Advertisement
ಕಸಬಾ ಗ್ರಾಮದ ಬಾಲಚಂದ್ರ ಅವರು ಆಕ್ಸಿಸ್ ಬ್ಯಾಂಕ್ ಹಾಗೂ ಎಚ್‌ಡಿಎಫ್ಸಿ ಬ್ಯಾಂಕಿನಲ್ಲಿ ಕ್ರೆಡಿಟ್ ಕಾರ್ಡ್ ಹೊಂದಿದ್ದರು. ಸೆ. 30ರಂದು ಅವರಿಗೆ ಮನುಜ್ ಶರ್ಮಾ ಎನ್ನುವವರು ಕರೆ ಮಾಡಿ ಎಚ್‌ಡಿಎಫ್ಸಿ ಬ್ಯಾಂಕ್ ಸಮಸ್ಯೆಯನ್ನು ನಿವಾರಿಸುವುದಕ್ಕಾಗಿ ಕರೆ ಮಾಡಿರುವುದಾಗಿ ತಿಳಿಸಿದ್ದರು. ಮನುಜ್ ಶರ್ಮಾ, ಬಾಲಚಂದ್ರ ಅವರಿಂದ ಆಕ್ಸಿಸ್ ಹಾಗೂ ಎಚ್‌ಡಿಎಫ್ಸಿ ಬ್ಯಾಂಕಿನ ವಿವರಗಳನ್ನು ಪಡೆದು ಅನಂತರ ಒಟಿಪಿ ಪಡೆದಿದ್ದಾರೆ. ಅ. 1ರಂದು ಸಂಜೆ 4 ಗಂಟೆಯಿಂದ 6.30ರ ಮಧ್ಯಾವಧಿಯಲ್ಲಿ ಬಾಲಚಂದ್ರ ಅವರ ಖಾತೆಯ ಎರಡು ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್ ಮೂಲಕ 76,188 ರೂ. ಕಡಿತವಾಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Advertisement
Karkala: ಬ್ಯಾಂಕ್ ಸಮಸ್ಯೆ ಪರಿಹಾರ ನೆಪದಲ್ಲಿ ಒಟಿಪಿ ಪಡೆದು ವಂಚನೆ
07:24 PM Oct 03, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.