾಹನ, ಕಾಲ್ನಡಿಗೆಯಲ್ಲಿ ತೆರಳುವವರಿಗೆ ಆತಂಕ ಉಂಟಾಗಿದೆ.

Advertisement

ನಾಯಿ ಕಚ್ಚಿ ಸಾವು
ಕೆಲವು ದಿನಗಳ ಹಿಂದೆಯಷ್ಟೇ  ಮೂರೂರು ಎಂಬಲ್ಲಿ ನಾಯಿ ಕಚ್ಚಿ ವೃದ್ಧರೊಬ್ಬರು ಮೃತಪಟ್ಟಿದ್ದರು. ನಗರದ ವ್ಯಾಪ್ತಿಯಲ್ಲಿ ಬಾಲಕನೋರ್ವನಿಗೆ ನಾಯಿ ಕಚ್ಚಿ ಗಾಯಗೊಳಿಸಿತ್ತು.  ಹೀಗೆ ಅಲ್ಲೊಂದು ಇಲ್ಲೊಂದು ಘಟನೆ ಆಗಾಗ್ಗೆ  ನಡೆಯುತ್ತಿರುತ್ತದೆ.

ವಾಕಿಂಗ್‌ಗೂ ಸಮಸ್ಯೆ
ಈಗ  ನಸುಕಿನಲ್ಲಿ   ತುಸು ಮಂಜುಕಿದ ವಾತಾವರಣವಿದೆ. ಹೆಚ್ಚಿನವರು ಈ ಅವಧಿಯಲ್ಲಿ  ಬೆಳಗ್ಗಿನ ವಾಕಿಂಗ್‌ಗೆ ತೆರಳುತ್ತಾರೆ. ಈ ಸಮಯದಲ್ಲೂ ಕೂಡ ಅವರು ಬೀದಿ ನಾಯಿಗಳ  ಉಪಟಳ ಎದುರಿಸಿದ್ದಾರೆ.

ಅಸಹಾಯಕ ಸ್ಥಿತಿ!
ನಗರಸಭೆ, ಸ್ಥಳೀಯಾಡಳಿತದ‌  ಅಧಿಕಾರಿಗಳು ಬೀದಿ ನಾಯಿಗಳಿಗೆ ಸಂತಾನಶಕ್ತಿ ಹರಣ ಚಿಕಿತ್ಸೆ  ನೀಡಿದಲ್ಲಿ  ಅವುಗಳ ಸಂಖ್ಯೆ  ಕ್ರಮೇಣ ಇಳಿಮುಖಗೊಳ್ಳುತ್ತದೆ.ಇದಕ್ಕಾಗಿಸಂತಾನಹರಣ ಶಸ್ತ್ರಚಿಕಿತ್ಸೆ ಏಜೆನ್ಸಿಗಳಿಗೆ  ಟೆಂಡರ್‌ ನೀಡಿ ನಡೆಸಬೇಕಿದೆ. ಆದರೆ ಒಂದು ನಾಯಿಯ ಶಸ್ತ್ರಚಿಕಿತ್ಸೆಗೆ ಸರಿಸುಮಾರು 2 ಸಾವಿರ ರೂ. ವೆಚ್ಚ  ತಗಲುತ್ತದೆ.   ಜಿ.ಪಂ.,  ತಾ.ಪಂ.,  ಪುರಸಭೆ, ಸ್ಥಳೀಯಾಡಳಿತಗಳು  ಖರ್ಚು ಮಾಡಿಯೂ ಇದು ಶಾಶ್ವತ ಪರಿಹಾರವಲ್ಲ. ಆರ್ಥಿಕವಾಗಿ  ದುರ್ಬಲವಾಗಿರುವ  ಗ್ರಾ.ಪಂ.ಗಳಿಗೆ ಇಷ್ಟು  ದೊಡ್ಡ ಮೊತ್ತದ ಹಣ ಭರಿಸಲು ಸಾಧ್ಯವಿಲ್ಲ.  ಹೊರೆಯಾಗುತ್ತದೆ. ಅಲ್ಲದೆ ಇಂತಹದಕ್ಕೆಲ್ಲ ಪ್ರತ್ಯೇಕ ಅನುದಾನ  ಸರಕಾರದಿಂದ ಇಲ್ಲ. ಹೀಗಾಗಿ ಅಧಿಕಾರಿಗಳು, ಪಂಚಾಯತ್‌ನವರು  ಅಸಹಾಯಕರಾಗುವಂತಾಗಿದೆ.

ಇದನ್ನೂ ಓದಿ:ಕಾಲು- ಬಾಯಿ ರೋಗಕ್ಕೆ ಲಸಿಕೆಯೇ ಪರಿಹಾರ: ಸಚಿವ ಪ್ರಭು ಚವ್ಹಾಣ್

Advertisement

ಅಗತ್ಯ ಕ್ರಮ ಕೈಗೊಳ್ಳಲಾಗುವುದು
ಬೀದಿ ನಾಯಿಗಳ  ಉಪಟಳ ಕುರಿತು ಪಶುವೈದ್ಯಕೀಯ ಇಲಾಖೆಯ ಎಡಿಒ ಜತೆ  ಮಾತನಾಡಿದ್ದೇನೆ. ಗ್ರಾ.ಪಂ. ವ್ಯಾಪ್ತಿಯಲ್ಲಿ  ಸಂತಾನ ಶಕ್ತಿಹರಣ ಶಸ್ತ್ರ ಚಿಕಿತ್ಸೆ  ನಡೆಸಿ ನಿಯಂತ್ರಿಸಬೇಕಿದೆ.  ಟೆಂಡರ್‌ ಪ್ರಕ್ರಿಯೆ  ನಡೆಯಬೇಕು. ಆರ್ಥಿಕ ಸಮಸ್ಯೆಯೂ ಇದೆ. ಗಂಭೀರ ಸಮಸ್ಯೆಗಳಿರುವಲ್ಲಿ   ಮೊದಲು ಆದ್ಯತೆ ನೀಡಿ ಅದರ ಅನುಸಾರ ಇತರೆಡೆಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
-ಗುರುದತ್ತ್, ತಾ.ಪಂ. ಇಒ ಕಾರ್ಕಳ

ಟೆಂಡರ್‌ ಪ್ರಕ್ರಿಯೆ
ಬೀದಿ ನಾಯಿಗಳಿಗೆ ಸಂತಾನ ಶಕ್ತಿ ಹರಣ ನಡೆಸುವುದು ಹೊರತು ಪಡಿಸಿ ಅನ್ಯ ದಾರಿಯಿಲ್ಲ.  ಇದಕ್ಕೆ ಸಂಬಂಧಿಸಿ ಟೆಂಡರ್‌ ಪ್ರಕ್ರಿಯೆ ಹಂತದಲ್ಲಿದೆ.
-ರೂಪಾ ಶೆಟ್ಟಿ,  ಮುಖ್ಯಾಧಿಕಾರಿ ಪುರಸಭೆ

Advertisement

Udayavani is now on Telegram. Click here to join our channel and stay updated with the latest news.

Next