Advertisement

ಕಾರ್ಕಳ: ಅರಣ್ಯ ಇಲಾಖೆಯಿಂದ 45 ಸಾವಿರ ಗಿಡಗಳ ವಿತರಣೆ

11:13 PM Jul 28, 2019 | sudhir |

ಕಾರ್ಕಳ: ಅರಣ್ಯ ಇಲಾಖೆ ಕಾರ್ಕಳ ಪ್ರಾದೇಶಿಕ ವಲಯ ಇದರ ವತಿಯಿಂದ ಕಾರ್ಕಳ ತಾಲೂಕಿನಾದ್ಯಂತ ವಿವಿಧ ಬಗೆಯ ಸುಮಾರು 45 ಸಾವಿರ ಗಿಡಗಳನ್ನು ವಿತರಣೆ ಮಾಡಲಾಗಿದೆ.

Advertisement

ಸಾಗುವಾನಿ, ಹಲಸು, ಹೆಬ್ಬಲಸು, ಪುನರ್‌ಪುಳಿ, ರಕ್ತಚಂದನ, ಹೊನ್ನ, ಮಾವು, ರೆಂಜಾ, ರಾಮಪತ್ರೆ ಸೇರಿದಂತೆ ಇನ್ನಿತರ ಜಾತಿಯ ಗಿಡಗಳನ್ನು ತಾಲೂಕಿನ ಸಂಘ-ಸಂಸ್ಥೆ, ಗ್ರಾಮ ಪಂಚಾಯತ್‌ ಮೂಲಕ ನೆಡಲಾಗಿದೆ.

ತಾಲೂಕಿನ 34 ಗ್ರಾಮ ಪಂಚಾಯತ್‌ಗಳಿಗೆ ತಲಾ 350 ಗಿಡಗಳು ವಿತರಣೆ ಯಾಗಿವೆ. ತಾ.ಪಂ. ಬಳಿ ನಡೆದ ಪರಿಸರ ಉತ್ಸವದಂದು ಒಂದೇ ದಿನ ಸುಮಾರು 10 ಸಾವಿರ ಗಿಡಗಳ ವಿತರಣೆ ಮಾಡಲಾಗಿದೆ. ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿಯಲ್ಲೂ ಸಾಕಷ್ಟು ರೈತರು ಗಿಡ ಪಡೆದಿರುತ್ತಾರೆ.

ಶಾಲಾ ವಠಾರ
ತಾಲೂಕಿನ ಹಿರ್ಗಾನ, ಅಜೆಕಾರು, ಮಿಯ್ನಾರು, ಬೈಲೂರು ಸೇರಿದಂತೆ ಒಟ್ಟು 18 ಶಾಲೆಗಳ ವಠಾರದಲ್ಲಿ ವನ ಮಹೋತ್ಸವ/ ಹಸಿರು ಕರ್ನಾಟಕ ಯೋಜನೆಯಡಿ ಗಿಡಗಳನ್ನು ನೆಡಲಾಗಿದೆ.

ಪುರಸಭಾ ವ್ಯಾಪ್ತಿ
ಕಾರ್ಕಳ ಪುರಸಭಾ ವ್ಯಾಪ್ತಿಯ ವಿವಿಧೆಡೆ ಸುಮಾರು 1,800 ಗಿಡಗಳನ್ನು, ಪುರಸಭಾ ರಸ್ತೆ ಬದಿಯಲ್ಲಿ 1,200 ಗಿಡಗಳನ್ನು ನೆಡಲಾಗಿದೆ.
ಕುಕ್ಕುಂದೂರು, ಅಜೆಕಾರು, ಶಿರ್ಲಾಲು, ಮುನಿಯಾಲು, ಕೆರ್ವಾಶೆ ಪ್ರದೇಶಗಳಲ್ಲಿ ಬೆತ್ತ, ಬಿದಿರು, ಹಲಸು, ಧೂಪ, ಮಹಗನಿ ಮತ್ತು ವಿವಿಧ ಜಾತಿಯ ಸುಮಾರು 22 ಸಾವಿರ ಗಿಡಗಳನ್ನು ಅರಣ್ಯ ಪ್ರದೇಶಗಳಲ್ಲಿ ನಾಟಿ ಮಾಡಲಾಗಿದೆ.

Advertisement

ಹಸಿರು ಕಾರ್ಕಳ ಕಲ್ಪನೆಯನ್ನು ಸಾಕಾರ ಗೊಳಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಸುಮಾರು 45 ಸಾವಿರ ಗಿಡಗಳನ್ನು ನೆಡಲಾಗಿದೆ. ಕಾರ್ಕಳ ಪರಿಸರದಲ್ಲಿ ಅಂತರ್ಜಲ ಕುಸಿತಗೊಂಡಿದ್ದು ಆತಂಕಕಾರಿ. ಈ ನಿಟ್ಟಿನಲ್ಲಿ ಗಿಡ ಪೋಷಿಸಿ, ಉಳಿಸಲು ಸಾರ್ವಜನಿಕರ ಸಹಕಾರ ಅಗತ್ಯ ಎಂದು ಕಾರ್ಕಳ ವಲಯ ಅರಣ್ಯಾಧಿಕಾರಿ ದಿನೇಶ್‌ ಜಿ.ಡಿ. ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next