Advertisement
ಈದು ಗ್ರಾಮದಲ್ಲಿ ಶತಮಾನ ಆಚರಿಸಿದ ಪ್ರಾಥಮಿಕ ಮತ್ತು ಪ್ರೌಢಶಾಲೆ ಇದೆ. ಇಲ್ಲಿನ ಎಲ್ಕೆಜಿಯಲ್ಲಿ 35, ಯುಕೆಜಿಯಲ್ಲಿ 12, ಪ್ರಾಥಮಿಕ ಶಾಲೆಯಲ್ಲಿ 299, ಪ್ರೌಢ ಶಾಲೆಯಲ್ಲಿ 150 ವಿದ್ಯಾರ್ಥಿಗಳಿದ್ದಾರೆ. ಪ್ರತೀ ವರ್ಷ ಎಸೆಸೆಲ್ಸಿಯಲ್ಲಿ 60ರಿಂದ 80 ವಿದ್ಯಾರ್ಥಿಗಳು ತೇರ್ಗಡೆಯಾಗುತ್ತಿದ್ದಾರೆ. ಅವರಿಗೆ ಮುಂದೆ ಶಿಕ್ಷಣ ಪಡೆಯುವ ಸರಿಯಾದ ವ್ಯವಸ್ಥೆ ಇಲ್ಲಿಲ್ಲ.
Related Articles
ಈದು ಶಾಲೆಗೆ ಬೊಳ್ಳೆಟ್ಟು, ನೂರಾಲ್ಬೆಟ್ಟು, ವರಿಮಾರು, ಈದು, ಕರಿಂದ್ಯಾಲು, ಡೊಂಕಬೆಟ್ಟು, ಬಟ್ಟೇಣಿ, ಬಟ್ಟಾಜೆ, ಬೇಂಗಾಡಿ, ಬೋರುಗುಡ್ಡೆ, ಗಂಗೆನೀರು ಹೀಗೆ ಕಾಡಂಚಿನ ಊರುಗಳಿಂದ ವಿದ್ಯಾರ್ಥಿಗಳು ಶಾಲೆಗೆ ಬರುತ್ತಾರೆ. ಇಲ್ಲಿನ ವಿದ್ಯಾರ್ಥಿಗಳು ಕಾಲೇಜಿಗೆ ಹೊಗಬೇಕು ಎಂದರೆ ಮೊದಲು ಕಾಡಂಚಿನಿಂದ ಈದುವಿಗೆ ಬರಬೇಕು, ಅಲ್ಲಿಂದ ಹೊಸ್ಮಾರಿನ ಪ್ರಧಾನ ರಸ್ತೆಗೆ ಬರಬೇಕು, ಅಲ್ಲಿಂದ ಬೆಳ್ತಂಗಡಿ, ಬಜಗೋಳಿ, ಮೂಡುಬಿದಿರೆ ಮೊದಲಾದ ಪ್ರದೇಶಕ್ಕೆ ಹೋಗಬೇಕು. ಈ ಭಾಗದಲ್ಲಿ ಬಸ್ ವ್ಯವಸ್ಥೆ ಇಲ್ಲ. ಸರ್ವಿಸ್ ರಿಕ್ಷಾ ಇಲ್ಲವೇ ಬಾಡಿಗೆ ಮಾಡಿಕೊಂಡು ಹೋಗಬೇಕು. ಹೆಚ್ಚಿನವರು ಇದನ್ನೆಲ್ಲ ಭರಿಸಲಾಗದೆ ನಡೆದುಕೊಂಡೇ ಹೋಗುವ ಪರಿಸ್ಥಿತಿ ಇದೆ. ಕಾಲೇಜಿಗೆ ಹೋಗುವ ಮಕ್ಕಳು ಒಂಟಿಯಾಗಿ ನಡೆದುಕೊಂಡು ಹೋಗಲೂ ಭಯಪಡುತ್ತಾರೆ. ಹೀಗಾಗಿ ಹಲವರ ಶಿಕ್ಷಣವೂ ಮೊಟಕುಗೊಂಡಿದೆ.
Advertisement
ಈದು ಗ್ರಾಮಕ್ಕೆ ಶೀಘ್ರದಲ್ಲಿಯೇ ಭೇಟಿ ನೀಡಲಾಗುವುದು. ಮೂಲ ಸೌಕರ್ಯ ಸಹಿತ ವಿವಿಧ ಆಡಾಳಿತಾತ್ಮಕ ಸೇವೆಗಳ ಸುಧಾರಣೆಗೆ ಒತ್ತು ನೀಡುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುತ್ತದೆ. ಕಾಲೇಜು ಪ್ರಸ್ತಾವನೆ ಬಗ್ಗೆ ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸರಕಾರದ ಗಮನಕ್ಕೆ ತರಲಾಗುವುದು.
