Advertisement
ಸಹಸ್ರ ಕಂಠಗಳ ಶಂಖನಾದದ ಮೂಲಕ ಭಿನ್ನ, ವೈಶಿಷ್ಟ್ಯಪೂರ್ಣ ವೈದಿಕ ಸಂಪ್ರದಾಯದಂತೆ ನಡೆಯಲಿದೆ. ತಾನು ಸುಟ್ಟು ಇತರರಿಗೆ ಬೆಳಕನ್ನು ನೀಡುವ ದೀಪ ಪ್ರಜ್ವಲನ, ಸಸಿ ನೆಡುವುದು ಇತ್ಯಾದಿಗಳಿಂದ ಶುಭ ಕಾರ್ಯಗಳಿಗೆ ಚಾಲನೆ ನೀಡುವುದು ಸಾಮಾನ್ಯ ರೂಢಿಯಾಗಿದೆ. ಜ.27ರ ಪರಶು ರಾಮನ ಪ್ರತಿಮೆ ಲೋಕಾರ್ಪಣೆ ವೇಳೆ ಇದಕ್ಕೆ ಇತಿಶ್ರೀ ಹಾಡಲಾಗಿದೆ.
ಶೋಭಿಸುತ್ತಲಿರುತ್ತದೆ.
Related Articles
Advertisement
ರೋಗಾಣುಗಳು ನಾಶಶಂಖನಾದದಿಂದ ವಾತಾವರಣದಲ್ಲಿರುವ ರೋಗಾಣುಗಳೊಂದಿಗೆ ನಕಾರಾತ್ಮಕ ಅಂಶಗಳು ನಾಶವಾಗುತ್ತೆ. ಶಂಖನಾದಕ್ಕೆ ಚಿಕಿತ್ಸಾ ಶಾಸ್ತ್ರದಲ್ಲಿ ಹಾಗೂ ಆಯುರ್ವೇದದಲ್ಲಿ ವಿಶೇಷ ಮಹತ್ವವಿದೆ. ಶ್ವಾಸಕೋಶ ಸಂಬಂಧಿ ಕಾಯಿಲೆ ದೂರವಾಗಿ ಶ್ವಾಶಕೋಶ ಗಟ್ಟಿಯಾಗುತ್ತೆ ಎನ್ನುವ ಅಂಶವಿದೆ. ಬಲಮುರಿ, ಎಡಮುರಿ ಶಂಖ
ಶಂಖವನ್ನು ಊದುವ ರೀತಿಯಲ್ಲಿ ಇಟ್ಟುಕೊಂಡಿದ್ದಾಗ ಶಂಖದ ಕಿವಿಯು ಬಲಗಡೆ ಇದ್ದರೆ ಅದು ಬಲಮುರಿ ಶಂಖ. ಶಂಖದ ಕಿವಿಯು ಎಡಬದಿಗೆ ಇದ್ದರೆ ಅದು ಎಡಮುರಿ ಶಂಖ, ಸಾಮಾನ್ಯವಾಗಿ ಬಲಮುರಿ ಶಂಖವನ್ನು ದೇವರ ಪೂಜೆಯಲ್ಲಿ ಅಭಿಷೇಕ ಮಾಡುವುದಕ್ಕೆ ಉಪಯೋಗಿಸಲಾಗುತ್ತದೆ. ಎಡಮುರಿ ಶಂಖವನ್ನು ಪೂಜೆಯ ಆರಂಭ, ಅಭಿಷೇಕ ಹಾಗೂ ಮಂಗಳಾರತಿಯ ಸಮಯಗಳಲ್ಲಿ ಊದಲು ಬಳಸುತ್ತಾರೆ. 2 ಸಾವಿರ ಮಂದಿಗೆ ಅವಕಾಶ; ಸಿಎಂ ಶಂಖನಾದದಲ್ಲಿ ಭಾಗಿ
