Advertisement

Karkala; ಕಾರ್ಕಳ- ಮತದಾರರ ಮನೆ-ಮನ ತಟ್ಟಿದ ಬಿಜೆಪಿಯ ಅಭಿಯಾನ

12:57 PM May 01, 2023 | Team Udayavani |

ಕಾರ್ಕಳ: ಬಿಜೆಪಿ ವತಿಯಿಂದ ವಿಶೇಷ ಮಹಾಪ್ರಚಾರ ಅಭಿಯಾನ ಕಾರ್ಕಳ ವಿಧಾನ ಸಭಾ ಕ್ಷೇತ್ರದಾದ್ಯಂತ ರವಿವಾರ ನಡೆಯಿತು. ಸಹಸ್ರಾರು ಕಾರ್ಯಕರ್ತರು ಮತ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು.

Advertisement

ಪ್ರತಿ ಬೂತ್‌ನಲ್ಲಿ 100 ಮಂದಿ ಭಾಗಿ ಕಾರ್ಕಳ, ಹೆಬ್ರಿ ತಾ|ಗಳ 34 ಗ್ರಾ.ಪಂ ವ್ಯಾಪ್ತಿಯ 209 ಬೂತ್‌ಗಳ ಪ್ರತಿ ಬೂತ್‌ಗಳಲ್ಲಿ 75ರಿಂದ 100 ಮಂದಿ ಕಾರ್ಯಕರ್ತರು ಸೇರಿ 10 ಸಾವಿರಕ್ಕೂ ಅಧಿಕ ಮಂದಿ ಬಿಜೆಪಿ ಕಾರ್ಯಕರ್ತರು ಪ್ರಚಾರ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

ಸುನಿಲ್‌ರ ಅಭಿವೃದ್ಧಿ ಬಗ್ಗೆ ಕಾರ್ಯಕರ್ತರಿಂದ ವಿವರಣೆ;  
ಕ್ಷೇತ್ರದ ಪ್ರತಿ ಮನೆಗಳಿಗೆ ತೆರಳಿದ ಕಾರ್ಯಕರ್ತರು ಕೇಂದ್ರ, ರಾಜ್ಯ ಬಿಜೆಪಿ ಸರಕಾರದ ಸಾಧನೆ, ಕ್ಷೇತ್ರದಲ್ಲಿ ಶಾಸಕ, ಸಚಿವ ವಿ. ಸುನಿಲ್‌ಕುಮಾರ್‌ರರು ಕಳೆದ 5 ವರ್ಷಗಳಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮತದಾರರಿಗೆ ತಿಳಿಸಿದರು. ಮುಳಗು ಸೇತುವೆಗಳಿಗೆ ಮುಕ್ತಿ, ನಗರ- ಹಳ್ಳಿಗಳ ರಸ್ತೆ ಅಭಿವೃದ್ಧಿ, ಕುಡಿಯುವ ನೀರು, ಅಂತರ್ಜಲ ಮಟ್ಟ ಏರಿಕೆಗೆ 209 ಕಿಂಡಿ ಅಣೆಕಟ್ಟು, ಆಸ್ಪತ್ರೆಯಲ್ಲಿ ಐಸಿಯು, ಮಕ್ಕಳ ಐಸಿಯು ಘಟಕ, ಕೊರೊನಾದ ಆರೋಗ್ಯ ನಿರ್ವಹಣೆ, ಮಕ್ಕಳ ಕಲಿಕೆಗೆ ಮಗ್ಗಿ ಪುಸ್ತಕ ವಿತರಣೆ, ವಾತ್ಸಲ್ಯ ಯೋಜನೆಯಡಿ ಮಕ್ಕಳ ಆರೋಗ್ಯ ತಪಾಸಣೆ, ಶಾಲಾ ಕಟ್ಟಡ ಉನ್ನತೀಕರಣ, ಐಟಿಐ ಕಾಲೇಜು, ಜರ್ಮನ್‌ ತಾಂತ್ರಿಕ ತರಬೇತಿ ಸಂಸ್ಥೆ, ಯಕ್ಷರಂಗಾಯಣ, ಸ್ವರ್ಣ ನದಿಗೆ ಅಣೆಕಟ್ಟು, 25 ಸಾವಿರ ಇಂಗುಗುಂಡಿ ನಿರ್ಮಾಣ, ಮೊರಾರ್ಜಿ, ವಸತಿ ಶಾಲೆ, ಪಾಲಿಟೆಕ್ನಿಕ್‌ ಕಾಲೇಜು, ಶಿಕ್ಷಣ, ಉದ್ಯೋಗಕ್ಕೆ ಒತ್ತು ನೀಡಿದ ಬಗೆ ಹಾಗೂ ಬಡವರಿಗೆ 94 ಸಿ. 94ಸಿಸಿ,ಯಲ್ಲಿ ಹಕ್ಕುಪತ್ರ ವಿತರಣೆ, ಸರಕಾರಿ ಕಟ್ಟಡಗಳ ಆಧುನೀಕರಣ, ಸಮುದಾಯ ಭವನ ನಿರ್ಮಾಣ, ದೈವ ದೇವಸ್ಥಾನಗಳ ಅಭಿವೃದ್ಧಿಗೆ ಅನುದಾನ, ಕಾರ್ಕಳ ಉತ್ಸವ, ಪರಶುರಾಮ ಥೀಂ ಪಾರ್ಕ್‌, ಪಾರ್ಕ್‌ಗಳ ನಿರ್ಮಾಣ ಕೆರೆಗಳಅಭಿವೃದ್ಧಿಗಳ ಹೀಗೆ ಸಮಗ್ರ ಮಾಹಿತಿಯನ್ನು ನೀಡಿ ವಿ.ಸುನಿಲ್‌ಕುಮಾರ್‌ ಅವರನ್ನು ಬೆಂಬಲಿಸುವಂತೆ ತಿಳಿಸಿದರು.