– ಡಾ| ಕೆ. ವಿದ್ಯಾಕುಮಾರಿ, ಜಿಲ್ಲಾಧಿಕಾರಿ, ಉಡುಪಿ ಜಿಲ್ಲೆ ಪರಿಶೀಲಿಸಿ ಕ್ರಮ
ಪ್ರೌಢಶಾಲೆಯಲ್ಲಿ ಎಷ್ಟು ಮಂದಿ ಇದ್ದಾರೆ, ಸಮೀಪದ ಸರಕಾರಿ ಕಾಲೇಜಿನ ದಾಖಲಾತಿ ಪ್ರಮಾಣವನ್ನು ಪರಿಶೀಲಿಸಬೇಕು. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿಯೂ ಕೊರತೆಯಾಗಬಾರದು. ಈ ನಿಟ್ಟಿನಲ್ಲಿ ಸಾಧಕ ಬಾಧಕ ಪರಿಶೀಲಿಸಿ ಕ್ರಮ ವಹಿಸಲಾಗುವುದು. ಗ್ರಾಮದಲ್ಲಿ ಕಿರು ಸೇತುವೆ ನಿರ್ಮಾಣಕ್ಕೆ 4 ಕೋ. ರೂ. ಅನುದಾನ ಮಂಜೂರಾಗಿದ್ದು, ಟೆಂಡರ್ ಪ್ರಕ್ರಿಯೆಯಲ್ಲಿದೆ.
– ವಿ. ಸುನಿಲ್ ಕುಮಾರ್, ಶಾಸಕರು, ಕಾರ್ಕಳ ವಿಶೇಷ ಪ್ಯಾಕೇಜ್ ಬೇಕು
ಈದು ಗ್ರಾಮದ ಸಂಪೂರ್ಣ ಅಭಿವೃದ್ಧಿಗೆ ಸರಕಾರ ಮತುವರ್ಜಿ ವಹಿಸಬೇಕು. ಗ್ರಾ.ಪಂ.ಗೆ ಅನುದಾನ ಕೊರತೆಯಿಂದ ನಿರೀಕ್ಷಿತ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ. ಸರಕಾರವು ವಿಶೇಷ ಪ್ಯಾಕೇಜ್ ಘೋಷಿಸಬೇಕು. 2018 ರಿಂದ ಕಾಲೇಜು ಸ್ಥಾಪನೆಗೆ ಸರಕಾರಕ್ಕೆ ಬೇಡಿಕೆ ಇಟ್ಟಿದ್ದೇವೆ. ಇದುವರೆಗೆ ನಿರೀಕ್ಷಿತ ಸ್ಪಂದನೆ ವ್ಯಕ್ತವಾಗಿಲ್ಲ.
-ಸದಾನಂದ್ ಪೂಜಾರಿ, ಅಧ್ಯಕ್ಷರು, ಗ್ರಾ. ಪಂ. ಈದು ನಮ್ಮೂರಲ್ಲೇ ಕಾಲೇಜು ಶಿಕ್ಷಣ ಕೊಡಿ
ಈ ಗ್ರಾಮದಲ್ಲಿ ಬಹುತೇಕ ಕುಟುಂಬ ಆರ್ಥಿಕವಾಗಿ ಸದೃಢರಲ್ಲ. ಕೃಷಿ ಮತ್ತು ಕೃಷಿ ಕೂಲಿ ಮಾಡಿಕೊಂಡು ಬದುಕುವರು. ಮಕ್ಕಳ ಶಿಕ್ಷಣಕ್ಕಾಗಿ ಸರಕಾರಿ ವ್ಯವಸ್ಥೆಯನ್ನೇ ನಂಬಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಸರಕಾರಿ ಪ.ಪೂ. ಶಿಕ್ಷಣಕ್ಕೆ ದೂರದ ಮೂಡು ಬಿದಿರೆ, ಬಜಗೋಳಿ ಇಲ್ಲಿನ ಮಕ್ಕಳು ನಿತ್ಯ ಓಡಾಡುವುದು ಕಷ್ಟ. ಬಸ್ನಲ್ಲಿ ಓಡಾ ಟಕ್ಕೆ ಸಮಯ, ಟಿಕೆಟ್ ಖರ್ಚಿನ ಆರ್ಥಿಕ ಹೊರೆ ಹೊರಲು ಕಷ್ಟವಾಗುತ್ತಿದೆ. ಹೀಗಾಗಿ ನಮ್ಮೂರಲ್ಲೆ ಕಾಲೇಜು ಶಿಕ್ಷಣ ನೀಡಿದರೆ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಅನುಕೂಲ ಎನ್ನುತ್ತಾರೆ ಇಲ್ಲಿನ ಸ್ಥಳೀಯರು. -ಅವಿನ್ ಶೆಟ್ಟಿ