ಬೆಟ್ಟದ ಮೂರ್ತಿಯ ಪಾದದಡಿಯಲ್ಲಿ 2 ಸಾವಿರ ಮಂದಿ ಶಂಖನಾದಗೈಯ್ಯುವವರಿಗೆ ಅವಕಾಶವಿದೆ. ಈಗಾಗಲೇ 1 ಸಾವಿರ ಮಂದಿ ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ ಸ್ಥಳೀಯರೇ ಹೆಚ್ಚಿದ್ದಾರೆ. ಹಿರಿಯ ನಾಗರಿಕರೂ ಸೇರಿ ಭಜನತಂಡದ ಸದಸ್ಯರು ಇದರಲ್ಲಿ ಸೇರಿದ್ದಾರೆ. ಹೊರಭಾಗದಿಂದಲೂ ಮತ್ತಷ್ಟೂ ಮಂದಿ ಹೆಸರು ನೋಂದಾಯಿಸಿಕೊಳ್ಳಲು ಸಂಪರ್ಕ ಮಾಡುತ್ತಿದ್ದಾರೆ. ಶಂಖನಾದದಲ್ಲಿ ಸಿಎಂ ಕೂಡ ಭಾಗಿಯಾಗಲಿದ್ದಾರೆ. 220 ಭಜನ ತಂಡ ನೋಂದಣಿ
ಜ.28ರಂದು ಭಜನೆ ಕೀರ್ತನೆ ಮೆರವಣಿಗೆಯೂ ಇರಲಿದೆ. 250ಕ್ಕೂ ಅಧಿಕ ಸ್ಥಳೀಯ ಹಾಗೂ ಜಿಲ್ಲೆ, ಹೊರಜಿಲ್ಲೆಗಳ ಭಜನ ತಂಡಗಳು ಭಾಗವಹಿಸುತ್ತಿವೆ. 220 ತಂಡಗಳು ಹೆಸರು ನೋಂದಾಯಿಸಿ ಕೊಂಡಿವೆ. ಶಂಖದಿಂದ ಏಕಾಗ್ರತೆ
ಶಂಖದಿಂದ ಬರುವ ನಾದವು ಸ್ವಾರಸ್ಯಕರ. ಹೇಗೆಂದರೆ ಕಂಪಿತಗೊಂಡ ಊದಿದ ಉಸಿರು ಶಂಖದ ಒಳಗಿನ ಮತ್ತು ಬಳಸಿದ ಪಥದಲ್ಲಿ ಚಲಿಸಿ ಏಕಕಂಪನದಿಂದ ಮಾಧುರ್ಯತೆ ತುಂಬಿ ಹೊರಬರುತ್ತದೆ. ಮನಸ್ಸಿನ ಏಕಾಗ್ರತೆ ಅದು ಕಾರಣವಾಗುತ್ತದೆ. ಸಂಗೀತ ಪ್ರಪಂಚದಲ್ಲಿಯೂ ಶಂಖವನ್ನು ಒಂದು ವಾಯುವಾದ್ಯವೆಂದು ಪರಿಗಣಿಸಲಾಗಿದೆ. ಶಂಖನಾದ ಊದುವ ಅಭ್ಯಾಸದಿಂದ ಉಸಿರಿನ ಮೇಲೆ ಹತೋಟಿ ಸಾಧ್ಯ. ಬಾರಕೂರಿನ ಯುವಕನ ಶಂಖನಾದ
ಪರಶುರಾಮ ಲೋಕಾರ್ಪಣೆಯ ಶಂಖನಾದ ಕಾರ್ಯಕ್ರಮದಲ್ಲಿ ನಿರಂತರ 10ರಿಂದ 15 ನಿಮಿಷ ಕಾಲ ಶಂಖ ಊದುವ ಬಾರಕೂರಿನ ಮಂಜುನಾಥ ಆಚಾರ್ಯ ಎಂಬ ಯುವಕ ಭಾಗವಹಿಸುತ್ತಿದ್ದಾರೆ. ಶಂಖ ನಾದದಿಂದ ಧೈರ್ಯ, ಆತ್ಮವಿಶ್ವಾಸ ಮುಂತಾದ ಸಕಾರಾತ್ಮಕ ಗುಣಗಳು ಮೈಗೂಡುತ್ತವೆ ಎನ್ನುವುದು ವೈಜ್ಞಾನಿಕ ಸಂಶೋಧನೆಗಳಿಂದ ಸತ್ಯವಾಗಿದೆ. ಹಲವಾರು ವೈಶಿಷ್ಟ್ಯತೆಗಳನ್ನು ಶಂಖನಾದ ಹೊಂದಿದೆ ಈ ಕಾರಣಕ್ಕೆ ಜೋಡಿಸಿಕೊಂಡಿದ್ದೇವೆ.
-ವಿ.ಸುನಿಲ್‌ಕುಮಾರ್, ಸಚಿವರು