ಕಾಂಗ್ರೆಸ್ಸಿನ ಸುಳ್ಳು ಗ್ಯಾರಂಟಿ ಕಾರ್ಡ್‌ ಬಗ್ಗೆ ಜನ ನಂಬದಂತೆ. ಅವರ ಅಪಪ್ರಚಾರಗಳಿಗೆ ಕಿವಿಗೊಡದೆ ಅಭಿವೃದ್ಧಿಯನ್ನು ಬೆಂಬಲಿಸುವಂತೆ ಹೇಳಲಾಯಿತು.

ಬಿಸಿಲ ಧಗೆಗೆ ಉತ್ಸಾಹದ ಬಗೆ ಹೀಗಿತ್ತು.
ಪಕ್ಷದ ಹಿರಿಯ ಮುಖಂಡರು, ಮಹಾಶಕ್ತಿ ಕೇಂದ್ರದ ನಾಯಕರು, ಪದಾಧಿಕಾರಿಗಳು, ಬೂತ್‌, ವಾರ್ಡ್‌ ಮಟ್ಟದ ಪಧಾಧಿಕಾರಿಗಳು, ಮಹಿಳಾ ಮೋರ್ಚಾ, ಯುವ ಮೋರ್ಚಾ ಹೀಗೆ ಹಿರಿಯರು, ಮಹಿಳೆಯರು, ಕಿರಿಯರೂ ಎಲ್ಲರೂ ಅಭಿಯಾನದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ವೃದ್ಧರೂ ಕೂಡ ಮನೆಮನೆಗೆ ತೆರಳುತಿದ್ದುದು ಕಂಡುಬಂತು.

Advertisement

ಬೆಳಗ್ಗೆ 7.30ಕ್ಕೆ ಏಕಕಕಾಲದಲ್ಲಿ ಚಾಲನೆ ನೀಡಲಾಯಿತು. ಕೇಸರಿ ಶಾಲು ಹಾಕಿ, ಟೋಪಿ ಧರಿಸಿ ಮನೆಮನೆಗೆ ಉತ್ಸಾಹದಿಂದ ತೆರಳಿದರು. ಬಿಸಿಲಿನ ಬೇಗೆಗೆ ಮೈಯೊಡ್ಡಿ ನೀರು, ಮಜ್ಜಿಗೆ, ತಂಪುಪಾನೀಯಗಳನ್ನು ಕುಡಿದು ಬಾಯಾರಿಸಿಕೊಳ್ಳುತ್ತಲೆ ಉತ್ಸಾಹದಿಂದ ಒಂದು ಮನೆ ದಾಟಿ ಮತ್ತೂಂದು ಮನೆ ದಾಟುತ್ತಿದ್ದರು. ಅಭ್ಯರ್ಥಿ ಸುನಿಲ್‌ ಪ್ರಚಾರದಲ್ಲಿ ಪಾಲ್ಗೊಂಡಿದ್ದರು.

ಕಾಂಗ್ರೆಸ್‌ ಜಾತಿ, ಅಪಪ್ರಚಾರದ -ಪ್ರಚಾರ: ಮಣಿರಾಜ್‌ ಶೆಟ್ಟಿ
ಕಾರ್ಕಳ: ಜನಸಾಮಾನ್ಯರ ಸಮಗ್ರ ಅಭಿವೃದ್ಧಿಗೆ ಶಾಸಕ, ಸಚಿವ ವಿ. ಸುನಿಲ್‌ಕುಮಾರ್‌ ಪೂರಕ ಆಡಳಿತ ನೀಡಿದ್ದರು. ಸರ್ವ ವ್ಯಾಪಿ, ಸರ್ವ ಸ್ಪರ್ಶಿ ಯೋಜನೆಗಳನ್ನು ಕಾರ್ಕಳಕ್ಕೆ ತಂದು ಎಲ್ಲ ಜಾತಿ, ಸಮುದಾಯದ ಜನರ ಮೆಚ್ಚುಗೆಗೆ ಕಾರಣರಾಗಿದ್ದಾರೆ.

ಬಿಜೆಪಿಯದು ಹಿಂದುತ್ವ, ಅಭಿವೃದ್ಧಿ ಅಜೆಂಡಾ ಆಗಿದ್ದರೆ, ಕಾಂಗ್ರೆಸ್ಸಿಗರು ಜಾತಿ ಮತ್ತು ಅಪಪ್ರಚಾರವಾಗಿದೆ. ಕ್ಷೇತ್ರದ ಜನ ಕ್ಷೇತ್ರದಲ್ಲಿ ಆದ ವಾಸ್ತವ ಬದಲಾವಣೆಗಳನ್ನು ಅರಿತು ಬಿಜೆಪಿ ಅಭ್ಯರ್ಥಿ ವಿ. ಸುನಿಲ್‌ರನ್ನು ಬೆಂಬಲಿಸುವಂತೆ ಮಣಿರಾಜ್‌ ಶೆಟ್ಟಿ ಕರೆ ನೀಡಿದರು.

ಕೈರಬೆಟ್ಟುವಿನಲ್ಲಿ ಮತ ಯಾಅವರು ಕ್ಷೇತ್ರದ ಜನರ ಆಶೋತ್ತರಗಳಿಗೆ ಸುನಿಲ್‌ ಸ್ಪಂದಿಸಿದ್ದಾರೆ. ಕಾರ್ಕಳದ ಹೆಸರು ವಿಶ್ವಕ್ಕೆ ವಿಸ್ತರಿಸಿದೆ. ಅವರ ಅಭಿವೃದ್ಧಿ ಕೆಲಗಳನ್ನು ಕ್ಷೇತ್ರದ ಜನರಷ್ಟೆ ಅಲ್ಲ ಇಡೀ ನಾಡು ಕೊಂಡಾಡುತ್ತಿದೆ. ಆದರೇ ಇಲ್ಲಿನ ಕಾಂಗ್ರೆಸ್‌ ಅಪಪ್ರಚಾರದಲ್ಲಿ ತೊಡಗಿದೆ. ಜಾತಿ ಆಧಾರದಲ್ಲಿ ವಿಭಜಿಸಲು ಪ್ರಯತ್ನಿಸುತ್ತಿದೆ.

ಸುನಿಲ್‌ರವರ ದೂರದೃಷ್ಟಿಯ ಯೋಜನೆಗಳಿಂದ ಸ್ವರ್ಣ ಕಾರ್ಕಳದ ಕಲ್ಪನೆ ಸಾಕಾರಗೊಳ್ಳುತ್ತಿದೆ. ಅಂತಹ ಹೊಸತನ ಸೃಷ್ಟಿಸುವ. ಸರ್ವ ಸಮುದಾಯದ ಅಭಿವೃದ್ಧಿಗೆ ಶ್ರಮಿಸುವ ಅಭ್ಯರ್ಥಿಗೆ ಎಲ್ಲರ ಬೆಂಬಲ ಅಗತ್ಯ. ಕ್ಷೇತ್ರದಲ್ಲಿ ಈ ವರೆಗೂ ಕಾಣದ ಕಾಂಗ್ರೆಸ್‌ ಈಗ ಜಾತಿ, ಅಪಪ್ರಚಾರ ಹೆಸರಿನಲ್ಲಿ ಮನೆಬಾಗಿಲು ಬಡಿಯುತ್ತಿದೆ ಎಂದು ದೂರಿದರು. ವಿ.ಸುನಿಲ್‌ಕುಮಾರ್‌, ಇತರೆ ಮುಖಂಡರು ಹಲವು ಮುಖಂಡರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next